OLXನಲ್ಲಿ ಬೈಕ್ ಮಾರೋಕೆ ಹೋಗಿ ಹಣ ಕಳೆದುಕೊಂಡ ಎಂಜಿನಿಯರಿಂಗ್ ವಿದ್ಯಾರ್ಥಿ

By Kannadaprabha News  |  First Published May 30, 2020, 10:36 AM IST

ಓಎಲ್‌ಎಕ್ಸ್‌ನಲ್ಲಿ ಗ್ರಾಹಕರೊಬ್ಬರ ಮಾತಿನ ಮೋಡಿಗೆ ಒಳಗಾದ ವಿದ್ಯಾರ್ಥಿಯೊಬ್ಬ, ತನ್ನ ಖಾತೆಯಿಂದ ತಾನೇ 12 ಸಾವಿರ ರುಪಾಯಿ ವರ್ಗಾಯಿಸಿ ಹಣ ಕಳೆದುಕೊಂಡ ಘಟನೆ ಬಜತ್ತೂರು ಗ್ರಾಮದಲ್ಲಿ ನಡೆದಿದೆ.


ಉಪ್ಪಿನಂಗಡಿ(ಮೇ 30): ಓಎಲ್‌ಎಕ್ಸ್‌ನಲ್ಲಿ ಗ್ರಾಹಕರೊಬ್ಬರ ಮಾತಿನ ಮೋಡಿಗೆ ಒಳಗಾದ ವಿದ್ಯಾರ್ಥಿಯೊಬ್ಬ, ತನ್ನ ಖಾತೆಯಿಂದ ತಾನೇ 12 ಸಾವಿರ ರುಪಾಯಿ ವರ್ಗಾಯಿಸಿ ಹಣ ಕಳೆದುಕೊಂಡ ಘಟನೆ ಬಜತ್ತೂರು ಗ್ರಾಮದಲ್ಲಿ ನಡೆದಿದೆ.

ಬಜತ್ತೂರಿನ ನಿವಾಸಿಯಾಗಿರುವ ಈತ ಅಂತಿಮ ವರ್ಷದ ಎಂಜಿನಿಯರಿಂಗ್‌ ವಿದ್ಯಾರ್ಥಿ ತನ್ನಲ್ಲಿರುವ ಬೈಕ್‌ನ್ನು ಮಾರಾಟ ಮಾಡಲುದ್ದೇಶಿಸಿ ಓಎಲ್‌ಎಕ್ಸ್‌ನಲ್ಲಿ ಬೈಕ್‌ ವಿವರವನ್ನು ಅಪ್ಲೋಡ್‌ ಮಾಡಿದ್ದ.

Tap to resize

Latest Videos

ಆಸ್ತಿ ತೆರಿಗೆ ಪಾವತಿಗೆ ಕಾಲಾವಧಿ ವಿಸ್ತರಣೆ

ಈ ಬಳಿಕ 8876992541 ನಂಬರ್‌ನಿಂದ ಕರೆ ಮಾಡಿ ಬೈಕ್‌ ಖರೀದಿಸುವುದಾಗಿ ತಿಳಿಸಿ, ಆನ್‌ಲೈನ್‌ಲ್ಲಿ ಹಣ ಪಾವತಿಸುತ್ತೇನೆ, ಫೋನ್‌ಪೇಯ ಕ್ಯುಆರ್‌ ಕೋಡ್‌ನ್ನು ನಿಮಗೆ ಕಳುಹಿಸುತ್ತೇನೆ ಅದನ್ನು ಸ್ಕ್ಯಾನ್ ಮಾಡಿದರೆ ನಿಮ್ಮ ಖಾತೆಗೆ ಹಣ ಜಮೆಯಾಗುತ್ತದೆ. ಮರುದಿನ ಬಂದು ಬೈಕ್‌ ತೆಗೆದುಕೊಂಡು ಹೋಗುತ್ತೇನೆಂದು ವಿದ್ಯಾರ್ಥಿಯನ್ನು ಮಾತಿನಲ್ಲೇ ಮೋಡಿ ಮಾಡಿದ್ದಾನೆ.

ವಿದಾರ್ಥಿಯ ಕ್ಯುಆರ್‌ ಕೋಡ್‌ನ್ನು ಗ್ರಾಹಕ ಸ್ಕ್ಯಾನ್‌ ಮಾಡಿ ಗ್ರಾಹಕ ಹಣ ಪಾವತಿಸಬೇಕಿತ್ತು. ಆದರೆ ಇಲ್ಲಿ ಗ್ರಾಹಕ ಕಳುಹಿಸಿದ ಕ್ಯುಆರ್‌ ಕೋಡ್‌ನ್ನು ವಿದ್ಯಾರ್ಥಿಯೇ ತನ್ನ ಮೊಬೈಲ್‌ನಲ್ಲಿ ಸ್ಕ್ಯಾನ್‌ ಮಾಡಿ ಹಣ ನಮೂದಿಸಿದ್ದರಿಂದ ಕೂಡಲೇ 12 ಸಾವಿರ ರುಪಾಯಿ ವಿದ್ಯಾರ್ಥಿ ಖಾತೆಯಿಂದ ಹೋಗಿದೆ.

ಲ್ಯಾಂಡ್‌ಲೈನ್‌ನಿಂದ ಮೊಬೈಲ್‌ಗೆ ಕರೆ ಮಾಡಲು ‘0’ ಡಯಲ್‌ ಕಡ್ಡಾಯ?

ಕರೆ ಮಾಡಿದ್ದ ಗ್ರಾಹಕನಿಗೆ ವಿದ್ಯಾರ್ಥಿ ಸಂಶಯಗೊಂದು ಈ ಬಗ್ಗೆ ಪ್ರಶ್ನಿಸಿದ್ದೇನೆ. ಆದರೆ ಗ್ರಾಹಕನ ಮಾತಿನ ಮೋಡಿಗೆ ಸಿಲುಕಿ ಆತನ ಕ್ಯುಆರ್‌ ಕೋಡ್‌ ಸ್ಕಾ್ಯನ್‌ ಮಾಡಿ ಎಡವಟ್ಟು ಮಾಡಿಕೊಂಡು ಹಣ ಕಳೆದುಕೊಂಡಿದ್ದಾನೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ.

click me!