ಜನರ ತೆರಿಗೆ ಹಣವನ್ನು ಜನರ ಅಭಿವೃದ್ಧಿಗಾಗೇ ಸದ್ಬಳಕೆ ಮಾಡಲಾಗಿದೆ ಎಂದು ವರುಣ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ಸುತ್ತೂರು : ಜನರ ತೆರಿಗೆ ಹಣವನ್ನು ಜನರ ಅಭಿವೃದ್ಧಿಗಾಗೇ ಸದ್ಬಳಕೆ ಮಾಡಲಾಗಿದೆ ಎಂದು ವರುಣ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ಎಳವೇಗೌಡನ ಹುಂಡಿ, ಪಟ್ಟೆಹುಂಡಿ, ಮಾದೇಗೌಡನಹುಂಡಿ, ಮುಂತಾದ ಗ್ರಾಮಗಳಲ್ಲಿ ನಡೆದ ಚುನಾವಣ ಪ್ರಚಾರದಲ್ಲಿ ಮತದಾರರಿಗೆ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಗಳಲ್ಲಿ ಒಂದಾದ ಗ್ಯಾರಂಟಿ ಕಾರ್ಡನ್ನು ಮನೆ ಮನೆಗೆ ತೆರಳಿ ಮತದಾರರಿಗೆ ವಿತರಿಸಿ ಅವರು ಮಾತನಾಡಿದರು.
undefined
ವರುಣ ಕ್ಷೇತ್ರ ಉದಯವಾದಾಗಿನಿಂದ ನಮ್ಮ ತಂದೆ ಸಿದ್ದರಾಮಯ್ಯ ಅವರನ್ನು 2008ರಲ್ಲಿ ಪ್ರಥಮವಾಗಿ ಗೆಲ್ಲಿಸಿದ್ದೀರಿ. ನಂತರ 2013 ರಲ್ಲಿ ಗೆಲ್ಲಿಸಿ ಮುಖ್ಯಮಂತ್ರಿಯಾಗಲು ಕಾರಣ ಕರ್ತರಾಗಿದ್ದೀರಿ ಮತ್ತು ಈಗ 2023ರ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ವರುಣ ಕ್ಷೇತ್ರದಿಂದಲೇ ಸ್ಪರ್ಧಿಸುತ್ತಿದ್ದು, ಇದು ಅವರ ಕಡೆಯ ಚುನಾವಣೆ ಆಗಿದೆ. ಆದ್ದರಿಂದ ಕ್ಷೇತ್ರದಲ್ಲಿ ಮತದಾರರು ಈ ಬಾರಿ ನಮ್ಮ ತಂದೆ ಸಿದ್ದರಾಮಯ್ಯ ಅವರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿದರು.
ವರುಣ ಕ್ಷೇತ್ರಕ್ಕೆ . 1800 ರಿಂದ 2000 ಕೋಟಿ ಅನುದಾನ ತಂದು ಮೂಲಭೂತ ಸೌಕರ್ಯಗಳಾದ ರಸ್ತೆ, ಚರಂಡಿ, ಬೀದಿ ದೀಪ, ಕುಡಿಯುವ ನೀರು, ಶಾಲೆಗಳ ನಿರ್ಮಾಣ, ಸಮುದಾಯ ಭವನ ಸೇರಿದಂತೆ ಕ್ಷೀರಭಾಗ್ಯ, ಅನ್ನಭಾಗ್ಯ, ಶೂ ಭಾಗ್ಯ, ವಿದ್ಯಾಸಿರಿ, ಸೇರಿದಂತೆ ಹಲವು ಭಾಗ್ಯ ಯೋಜನೆಗಳೊಂದಿಗೆ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಂಡರು. ರಾಜ್ಯದಲ್ಲಿ ಎಲ್ಲಾ ವರ್ಗದ ಜನತೆಗೆ ಅನುಕೂಲ ಕಲ್ಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮತ್ತೆ ರಾಜ್ಯ ಅಭಿವೃದ್ಧಿ ಮಹಾಪೂರ ಹರಿಯಲು ನಮ್ಮ ತಂದೆ ಸಿದ್ದರಾಮಯ್ಯ ಅವರನ್ನು ಹೆಚ್ಚಿನ ಮತಗಳಿಂದ ಆಶೀರ್ವದಿಸಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಕೋರಿದರು.
ಎಪಿಎಂಸಿ ಸದಸ್ಯ ಬಸವರಾಜು, ಸಿದ್ದರಾಮನಹುಂಡಿ ಗ್ರಾಪಂ ಅಧ್ಯಕ್ಷ ಚಂದ್ರಶೇಖರ್, ಏಳಿಗೆಗೌಡನ ಹುಂಡಿ ಸಿದ್ದು, ಡೈರಿ ಅಧ್ಯಕ್ಷ ಸಿದ್ದರಾಮು, ಪ್ರಚಾರ ಸಮಿತಿ ಅಧ್ಯಕ್ಷ ಭೈರೇಗೌಡ, ರಮೇಶ್, ಮಹದೇವಣ್ಣ, ಉಮೇಶ್, ನಿಂಗರಾಜು, ಮುದ್ದೇಗೌಡ, ಹೊಸಳ್ಳಿ ಶೇಖರ್, ಸಚಿನ್, ಪುರಸಭಾ ಮಾಜಿ ಅಧ್ಯಕ್ಷ ಸೋಮು ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.
ಅನಾಥ ಭಾವ
ಮೈಸೂರು(ಮಾ.22): ಆರ್. ಧ್ರುವನಾರಾಯಣ್ ಅವರಿಗೆ ರಾಜಕೀಯದಲ್ಲಿ ಉತ್ತಮ ಭವಿಷ್ಯವಿತ್ತು. ರಾಜ್ಯ ಮಟ್ಟದಲ್ಲಿ ಪ್ರಭಾವ ಬೀರುವ ಸಾಮರ್ಥ್ಯ ಇತ್ತು. ಅಗಲಿಕೆಯಿಂದ ಅನಾಥಭಾವ ಕಾಡುತ್ತಿದೆ ಎಂದು ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ನಗರದ ಇಂದಿರಾ ಗಾಂಧಿ ಕಾಂಗ್ರೆಸ್ ಭವನದಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಕಾಂಗ್ರೆಸ್ ಸಮಿತಿಯು ಮಂಗಳವಾರ ಆಯೋಜಿಸಿದ್ದ ಮಾಜಿ ಸಂಸದ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಅವರಿಗೆ ಭಾವಪೂರ್ಣ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಏಪ್ರಿಲ್ ಮೊದಲ ವಾರದಲ್ಲಿ ಚುನಾವಣೆ ಘೋಷಣೆ: ಮಾಹಿತಿ ನೀಡಿದ ರಾಜ್ಯ ನಾಯಕ
ಶರಣರ ಬದುಕನ್ನು ಮರಣದಲ್ಲಿ ಕಾಣುವಂತೆ ಮಾತಿದೆ. ಇದಕ್ಕೆ ಧ್ರುವನಾರಾಯಣ್ ಉದಾಹರಣೆಯಾದರು. ಬದ್ಧತೆ ರಾಜಕಾರಣಿಯಾಗಿ, ಕಳಂಕ ರಹಿತವಾಗಿ ಅತ್ಯಂತ ಸರಳವಾಗಿ ಎಳ್ಳಷ್ಟುಆಡಂಬರ ಇಲ್ಲದೇ ಬದುಕಿದ್ದು ನಮಗೆಲ್ಲ ಮಾದರಿ ಎಂದು ಅವರು ಹೇಳಿದರು.ುತ್ನ ಮಾಡುತ್ತಿರುವುದು ನಿಲ್ಲಬೇಕು ಎಂದು ಅವರು ತಿಳಿಸಿದರು.
ಜೆಂಟಲ್‌ಮನ್ ರಾಜಕಾರಣಕ್ಕೆ ಮಾದರಿ:
ಎಐಸಿಸಿ ಕಾರ್ಯದರ್ಶಿಯಾದ ಶಾಸಕ ರೋಸಿ ಜಾನ್ ಮಾತನಾಡಿ, ಧ್ರುವನಾರಾಯಣ್ ಅವರೊಂದಿಗೆ ನಾನು ಪ್ರವಾಸ ಮಾಡಿದ್ದೇನೆ. ಎಲ್ಲಾ ಪಕ್ಷದವರೂ ಗೌರವಿಸುತ್ತಿದ್ದರು. ಜೆಂಟಲ್‌ಮನ್ ರಾಜಕಾರಣಕ್ಕೆ ಮಾದರಿಯಾಗಿದ್ದರು. ಕಿರಿಯ ತಮ್ಮನಂತೆ ನೋಡಿಕೊಂಡರು ಎಂದರು.
ಪರಾರ್ಥದಿಂದ ಕೆಲಸ ಮಾಡಿದವರು:
ಹಿರಿಯ ಸಾಹಿತಿ ಪ್ರೊ.ಎಸ್.ಜಿ. ಸಿದ್ಧರಾಮಯ್ಯ ಮಾತನಾಡಿ, ಧ್ರುವನಾರಾಯಣ್ ಸಮುದಾಯ ಮತ್ತು ರಾಜಕೀಯ ನಿಷ್ಠೆ ಬೇರ್ಪಡಿಸಲಾಗದ ತಾತ್ವಿಕವಾಗಿ ಅಂತಃಕರ್ಗತವಾಗಿತ್ತು. ರಾಜಕೀಯ ಶೂನ್ಯ ಆವರಿಸಿತು. ಅವರ ನಿರ್ಗಮನ ದಿಗ್ಭ್ರಾಂತಿ. ಸ್ವಾರ್ಥಕ್ಕಾಗಿ ಬದುಕದೇ ಪರಾರ್ಥದಿಂದ ಕೆಲಸ ಮಾಡಿದವರು ಎಂದು ಸ್ಮರಿಸಿದರು.
ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಹಾಗೂ ಜಿಪಂ ಮಾಜಿ ಅಧ್ಯಕ್ಷೆ ಲತಾ ಸಿದ್ದಶೆಟ್ಟಿಮಾತನಾಡಿ, ಕವಲಂದೆ ಭಾಗದ ಹಳ್ಳಿಗಳು ಕುಡಿಯುವ ನೀರಿನ ತರಲು ಇನ್ನೊಂದು ಊರಿಗೆ ಹೋಗಬೇಕಿತ್ತು. ಕಬಿನಿ ನೀರು ತಂದು 56 ಹಳ್ಳಿಗಳ ನೀರನ್ನು ಒದಗಿಸಿದರು. ಶಾಲಾ ಕಾಲೇಜುಗಳಿಗೆ ಮೇಜು, ಕುರ್ಚಿ ನೀಡಿದ್ದರು ಎಂದರು.