ಮೀನು ವ್ಯಾಪಾರ ವಹಿವಾಟು ಸಂಪೂರ್ಣ ಬಂದ್

By Suvarna NewsFirst Published Dec 2, 2020, 11:40 AM IST
Highlights

ಮಂಗಳೂರಿನಲ್ಲಿ ದೋಣಿ ದುರಂತ ಸಂಭವಿಸಿದ್ದು ಈ ನಿಟ್ಟಿನಲ್ಲಿ  ಮೀನು ವ್ಯಾಪಾರವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. 

ಮಂಗಳೂರು (ಡಿ.02): ಅರಬ್ಬೀ ಸಮುದ್ರದಲ್ಲಿ ಬೋಟ್ ಮುಳುಗಿ ದುರಂತ ಸಂಭವಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು  ಮಂಗಳೂರಿನಲ್ಲಿ ಮೀನು ವ್ಯಾಪಾರ ವಹಿವಾಟು ಬಂದ್ ಮಾಡಲಾಗಿದೆ. 

ಮಂಗಳೂರಿನಲ್ಲಿ ಮೀನು ವಹಿವಾಟು ಸಂಪೂರ್ಣ ಬಂದ್ ಆಗಿದ್ದು ಕೋಸ್ಟ್ ಗಾರ್ಡ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಮೀನುಗಾರರ ದೋಣಿ ಮುಳುಗಿ ದುರಂತ ಸಂಭವಿಸಿದ ವೇಳೆ ಕಾರ್ಯಾಚರಣೆ ಮಾಡುವಂತೆ ಪೋಸ್ ಕೊಟ್ಟಿದ್ದಾರೆ‌. ಆದರೆ ನಿನ್ನೆ ಯಾವ ಕಾರ್ಯಾಚರಣೆ ಮಾಡಿಲ್ಲ ಎಂದು ಆರೋಪ ಮಾಡಲಾಗಿದೆ.  

ಮುಷ್ಕರ ಮಾಡಿ ನೂರಾರು ಜನರ ಜಮಾವಣೆ ಮಾಡಿದ್ದು,  ಸ್ಥಳದಲ್ಲಿ ಹೆಚ್ಚಿನ ಪೊಲೀಸ್ ಬಿಗಿ ಭದ್ರತೆ ವ್ಯವಸ್ಥೆ ಕಲ್ಪಿಸಲಾಗಿದೆ. ಕೆ.ಎಸ್.ಆರ್.ಪಿ ವಾಹನಗಳನ್ನು ಸ್ಥಳದಲ್ಲಿ ನಿಯೋಜನೆ ಮಾಡಲಾಗಿದೆ.

ದೋಣಿ ಮಗುಚಿ 6 ಮಂದಿ ಕಾಣೆ : ಇಬ್ಬರ ಮೃತ​ದೇಹ ಪತ್ತೆ ...

ಮತ್ತೊಂದು ಮೃತದೇಹ ಪತ್ತೆ :  ಮಂಗಳೂರು ಅರಬ್ಬೀ ಸಮುದ್ರದಲ್ಲಿ ಬೋಟ್ ಮುಳುಗಿದ ದುರಂತದಲ್ಲಿ ನಾಪತ್ತೆಯಾಗಿದ್ದ ಮತ್ತೋರ್ವ ಮೀನುಗಾರನ ಮೃತದೇಹ ಪತ್ತೆಯಾಗಿದೆ. ಆಳ ಸಮುದ್ರದಲ್ಲಿ  ಮೃತದೇಹ ಪತ್ತೆಯಾಗಿದೆ. 

ಬೋಟ್ ಮುಳುಗಿದ ಜಾಗದಲ್ಲೇ ಕಾರ್ಯಾಚರಣೆ ವೇಳೆ ಮೃತದೇಹ ಪತ್ತೆಯಾಗಿದ್ದು, ನಿನ್ನೆ ಇಬ್ಬರ ಮೃತದೇಹ ಪತ್ತೆಯಾಗಿತ್ತು. ಇಂದು ಪತ್ತೆಯಾದ ಮೃತದೇಹದ ಗುರುತು ಪತ್ತೆಯಾಗಿಲ್ಲ.  ಇನ್ನೂ ಮೂರು ಮೃತದೇಹಗಳು ಪತ್ತೆಯಾಗಬೇಕಿದ್ದು, ಹುಡುಕಾಟ ಮುಂದುವರಿದಿದೆ. 

click me!