ವರದಿ : ದೀಪಕ್, ಏಷ್ಯಾನೆಟ್ ಸುವರ್ಣ ನ್ಯೂಸ್
ಕೋಲಾರ (ಜೂನ್ 21): ಇಂದು ಯೋಗ ದಿನಾಚರಣೆ ಅಂಗವಾಗಿ ಕೋಲಾರ ಜಿಲ್ಲಾಡಳಿತ ಐತಿಹಾಸಿಕ ಸ್ಥಳದಲ್ಲಿ ಸಾವಿರಾರು ಜನರೊಂದಿಗೆ ಯೋಗ ದಿನಾಚರಣೆಯನ್ನು ಆಚರಣೆ ಮಾಡಿ ಚರಿತ್ರೆ ಸೃಷ್ಟಿಮಾಡಿದೆ, ಶತಶೃಂಗ ಪರ್ವತದ ಮೇಲೆ ಸಾವಿರಾರು ವಿದ್ಯಾರ್ಥಿಗಳು ವಿವಿದ ಯೋಗದ ಭಂಗಿಗಳನ್ನು ಪ್ರದರ್ಶನ ಮಾಡವ ಮೂಲಕ ಗಮನ ಸೆಳೆಯಿತು.
ನೂರಾರು ವಾಹನಗಳಲ್ಲಿ ಬೆಟ್ಟವೇರುತ್ತಿರುವ ವಿದ್ಯಾರ್ಥಿಗಳು ಹಾಗೂ ಯೋಗ ಪಟುಗಳು, ಬೆಟ್ಟದಲ್ಲಿ ಇರುವ ಸಾಲಿನಂತೆ ಕಂಡು ಬರುವ ಸಾವಿರಾರು ವಿದ್ಯಾರ್ಥಿಗಳು, ಇನ್ನೊಂದು ಬೆಟ್ಟಗುಡ್ಟಗಳ ಮಧ್ಯೆ ಬೃಹತ್ ವೇದಿಕೆಯಲ್ಲಿ ಯೋಗ ಮಾಡುತ್ತಿರುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು, ಇಂಥಾದೊಂದು ದೃಷ್ಯಗಳು ಕಂಡು ಬಂದಿದ್ದು ಕೋಲಾರದ ಶತಶೃಂಗ ಪರ್ವತದ ಬೆಟ್ಟದ ಮೇಲೆ. ಹೌದು ಕೋಲಾರ ಜಿಲ್ಲಾಡಳಿತ ಇಂದು ಯೋಗ ದಿನಾಚರಣೆಯನ್ನು ಐತಿಹಾಸಿಕ ಸ್ಥಳದಲ್ಲಿ ಮಾಡುವ ಮೂಲಕ ಚರಿತ್ರೆ ಸೃಷ್ಟಿಸಿದೆ.
ಐತಿಹಾಸಿಕ ಹಿನ್ನೆಲೆ ಹೊಂದಿರುವ ದಕ್ಷಿಣಕಾಶಿ ಅಂತರಗಂಗೆ ಬೆಟ್ಟದ ಮೇಲಿನ ತಪ್ಪಲಿನಲ್ಲಿ 20 ಸಾವಿರಕ್ಕೂ ಹೆಚ್ಚು ಜನರು ಏಕಕಾಲದಲ್ಲಿ ಯೋಗ ಮಾಡುವ ಮೂಲಕ ಇಂದು ದೇಶದ ಗಮನ ಸೆಳೆದಿದೆ. ಇಂದು ಬೆಳಿಗ್ಗೆ 5 ಗಂಟೆ ಯಿಂದಲೇ ಕೋಲಾರ ನಗರ ಸೇರಿದಂತೆ ಜಿಲ್ಲೆಯ ವಿವಿದ ತಾಲ್ಲೂಕುಗಳಿಂದ ಸಾವಿರಾರು ಶಾಲಾ ಮಕ್ಕಳು ಶಾಲಾ ಬಸ್ಗಳಲ್ಲಿ ಬೆಟ್ಟದ ಮೇಲಿನ ನಿಗದಿತ ಸ್ಥಳಕ್ಕೆ ಸಾವಿರಾರು ಸಂಖ್ಯೆಯಲ್ಲಿ ಬಂದು ತಲುಪಿದರು,ಮತ್ತೊಂದು ತಂಡ ಅಂತರಗಂಗೆ ಬೆಟ್ಟದ ಬುಡದಿಂದ ಹಿಡಿದು ನಾಲ್ಕು ಕಿ.ಮೀ ನಡೆದುಕೊಂಡು ಬಂದು ಬೆಟ್ಟದ ಮೇಲಿನ ಸ್ಥಳ ತಲುಪಿದರು,ನಂತರ ಸುಂದರ ಬೆಟ್ಟಗುಡ್ಡಗಳ ನಡುವಿನ ವಿಶಾಲ ಪ್ರದೇಶದಲ್ಲಿ ಏಕಕಾಲಕ್ಕೆ ಸುಮಾರು 20 ಸಾವಿರಲ್ಲೂ ಅಧಿಕ ಜನರು ಯೋಗ ಮಾಡಿದರು.
ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ಪಾರ್ಕಿಂಗ್ ಪರದಾಟ!
ಪತಂಜಲಿ ಯೋಗ ಶಿಕ್ಷಣ ಸಮಿತಿಯ ಯೋಗ ಶಿಕ್ಷಕರುಗಳ ಮಾರ್ಗದರ್ಶನದಂತೆ ಸಂಸದ ಎಸ್.ಮುನಿಸ್ವಾಮಿ, ವಿಧಾನಪರಿಷತ್ ಸದಸ್ಯರಾದ ಗೋವಿಂದರಾಜು, ವೈ.ಎ.ನಾರಾಯಣಸ್ವಾಮಿ, ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಾವಿರಾರು ಸಂಖ್ಯೆಯ ವಿದ್ಯಾರ್ಥಿಗಳು ಯೋಗ ಮಾಡಿ ಖುಷಿ ಪಟ್ಟರು.
ಇನ್ನು ಕಳೆದೊಂದು ವಾರದಿಂದ ಬಿಟ್ಟು ಬಿಡದೆ ಸುರಿಯುತ್ತಿದ್ದ ಮಳೆ ಸಾಕಷ್ಟು ಆತಂಕ ಹುಟ್ಟಿಸಿತ್ತು,ಎಲ್ಲಿ ಮಳೆ ಬಂದು ಕಾರ್ಯಕ್ರಮಕ್ಕೆ ಅಡ್ಡಿ ಪಡಿಸುತ್ತದೋ ಅನ್ನೋ ಭಯವಿತ್ತು,ಬೆಟ್ಟದ ಮೇಲೆ ಸಾಕಷ್ಟು ತಯಾರಿಗಳನ್ನು ಮಾಡಿಕೊಂಡು ಕಾರ್ಯಕ್ರಮಕ್ಕೆ ಅಡ್ಡಿಯಾಗದಂತೆ ನಿನ್ನೆಯೇ ಹಲವು ದೇವಾಲಯಗಳಲ್ಲಿ ಪೂಜೆ ಸಲ್ಲಿಸುವ ಮೂಲಕ ಮಳೆಯಾಗದ ಕಾರ್ಯಕ್ರಮ ಯಶಸ್ವಿಯಾಗಲೆಂದು ಸಂಸದ ಮುನಿಸ್ವಾಮಿ ಹಾಗೂ ತಂಡದವರು ದೇವರ ಮೊರೆ ಹೋಗಲಾಗಿತ್ತು ಅದರಂತೆ ಕಳೆದ ರಾತ್ರಿ ಹಾಗೂ ಇಂದು ಮುಂಜಾನೆ ಮಳೆಯಾಗಲಿಲ್ಲ, ಪರಿಣಾಮ ನಿರೀಕ್ಷೆಗೂ ಮೀರಿ ಜನರು ಹಾಗು ವಿದ್ಯಾರ್ಥಿಗಳು ಬಂದು ಸೇರಿದರು.
ಇನ್ನು ಬೆಟ್ಟದ ಮೇಲೆ ಬರುವ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಸೇರಿದಂತೆ ಉಪಹಾರ,ಕುಡಿಯುವ ನೀರಿನ ವ್ಯವಸ್ಥೆಗಳನ್ನು ಮಾಡಲಾಗಿತ್ತು. ನಾಲ್ಕೈದು ಕೌಂಟರ್ಗಳಲ್ಲಿ ಯೋಗ ನಂತರ ಉಪಹಾರ ನೀಡಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಂತು ಸುಂದರ ಪ್ರದೇಶವನ್ನು ನೋಡಿ ಪುಲ್ ಖುಷಿಯಾದರೆ, ಕಾರ್ಯಕ್ರಮ ಯಶಸ್ವಿಯಾದ ಹಿನ್ನೆಲೆ ಇಡೀ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದ ಸಂಸದ ಮುನಿಸ್ವಾಮಿ ನಿಟ್ಟುಸಿರು ಬಿಟ್ಟು ಬಾವುಕರಾದರು.ಅಲ್ಲದೆ ಈ ಸ್ಥಳವನ್ನು ಸರ್ಕಾರ ಯಾವುದೇ ಭೂಗಳ್ಳರ ಪಾಲಾಗದಂತೆ ನೋಡಿಕೊಳ್ಳಬೇಕು ಎಂದರು.
ಯೋಗ ಬಿಟ್ಟು ಲಗೋರಿ ಆಡಿದ ಬಿಜೆಪಿ ಶಾಸಕಿ ಪೂರ್ಣಿಮಾ, ವಿಡಿಯೋ ವೈರಲ್
ಒಟ್ಟಾರೆ ಇಂದು ವಿಶ್ವ ಯೋಗ ದಿನಾಚರಣೆ ಅಂಗವಾಗಿ ಕೋಲಾರ ಜಿಲ್ಲಾಡಳಿತ ಮಾಡಿದ ವಿಶೇಷ ಪ್ಲಾನ್ ಅಂದುಕೊಂಡಂತೆ ನಡೆದು ಶತಶೃಂಗ ಬೆಟ್ಟದ ಮೇಲೆ ಯೋಗ ಮಾಡಿ ಸಕ್ಸಸ್ ಆಗಿದೆ. ಈ ಮೂಲಕ ಜಿಲ್ಲಾಡಳಿತ ಹಾಗೂ ಸಂಸದ ಮುನಿಸ್ವಾಮಿ ಮೋದಿ ಇಚ್ಚೆಯಂತೆ ಐತಿಹಾಸಿ ಸ್ಥಳದಲ್ಲಿ ಯೋಗದಿನ ಗುರುತುಮಾಡಿ ದಾಖಲೆ ನಿರ್ಮಿಸಿದ್ದಾರೆ.