ಏರ್​ಟೆಲ್​ ಸಿಮ್​ ಇದ್ದೋರಿಗೆ ಬರುತ್ತಿಲ್ಲ ಗೃಹಲಕ್ಷ್ಮಿ ಹಣ? ಏನಿದು ಅವ್ಯವಹಾರ- ಸರ್ಕಾರ ಹೇಳಿದ್ದೇನು

Published : Jun 20, 2026, 04:40 PM IST
Grahalakshmi

ಸಾರಾಂಶ

ಗೃಹಲಕ್ಷ್ಮಿ ಯೋಜನೆಯ ಹಣವನ್ನು ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್ ಮೂಲಕ ದುರ್ಬಳಕೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಅಕ್ರಮವನ್ನು ತಡೆಯಲು ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದು, ಕರ್ನಾಟಕದ ಬ್ಯಾಂಕ್ ಖಾತೆಗಳಿಗೆ ಮಾತ್ರ ಹಣ ಜಮಾ ಮಾಡಲು ಸೂಚಿಸಿದೆ. ಅಲ್ಲದೆ, ಹಣ ಜಮೆಯಾದ ತಕ್ಷಣ ಫಲಾನುಭವಿಗಳಿಗೆ ಧ್ವನಿ ಸಂದೇಶದ ಮೂಲಕ ಮಾಹಿತಿ ನೀಡುವ ಹೊಸ ವ್ಯವಸ್ಥೆ ಜಾರಿಯಾಗಲಿದೆ.

ಇದಾಗಲೇ ಸರ್ಕಾರವು ಗ್ಯಾರೆಂಟಿ ಯೋಜನೆಗಳ ಅನುಷ್ಠಾನಕ್ಕೆ ವಿವಿಧ ರೀತಿಯಲ್ಲಿ ನಿಯಮಗಳನ್ನು ಜಾರಿ ಮಾಡುತ್ತಿದೆ. ಅನರ್ಹ ಫಲಾನುಭವಿಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಹೊಸದಾಗಿ ಅರ್ಜಿ ಹಾಕುವ ಯೋಜನೆ ರೂಪಿಸಲಾಗಿದೆ. ಇದರ ನಡುವೆಯೇ ಏರ್​ಟೆಲ್​ ಸಿಮ್​ ಗ್ರಾಹಕರಿಗೆ ಭಾರಿ ಶಾಕ್​ ಎದುರಾಗಿರುವುದು ಬೆಳಕಿಗೆ ಬಂದಿದೆ. ಏರ್​ಟೆಲ್​ ಏರ್‌ಟೆಲ್’ ಅಪ್ಲಿಕೇಶನ್ ಮೂಲಕ ಯುಪಿಐ ಖಾತೆಗಳನ್ನು ದುರ್ಬಳಕೆ ಮಾಡಿಕೊಂಡು ಗೃಹಲಕ್ಷ್ಮಿ ಯೋಜನೆ ಹಣವನ್ನು ಬೇರೆಡೆಗೆ ವರ್ಗಾಯಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಹಿನ್ನೆಲೆಯಲ್ಲಿ ಏರ್​ಟೆಲ್​ ಸಿಮ್​ ಹೊಂದಿರುವ ಕೆಲವು ಫಲಾನುಭವಿಗಳಿಗೆ ಗೃಹಲಕ್ಷ್ಮಿಯ ಹಣ ಸಿಗದೇ ಇರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ಇದರ ಬಗ್ಗೆ ಕಠಿಣ ಕ್ರಮಕ್ಕೆ ಸೂಚಿಸಲಾಗಿದೆ.

ಇದಾಗಲೇ ಈ ಅಕ್ರಮದ ಬಗ್ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಗಮನಕ್ಕೂ ಬಂದಿದ್ದು, ಇದಾಗಲೇ ಅವರು ಕಠಿಣ ಕ್ರಮಕ್ಕೆ ಸೂಚಿಸಿದ್ದಾರೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಕುರಿತು ನಡೆಸಿದ ಪರಿಶೀಲನಾ ಸಭೆಯಲ್ಲಿ, ‘ಏರ್‌ಟೆಲ್’ ಅಪ್ಲಿಕೇಶನ್ ಮೂಲಕ ಆಗುತ್ತಿರುವ ಅವ್ಯವಹಾರದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಮುಖ್ಯಮಂತ್ರಿಗಳು, ಅರ್ಹರಿಗೆ ಮಾತ್ರ ಯೋಜನೆ ತಲುಪಲು ಕರ್ನಾಟಕದಲ್ಲಿರುವ ಖಾತೆಗಳಿಗೆ ಮಾತ್ರ ಹಣ ಜಮಾ ಮಾಡಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್

ಏರ್‌ಟೆಲ್ ಸಿಮ್ ಬಳಕೆದಾರರಿಗೆ ಲಭ್ಯವಿರುವ ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್ ಆ್ಯಪ್ ಮೂಲಕ ಕೆಲವರು ಯುಪಿಐ ಖಾತೆಗಳನ್ನು ತೆರೆದು, ಗೃಹಲಕ್ಷ್ಮೀ ಯೋಜನೆಯ 2 ಸಾವಿರ ರೂಪಾಯಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಮುಖ್ಯಮಂತ್ರಿಗಳ ಗಮನಕ್ಕೆ ತಂದರು. ಆಗ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಅವರು, “ಗೃಹಲಕ್ಷ್ಮೀ ಸೇರಿದಂತೆ ರಾಜ್ಯ ಸರ್ಕಾರದ ಯೋಜನೆಗಳ ಹಣ ಕರ್ನಾಟಕದ ಫಲಾನುಭವಿಗಳಿಗೆ ಮಾತ್ರ ತಲುಪಬೇಕು. ಇತರೆ ರಾಜ್ಯಗಳ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆಯಾಗುತ್ತಿರುವುದು ಪತ್ತೆಯಾಗಿದೆ. ಇಂತಹ ಅಕ್ರಮಗಳಿಗೆ ತಕ್ಷಣ ತಡೆ ಹಾಕಬೇಕು” ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ವಾಯ್ಸ್​ ಮೆಸೇಜ್​ ಮಾಹಿತಿ

ಮೃತಪಟ್ಟಿರುವ ಕೆಲವು ಫಲಾನುಭವಿಗಳ ಖಾತೆಗಳಿಗೂ ಗೃಹಲಕ್ಷ್ಮೀ ಯೋಜನೆಯ ಹಣ ಜಮೆಯಾಗುತ್ತಿರುವುದು ಪತ್ತೆಯಾಗುತ್ತಿರುವುದೂ ತಿಳಿದಿದ್ದು, ಈ ಬಗ್ಗೆ ಕಠಿಣ ಕ್ರಮಕ್ಕೆ ಸೂಚನೆ ನೀಡಿದ್ದಾರೆ ಮುಖ್ಯಮಂತ್ರಿಗಳು. ಇದೇ ವೇಳೆ, ಗೃಹಲಕ್ಷ್ಮೀ ಯೋಜನೆಯ ಹಣ ಫಲಾನುಭವಿಗಳ ಖಾತೆಗೆ ಜಮೆಯಾದ ತಕ್ಷಣ ಅವರ ಮೊಬೈಲ್‌ಗೆ ಧ್ವನಿ ಸಂದೇಶ (ವಾಯ್ಸ್ ಮೆಸೇಜ್) ಮೂಲಕ ಮಾಹಿತಿ ನೀಡುವ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು. ಇದರಿಂದ ಫಲಾನುಭವಿಗಳು ಹಣ ಜಮೆಯಾದ ಬಗ್ಗೆ ತಕ್ಷಣವೇ ಮಾಹಿತಿ ಪಡೆಯಲು ಸಾಧ್ಯವಾಗಲಿದೆ.

PREV
Read more Articles on
click me!

Recommended Stories

ಕರಾವಳಿಯಲ್ಲಿ ಶೇ.54ರಷ್ಟು ಭಾರೀ ಕುಸಿದ ಮುಂಗಾರು, ಮಳೆಗಾಲದಲ್ಲೂ ಮುಂದುವರಿದ ಬೇಸಿಗೆ ಹವೆ, ಬತ್ತಿದ ನೇತ್ರಾವತಿ!
ಮುಂದಿನ 3 ಗಂಟೆಯಲ್ಲಿ ಬೆಂಗ್ಳೂರು ಸೇರಿದಂತೆ 6 ಜಿಲ್ಲೆಗಳಲ್ಲಿ ಮಳೆ; ಮಧ್ಯಾಹ್ನವೇ ಕತ್ತಲಾಯ್ತು