ಜನರು ಮಾಸ್ಕ್ ಧರಿಸಿಕೊಳ್ಳದೆ, ಗುಂಪು ಗುಂಪಾಗಿ ಮಾರುಕಟ್ಟೆಯಲ್ಲಿ ಸಂಚಾರ| ತಾಲೂಕು ಆಡಳಿತಕ್ಕೆ ತಲೆನೋವು ತಂದ ಸಾರ್ವಜನಿಕರ ವರ್ತನೆ| ಗದಗ ಜಿಲ್ಲೆಯ ನರಗುಂದ ಪಟ್ಟಣ|
ನರಗುಂದ(ಮೇ.30): ಸರ್ಕಾರ ಕೊರೋನಾ ರೋಗ ನಿಯಂತ್ರಣಕ್ಕಾಗಿ ಕಳೆದ 2 ತಿಂಗಳುಗಳಿಂದ ಲಾಕ್‌ಡೌನ್ ಮಾಡಿ ಈ ರೋಗ ನಿಯಂತ್ರಣಕ್ಕೆ ಶ್ರಮಿಸುತ್ತಿದೆ. ಆದರೆ, ಪಟ್ಟಣದಲ್ಲಿರವ ಮದ್ಯದ ಅಂಗಡಿಗಳಲ್ಲಿ ನಿಯಮ ಪಾಲನೆಯಾಗದೇ ಇರುವುದು ತಾಲೂಕು ಆಡಳಿತಕ್ಕೆ ತಲೆನೋವು ತಂದಿದೆ.
ಕಳೆದ ಕೆಲವು ದಿನಗಳಿಂದ ಅಲ್ಪ ಪ್ರಮಾಣದಲ್ಲಿ ಲಾಕ್‌ಡೌನ್ ಸಡಿಲಗೊಳಿಸಿದ ಹಿನ್ನಲೆಯಲ್ಲಿ ಜನತೆ ದಿನದ ನಿತ್ಯದ ಕೆಲಸ ಕಾರ್ಯಗಳಗೆ ಅನುಕೂಲ ಕಲ್ಪಿಸಿ ಕೆಲವು ನಿಯಮಗಳನ್ನು ಜನತೆ ಪಾಲನೆ ಮಾಡಬೇಕೆಂದು ಸೂಚನೆ ನೀಡಿದೆ.
undefined
'ಉತ್ತರ ಕರ್ನಾಟಕದ ಸಹ್ಯಾದ್ರಿ ಕಪ್ಪತ್ತಗುಡ್ಡ ರಕ್ಷಣೆಗೆ ಕಾಂಗ್ರೆಸ್ ಸಿದ್ಧ'
ಆದರೆ, ಲಾಕ್‌ಡೌನ್ ನಿಯಮವನ್ನು ಸಾರ್ವಜನಿಕರು ಪಾಲನೆ ಮಾಡದಿರುವುದು ಕಂಡುಬಂದಿದ್ದು, ಜನರು ಮಾಸ್ಕ್ ಧರಿಸಿಕೊಳ್ಳದೆ, ಗುಂಪು ಗುಂಪಾಗಿ ಮಾರುಕಟ್ಟೆಯಲ್ಲಿ ಸಂಚರಿಸುತ್ತಿರುವುದು ಸಾಮಾನ್ಯವಾಗಿದೆ.