
ಚಿಕ್ಕಬಳ್ಳಾಪುರ (ಸೆ.26) : ರಾಜ್ಯದಲ್ಲಿನ ನಗರಸಭೆ, ಪುರಸಭೆ, ಪಪಂ ಹಾಗೂ ಮಹಾನಗರ ಪಾಲಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 11,333 ಪೌರ ಕಾರ್ಮಿಕರನ್ನು ಕಾಯಂಗೊಳಿಸುವ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 159 ಪೌರ ಕಾರ್ಮಿಕರಿಗೆ ಖಾಯಂ ಭಾಗ್ಯ ಸಿಗಲಿದೆ. ಜಿಲ್ಲೆಯಲ್ಲಿ ಒಟ್ಟು 3,37 ಪೌರ ಕಾರ್ಮಿಕರು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಕಾರ್ಯನಿರ್ವಹಿಸುತ್ತಿದ್ದು ಆ ಪೈಕಿ ಕೇವಲ 160 ಮಂದಿ ಮಾತ್ರ ಕಾಯಂ ಪೌರ ಕಾರ್ಮಿಕರಿದ್ದರೆ ಉಳಿದಂತೆ 159 ಮಂದಿ ನೇರ ಪಾವತಿಯಡಿ ಕೆಲಸ ಮಾಡುತ್ತಿದ್ದರೆ ಉಳಿದ 18 ಮಂದಿ ದಿನಗೂಲಿ ಕ್ಷೇಮಾಭಿವೃದ್ದಿ ಹಾಗೂ ಸಮಾನ ಕೆಲಸಕ್ಕೆ ಸಮಾನ ವೇತನದಡಿ ಕಾರ್ಯನಿರ್ವಹಿಸುತ್ತಿದ್ದಾರೆ.
40 ಸಾವಿರ ಪೌರ ಕಾರ್ಮಿಕರನ್ನು ಕಾಯಂ ಮಾಡಲು ಚಿಂತನೆ: ಶಿವಣ್ಣ
11,333 ಮಂದಿ ನೌಕರರು ಕಾಯಂ
ಇತ್ತೀಚೆಗೆ ರಾಜ್ಯದಲ್ಲಿ ಗುತ್ತಿಗೆ, ಹೊರ ಗುತ್ತಿಗೆ ಸೇರಿದಂತೆ ನೇರ ಪಾವತಿ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರನ್ನು ಕಾಯಂಗೊಳಿಸಬೇಕೆಂದು ಪೌರ ಕಾರ್ಮಿಕ ಸಂಘಟನೆಗಳು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ, ಮುಷ್ಕರ ನಡೆಸಿ ಸರ್ಕಾರದ ಗಮನ ಸೆಳೆದಿದ್ದವು. ಅಲ್ಲದೇ ರಾಜ್ಯ ಸಫಾಯಿ ಕರ್ಮಚಾರಿ ಆಯೋಗ ಕೂಡ ಪೌರ ಕಾರ್ಮಿಕರ ಪರ ನಿಂತು ಅವರನ್ನು ಕಾಯಂಗೊಳಿಸುವುದರ ಜೊತೆಗೆ ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಸರ್ಕಾರದ ಮೇಲೆ ಒತ್ತಡ ತಂದ ಪರಿಣಾಮ ಕಳೆದ ಸೆ.19 ರಂದು ರಾಜ್ಯ ಸಚಿವ ಸಂಪುಟ 11,333 ಮಂದಿ ಪೌರ ಕಾರ್ಮಿಕರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ ಅವರನ್ನು ಖಾಯಂಗೊಳಿಸುವ ನಿರ್ಧಾರ ತೆಗೆದುಕೊಂಡಿತು.
ಜಿಲ್ಲೆಯಲ್ಲಿ 337 ಪೌರ ಕಾರ್ಮಿಕರು:
ಜಿಲ್ಲೆಯಲ್ಲಿ ಒಟ್ಟು 337 ಮಂದಿ ಪೌರ ಕಾರ್ಮಿಕರು ಇದ್ದು ಆ ಪೈಕಿ ಚಿಕ್ಕಬಳ್ಳಾಪುರ ನಗರಸಭೆಯಲ್ಲಿ 36 ಕಾಯಂ, 46 ನೇರ ಪಾವತಿ, ಚಿಂತಾಮಣಿ ನಗರಸಭೆ ವ್ಯಾಪ್ತಿಯಲ್ಲಿ 35 ಕಾಯಂ ಹಾಗೂ 40 ನೇರ ಪಾವತಿ, ಶಿಡ್ಲಘಟ್ಟನಗರಸಭೆಯಲ್ಲಿ 29 ಖಾಯಂ ಹಾಗೂ 34 ನೇರ ಪಾವತಿ, ಗೌರಿಬಿದನೂರು ನಗರಸಭೆಯಲ್ಲಿ 31 ಖಾಯಂ ಪೌರ ಕಾರ್ಮಿಕರು ಇದ್ದರೆ 21 ಮಂದಿ ನೇರ ಪಾವತಿ ಕಾರ್ಮಿಕರು ಇದ್ದಾರೆ. ಉಳಿದಂತೆ ಬಾಗೇಪಲ್ಲಿ ಪುರಸಭೆಯಲ್ಲಿ 23 ಮಂದಿ ಖಾಯಂ ಪೌರ ಕಾರ್ಮಿಕರು ಇದ್ದರೆ ನೇರ ಪಾವತಿಯಡಿ 18 ಮಂದಿ ಇದ್ದಾರೆ.
ಗುಡಿಬಂಡೆ ಪಟ್ಟಣ ಪಂಚಾಯಿತಿಯಲ್ಲಿ ಕೇವಲ 6 ಮಂದಿ ಕಾಯಂ ಪೌರ ಕಾರ್ಮಿಕರು ಇದ್ದಾರೆ. ದಿನಗೂಲಿ, ಸಮಾನ ಕೆಲಸಕ್ಕೆ ಸಮಾನ ವೇತನದಡಿ 18 ಮಂದಿ ಪೌರ ಕಾರ್ಮಿಕರ ಪೈಕಿ ಚಿಕ್ಕಬಳ್ಳಾಪುರ ನಗರಸಭೆ 1, ಚಿಂತಾಮಣಿ ನಗರಸಭೆ 5, ಶಿಡ್ಲಘಟ್ಟನಗರಸಭೆ 2, ಗೌರಿಬಿದನೂರು ನಗರಸಭೆ 1, ಗುಡಿಬಂಡೆ ಪಟ್ಟಣ ಪಂಚಾಯತಿಯಲ್ಲಿ ಒಟ್ಟು 9 ಮಂದಿ ಪೌರ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.
Chikkamagaluru: ಆರು ಸಾವಿರ ಪೌರ ಕಾರ್ಮಿಕರ ಕಾಯಂಗೆ ಕ್ರಮ
ಸ್ಥಳೀಯ ಸಂಸ್ಥೆ ಖಾಯಂ ಭಾಗ್ಯ