ಮನೆ ಕಟ್ಟಲು ಅನುಮತಿ ನೀಡುವ ಸಿಡಿಎ ಅಧಿಕಾರಿಗಳು, ಒಂದೆರಡು ತಿಂಗಳಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂಬ ಮಾತನ್ನು ಎರಡು ವರ್ಷಗಳಿಂದ ಹೇಳುತ್ತಲೇ ಬಂದಿದ್ದಾರೆ. ಅವರ ಮಾತು ನಂಬಿ ಮನೆ ಕಟ್ಟಲು ಆರಂಭಿಸಿದ ಕೆಲವರು ಜನರೇಟರ್ ಬಾಡಿಗೆ ಪಡೆದು ಮನೆ ನಿರ್ಮಾಣ ಮಾಡುವವಷ್ಟರಲ್ಲಿ ಸಾಕಾಗಿ ಹೋಗಿದೆ ಎಂದು ನಿವಾಸಿಗಳು ನೋವು ತೋಡಿಕೊಳ್ಳುತ್ತಿದ್ದಾರೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಅ.06): ಚಿಕ್ಕಮಗಳೂರು ನಗರದ ಹೊರವಲಯದಲ್ಲಿ ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರ(ಸಿಡಿಎ) ಅಭಿವೃದ್ಧಿಪಡಿಸಿರುವ ಬಡಾವಣೆಯ ಅವ್ಯವಸ್ಥೆಯ ಕೇಂದ್ರವಾಗಿದೆ. ಚಿಕ್ಕಮಗಳೂರಿನ ಅತ್ಯಂತ ಪ್ರತಿಷ್ಠೆಯುತ ಬಡಾವಣೆ ಎಂದೇ ಹೆಸರುವಾಸಗಿರುವ, ಹೈಟೆಕ್ ಬಡಾವಣೆ ಇದಾಗಿದೆ. ಸಿಡಿಎಯಿಂದ ಜನರಿಗೆ ಕಡಿಮೆ ದರದಲ್ಲಿ ನಿವೇಶನ ನೀಡುತ್ತೇವೆ ಎನ್ನುವ ಘೋಷಣೆ ಮಾತ್ರ, ಅಲ್ಲಿ ಆಗಿರುವುದೇ ಬೇರೆ, ಕತ್ತಲಾದರೆ ಕಳ್ಳರ ಕಾಟ, ಕುಡುಕರ ಪುಂಡಾಟ, ವಿದ್ಯುತ್, ಕುಡಿಯುವ ನೀರಿನ ಸಂಪರ್ಕ ಇಲ್ಲದೆ ನಿವಾಸಿಗಳ ಪರದಾಟ ನಡೆಸುತ್ತಿದ್ದಾರೆ. ನಿವೇಶನ ಖರೀದಿ ಮಾಡಿ ಮನೆ ಕಟ್ಟಿಲಾಗದೇ ಪ್ರಾಧಿಕಾರಕ್ಕೆ ಜನರು ಹಿಡಿಶಾಪ ಹಾಕುತ್ತಿದ್ದಾರೆ.
undefined
ಕತ್ತಲಾದರೆ ಕಳ್ಳರ ಕಾಟ, ಕುಡುಕರ ಪುಂಡಾಟ
ಚಿಕ್ಕಮಗಳೂರು ನಗರದ ಹೊರವಲಯವಾದ ಉಪ್ಪಳಿಯ ವಾಜಪೇಯಿ ಬಡಾವಣೆ ಹೈಟಕ್ ಬಡಾವಣೆ ಎಂದು ಸಿಡಿಎ ಜನರಿಗೆ ನಿವೇಶನಗಳನ್ನು ಮಾರಾಟ ಮಾಡಿದೆ.ವಾಜಪೇಯಿ ಬಡಾವಣೆಯಲ್ಲಿ ನಿವೇಶನಗಳನ್ನು ಖರೀದಿ ಮಾಡಿರುವ ನಿವಾಸಿಗಳ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಬಡಾವಣೆ ಅಭಿವೃದ್ಧಿ ಪ್ರಕ್ರಿಯೆ ಆರಂಭವಾಗಿ 14 ವರ್ಷಗಳೇ ಕಳೆದಿವೆ. ಕುಂಟುತ್ತಾ, ತೆವಳುತ್ತಾ ಸಾಗಿದ್ದ ಕಾಮಗಾರಿ ನಡುವೆ ಐದು ವರ್ಷಗಳ ಹಿಂದೆ ನಿವೇಶನ ಹಂಚಿಕೆಯನ್ನು ಸಿಡಿಎ ಮಾಡಿದೆ. 2400ಕ್ಕೂ ಹೆಚ್ಚು ನಿವೇಶನಗಳಿದ್ದು, ರಸ್ತೆ, ಒಳ ಚರಂಡಿ ನಿರ್ಮಿಸಿರುವ ಸಿಡಿಎ. ವಿದ್ಯುತ್ ಸಂಪರ್ಕವನ್ನೇ ಕಲ್ಪಿಸಲಿಲ್ಲ.ವಿದ್ಯುತ್ ಪರಿವರ್ತಗಳನ್ನು (ಟಿ.ಸಿ) ಅಳವಡಿಸಲು ಅಲ್ಲಲ್ಲಿ ನಿರ್ಮಿಸಿರುವ ದೊಡ್ಡ ದೊಡ್ಡ ಕಂಬಗಳು ಟಿ.ಸಿ. ಗಾಗಿ ಸಂಪರ್ಕಕ್ಕೆ ಕಾದಿವೆ, ಸಿಡಿಎ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮಾತು ನಂಬಿ ಮನೆ ಕಟ್ಟಿಕೊಂಡವರು ಬದುಕೀಗ ಕತ್ತಲಲ್ಲಿ ಮುಳುಗಿದೆ.
ಚಿಕ್ಕಮಗಳೂರು: ನೀರಿಲ್ಲ ಅಂತ ಹೈಟೆಕ್ ಕೇಂದ್ರೀಯ ವಿದ್ಯಾಲಯ ಸುಪರ್ದಿಗೆ ತೆಗೆದುಕೊಳ್ಳಲು ಜಿಲ್ಲಾಡಳಿತ ಹಿಂದೇಟು
ಜನರೇಟರ್ ಬಾಡಿಗೆ ಪಡೆದು ಮನೆ ನಿರ್ಮಾಣ :
ಮನೆ ಕಟ್ಟಲು ಅನುಮತಿ ನೀಡುವ ಸಿಡಿಎ ಅಧಿಕಾರಿಗಳು, ಒಂದೆರಡು ತಿಂಗಳಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂಬ ಮಾತನ್ನು ಎರಡು ವರ್ಷಗಳಿಂದ ಹೇಳುತ್ತಲೇ ಬಂದಿದ್ದಾರೆ. ಅವರ ಮಾತು ನಂಬಿ ಮನೆ ಕಟ್ಟಲು ಆರಂಭಿಸಿದ ಕೆಲವರು ಜನರೇಟರ್ ಬಾಡಿಗೆ ಪಡೆದು ಮನೆ ನಿರ್ಮಾಣ ಮಾಡುವವಷ್ಟರಲ್ಲಿ ಸಾಕಾಗಿ ಹೋಗಿದೆ ಎಂದು ನಿವಾಸಿಗಳು ನೋವು ತೋಡಿಕೊಳ್ಳುತ್ತಿದ್ದಾರೆ. ವಿದ್ಯುತ್ ಸಂಪರ್ಕಕ್ಕೆ ಪರದಾಟ ನಡೆಸಿ ಕೆಲವರು ಸೌರ ವಿದ್ಯುತ್ ಮೊರ ಹೋಗಿದ್ದಾರೆ, ಇಡೀ ಮನೆಗೆ ಕೆಲವರು ಸೌರ ವಿದ್ಯುತ್ ಸಂಪರ್ಕವನ್ನು ಸ್ವಂತ ಖರ್ಚಿನಿಂದ ಮಾಡಿಕೊಂಡಿದ್ದಾರೆ.ಇನ್ನು ಕುಡಿಯುವ ನೀರಿನ ಸಮಸ್ಯೆಯೂ ಇದ್ದು ಕೆಲವರು ಕೊಳವೆ ಬಾವಿ ಕೊರೆಸಿಕೊಂಡು ನೀರಿನ ವ್ಯವಸ್ಥೆ ಮಾಡಿಕೊಂಡಿದ್ದಾರೆ.
ಹೈಟೆಕ್ ಬಡಾವಣೆ ನಿರ್ಮಾಣ ಮಾಡಿ ಜನರಿಗೆ ನಿವೇಶನ ನೀಡುವ ಉದ್ದೇಶವನ್ನು ಸಿಡಿಎ ಹೊಂದಿತ್ತು. ಇದಕ್ಕಾಗಿ ಜನರಿಂದ ಹಣ ಕಟ್ಟಿಸಿಕೊಂಡು ನಿವೇಶನವನ್ನು ಅಭಿವೃದ್ದಿಗೊಳಿಸಿದೇ ಹಂಚಿಕೆ ಮಾಡಿದೆ. ಇದರ ಪರಿಣಾಮ ಜನರು ಇಂದು ನೀರಿಗಾಗಿ, ವಿದ್ಯುತ್ ಸಂಪರ್ಕವಿಲ್ಲದೆ ಪರದಾಟ ನಡೆಸುವ ದುಸ್ಥಿತಿ ನಿರ್ಮಾಣವಾಗಿದೆ.ಖಾಸಗಿ ಬಡಾವಣೆಗಳಿಗೆ ಷರತ್ತುಗಳನ್ನು ವಿಧಿಸುವ ಸಿಡಿಎಯಿಂದಲೇ ನಿಮಯ ಉಲ್ಗಂಘನೆ ಮಾಡಿರುವುದು ಅತ್ಯಂತ ಬೇಜಬಾಬ್ದಾರಿ ನಡೆಯಾಗಿದೆ.