ಮೈಸೂರು ಅರಮನೆ ಮುಂಭಾಗ ಶುಕ್ರವಾರ ಆಯೋಜಿಸಿದ್ದ ಯೋಗ ಸರಪಳಿ ಕಾರ್ಯಕ್ರಮದಲ್ಲಿ ನೂರಾರು ಮಂದಿ ಯೋಗಪಟುಗಳು ಭಾಗವಹಿಸಿ, ಯೋಗ ಸರಪಳಿ ರಚಿಸಿ ಯೋಗಾಸನ ಮಾಡುವ ಮೂಲಕ ಗಮನ ಸೆಳೆದರು. ನಗರದ ವಿವಿಧ ಯೋಗ ಸಂಘಟನೆಗಳ ನೂರಾರು ಯೋಗಪಟುಗಳು ಸರಪಳಿ ಮಾದರಿಯಲ್ಲಿ ಯೋಗಾಭ್ಯಾಸ ಮಾಡುವ ಮೂಲಕ ಏಕತೆಯ ಸಂದೇಶ ಸಾರಿದರು.
ಮೈಸೂರು(ಅ.06): ದಸರಾ ಮಹೋತ್ಸವದ ಅಂಗವಾಗಿ ಯೋಗ ದಸರಾ ಉಪ ಸಮಿತಿ ಮೈಸೂರು ಅರಮನೆ ಮುಂಭಾಗ ಶುಕ್ರವಾರ ಆಯೋಜಿಸಿದ್ದ ಯೋಗ ಸರಪಳಿ ಕಾರ್ಯಕ್ರಮದಲ್ಲಿ ನೂರಾರು ಮಂದಿ ಯೋಗಪಟುಗಳು ಭಾಗವಹಿಸಿ, ಯೋಗ ಸರಪಳಿ ರಚಿಸಿ ಯೋಗಾಸನ ಮಾಡುವ ಮೂಲಕ ಗಮನ ಸೆಳೆದರು.
ನಗರದ ವಿವಿಧ ಯೋಗ ಸಂಘಟನೆಗಳ ನೂರಾರು ಯೋಗಪಟುಗಳು ಸರಪಳಿ ಮಾದರಿಯಲ್ಲಿ ಯೋಗಾಭ್ಯಾಸ ಮಾಡುವ ಮೂಲಕ ಏಕತೆಯ ಸಂದೇಶ ಸಾರಿದರು.
ಯೋಗದಿಂದ ಆರೋಗ್ಯ ಕಾಪಾಡಿಕೊಳ್ಳಿ:
ತುಳಸಿ ಗಿಡಕ್ಕೆ ನೆರೆಯುವ ಮೂಲಕ ಯೋಗ ಸರಪಳಿ ಉದ್ಘಾಟಿಸಿದ ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಮಾತನಾಡಿ, ಪ್ರತಿಯೊಬ್ಬರೂ ಯೋಗವನ್ನು ಮೈಗೂಡಿಸಿಕೊಂಡರೆ ಆರೋಗ್ಯ ಕಾಪಾಡಿಕೊಳ್ಳಬಹುದು. ಯೋಗವನ್ನು ದಿನನಿತ್ಯ ಮಾಡಿದರೆ ನಾವು ಮಾಡುವ ಕೆಲಸದಲ್ಲಿ ಲವಲವಿಕೆ ಇರುತ್ತದೆ ಎಂದು ಹೇಳಿದರು.
ಜೀವನದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಯೋಗವನ್ನು ಮಕ್ಕಳಿಂದ ವೃದ್ಧವರೆಗೂ ಪ್ರತಿಯೊಬ್ಬರೂ ಮಾಡಬೇಕು. ಯೋಗದಿಂದ ಮನಸ್ಸನ್ನು ಅಚ್ಚುಕಟ್ಟಾಗಿ ಇರಿಸಿಕೊಳ್ಳಲು ಸಾಧ್ಯ ಎಂದು ಅವರು ತಿಳಿಸಿದರು.
ಮೈಸೂರು: ಅರಮನೆಯಲ್ಲಿ ಯದುವೀರ್ ಸರಸ್ವತಿ ಪೂಜೆ
ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್.ಎ. ರಾಮದಾಸ್ ಮಾತನಾಡಿ, ಯೋಗ ಸರಪಳಿ ಆಚರಿಸುವ ಮೂಲಕ ವಿಶ್ವ ಭ್ರಾತೃತ್ವ ಸಂದೇಶ ಸಾರಲಾಗಿದೆ. ಯೋಗದಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯದ ಸ್ವಾಸ್ಥ್ಯತೆಯನ್ನು ಕಾಪಾಡಿಕೊಳ್ಳಬಹುದಾಗಿದೆ. ಇದರೊಂದಿಗೆ ಯೋಗ ಸರಪಳಿ ಮೂಲಕ ಬೇಧ ಭಾವ ಅಳಿಸಿ, ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ವ್ಯಕ್ತಪಡಿಸಲಾಗಿದೆ ಎಂದರು.
ದಸರಾ ಪಾಸ್ ಗೊಂದಲ; ಇರೋದ್ರಲ್ಲೇ ಎಲ್ಲ ಸರಿದೂಗಿಸ್ಬೇಕು: ಸೋಮಣ್ಣ
ಸಂಸದ ಪ್ರತಾಪ್ ಸಿಂಹ, ಯೋಗ ದಸರಾ ಉಪಸಮಿತಿ ಉಪ ವಿಶೇಷಾಧಿಕಾರಿ ರಮ್ಯಾ, ಅಧ್ಯಕ್ಷ ಡಾ. ಅನಿಲ್ ಥಾಮಸ್, ಉಪಾಧ್ಯಕ್ಷರಾದ ಹೇಮಾ ನಂದೀಶ್, ರಾಘವೇಂದ್ರ, ಮಹಾವೀರ್ ಜೈನ್, ಕಾರ್ಯಾಧ್ಯಕ್ಷೆ ರಾಣಿ, ಕಾರ್ಯದರ್ಶಿ ಡಾ.ಬಿ.ಎಸ್. ಸೀತಾಲಕ್ಷ್ಮಿ, ಜಿಎಸ್‌ಎಸ್ ಯೋಗ ಸಂಸ್ಥೆ ಮುಖ್ಯಸ್ಥ ಶ್ರೀಹರಿ ಮೊದಲಾದವರು ಇದ್ದರು.