200ರ ಗಡಿ ದಾಟಿದ ಈರುಳ್ಳಿ ದರ: ತಗೊಳೋದಾ ಸುಮ್ನೆ ನೋಡೋದಾ?

By Suvarna NewsFirst Published Dec 7, 2019, 3:15 PM IST
Highlights

ಸ್ಥಳೀಯ ಈರುಳ್ಳಿ ಸಂಪೂರ್ಣ ಹಾನಿ ಹಿನ್ನಲೆಯಲ್ಲಿ ಈಜಿಪ್ಟ್‌ನಿಂದ ಈರುಳ್ಳಿ ಆಮದು| ಪ್ರತಿ ಕ್ವಿಂಟಲ್ ಈರುಳ್ಳಿಗೆ 2000 ರೂ ದರ ನಿಗದಿ| ರೈತರಿಂದ ಪ್ರತಿ ಕ್ವಿಂಟಲ್ ಗೆ 15000 ನೀಡಿ ಕೊಂಡುಕ್ಕೊಳ್ಳುವ ಏಜಂಟರು, ಹೊರಗಡೆ 20,000 ಸಾವಿರ ಬೆಲೆಗೆ ಮಾರಾಟ| ಗ್ರಾಹಕರಿಗೆ, ಬಿಡಿ ವ್ಯಾಪಾರಸ್ಥರಿಗೆ ಹೊರೆಯಾದ ಈರುಳ್ಳಿ ಬೆಲೆ|

ಧಾರವಾಡ(ಡಿ.07): ಈರುಳ್ಳಿ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಇದರಿಂದ ರೈತರಿಗೆ ಸಂತಸದ ವಿಷಯವಾದ್ರೆ, ಗ್ರಾಹಕರಿಗೆ ಮಾತ್ರ ಕಣ್ಣಲ್ಲಿ ನೀರು ಬರುತ್ತಿದೆ. ಹೌದು, ಇಂದು ಧಾರವಾಡದಲ್ಲಿ ಒಂದು ಕೆಜಿ ಈರುಳ್ಳಿ ಬರೋಬ್ಬರಿ 200 ರೂ.ಗೆ ಮಾರಾಟವಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಇಂದು ನಗರದ ಮಾರುಕಟ್ಟೆಯಲ್ಲಿ ಈರುಳ್ಳಿ ಪ್ರತಿ ಕೆಜಿಗೆ 150 ರಿಂದ 200 ರೂ ವರೆಗೆ ಮಾರಾಟವಾಗುತ್ತಿದೆ. ಬೆಲೆ ಹೆಚ್ಚಾಗಿದ್ದರಿಂದ ಗ್ರಾಹಕರು ಬೇಸರಗೊಂಡಿದ್ದಾರೆ. ಕಳೆದ ಮೂರು ತಿಂಗಳ ಹಿಂದೆ ಸುರಿದ ಧಾರಕಾರ ಮಳೆಗೆ ಜಿಲ್ಲೆಯಾದ್ಯಂತ ಈರುಳ್ಳಿ ಬೆಳೆಹೆ ಹಾನಿಯಾಗಿದೆ. ಹೀಗಾಗಿ ಈರುಳ್ಳಿ ಬೆಲೆ ಗಗನಕ್ಕೇರುತ್ತಿದೆ. 

ಧಾರವಾಡ ಎಪಿಎಂಸಿ ಮಾರ್ಕೆಟ್‌ಗೆ ಬಂತು ಈಜಿಪ್ಟ್ ಈರುಳ್ಳಿ

ಸ್ಥಳೀಯ ಈರುಳ್ಳಿ ಸಂಪೂರ್ಣ ಹಾನಿ ಹಿನ್ನಲೆಯಲ್ಲಿ ಈಜಿಪ್ಟ್‌ನಿಂದ ಈರುಳ್ಳಿಯನ್ನು ಆಮದು ಮಾಡಿಕೊಳ್ಳಲಾಗಿದೆ. ಪ್ರತಿ ಕ್ವಿಂಟಲ್ ಈರುಳ್ಳಿಗೆ 2000 ರೂ ಬೆಲೆ ನಿಗದಿಯಾಗಿದೆ, ಧಾರವಾಡ- ಹುಬ್ಬಳ್ಳಿ ಅವಳಿ ನಗರದ ಮಾರ್ಕೆಟ್‌ನಲ್ಲಿ ರೈತರಿಂದ ಪ್ರತಿ ಕ್ವಿಂಟಲ್ ಗೆ 15,000 ನೀಡಿ ಕೊಂಡುಕ್ಕೊಳ್ಳುವ ಏಜಂಟರು, ಹೊರಗಡೆ 20,000 ಸಾವಿರ ಬೆಲೆ ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ ಗ್ರಾಹಕರಿಗೆ, ಬಿಡಿ ವ್ಯಾಪಾರಸ್ಥರಿಗೆ ಈರುಳ್ಳಿ ಬೆಲೆ ಹೊರೆಯಾಗಿ ಪರಿಣಮಿಸಿದೆ. 
 

click me!