ಬಳ್ಳಾರಿ: ಅವೈಜ್ಞಾನಿಕ ರಸ್ತೆ ನಿರ್ಮಾಣಕ್ಕೆ ಸ್ಥಳೀಯರ ಆಕ್ರೋಶ, ಅಧಿಕಾರಿಗಳ ಎಡವಟ್ಟಿಗೆ ಹೈರಾಣಾದ ಜನ..!

ರಸ್ತೆ ಇಲ್ಲದೇ ಇದ್ರೂ ಪರ್ವಾಗಿಲ್ಲ. ಈ ರೀತಿಯ ರಸ್ತೆ ನಿರ್ಮಾಣ ಮಾಡಬೇಡಿ ಎಂದು ಲೋಕೋಪಯೋಗಿ ಇಲಾಖೆ ಮತ್ತು ಪಾಲಿಕೆ ವಿರುದ್ಧ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ ಜನ.


ವರದಿ: ನರಸಿಂಹ ಮೂರ್ತಿ ಕುಲಕರ್ಣಿ

ಬಳ್ಳಾರಿ(ಅ.06): ಏರಿಯಾದಲ್ಲಿ, ಸಣ್ಣ ಸಣ್ಣ ಓಣಿಗಳಲ್ಲಿ ಸಾರ್ವಜನಿಕ ರಸ್ತೆ ಅಭಿವೃದ್ಧಿ ಮಾಡುತ್ತೇವೆ. ಹೊಸ ರಸ್ತೆ ಹಾಕ್ತೇವೆ ಎಂದ್ರೇ ಯಾರು ಬೇಡ ಎನ್ನುತ್ತಾರೆ ಹೇಳಿ..? ಆದ್ರೇ ಬಳ್ಳಾರಿಯಲ್ಲಿ ಅಧಿಕಾರಿಗಳು ಮಾಡುತ್ತಿರೋ ಎಡವಟ್ಟಿನಿಂದಾಗಿ ಜನರು ಹಳೇ ರಸ್ತೆ ಇದ್ರೂ ಪರ್ವಾಗಿಲ್ಲ. ಹೊಸ ರಸ್ತೆ ಮಾಡಬೇಡಿ ಎನ್ನುತ್ತಿದ್ದಾರೆ. ಅವೈಜ್ಞಾಕ ಹೊಸ ರಸ್ತೆ ನಿರ್ಮಾಣದಿಂದಾಗಿ ಮನೆಗಳು ರಸ್ತೆಗಿಂತ ಕೆಳಗೆ ಹೋಗುತ್ತಿವೆ. ಪರಿಣಾಮ ಮಳೆ ನೀರಷ್ಟೇ ಅಲ್ಲದೇ ಕಾಲುವೆ ಚರಂಡಿ ನೀರು ಮನೆಯೊಳಗೆ ನುಗ್ಗಿದಂತಾಗಿದೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರೋ ಜನರು ಇದೀಗ ನಮಗೆ ರಸ್ತೆಯೇ ಬೇಡ ಎನ್ನುತ್ತಿದ್ದಾರೆ.

Latest Videos

ಅವೈಜ್ಞಾನಿಕ ಹೊಸ ರಸ್ತೆ ನಿರ್ಮಾಣ ಕೆಳಕ್ಕೆ ಜಾರುತ್ತಿರೋ ಮನೆಗಳು

ತಗ್ಗು ತೆಗೆಯದೇ ಹಳೇ ರಸ್ತೆಯ ಮೇಲೆಯೇ ಹೊಸ ರಸ್ತೆ ನಿರ್ಮಾಣ… ಕೆಳಕ್ಕೆ ಜಾರಿದ ಮನೆಗಳು, ಮೇಲೆ ಬರುತ್ತಿರೋ ಚರಂಡಿ ನೀರು.. ಅವೈಜ್ಞಾನಿಕ ರಸ್ತೆ ನಿರ್ಮಾಣ ಹಿನ್ನೆಲೆ ಪಾಲಿಕೆ ಅಧಿಕಾರಿಗಳ ವಿರುದ್ಧ ಜಿಲ್ಲಾಡಳಿತಕ್ಕೆ ದೂರು.. ಹೌದು,  ಈ ರಸ್ತೆಯನ್ನೊಮ್ಮೆ ನೋಡಿ ಇಲ್ಲಿ ಅಲ್ಪ ಸ್ವಲ್ಪ ಕಿತ್ತು ಹೋಗಿರೋ ಡಾಂಬರ್ ರಸ್ತೆಯ ಮೇಲೆಯೇ ಮತ್ತೊಂದು ಡಾಂಬರು ರಸ್ತೆ ಹಾಕೋ ಮೂಲಕ ಮನೆಗಳಿಂಗಿತ ರಸ್ತೆಯನ್ನೆ ಮತ್ತಷ್ಟು ಎತ್ತರಕ್ಕೆ ಬರೋ ಹಾಗೆ ಮಾಡುತ್ತಿದ್ದಾರೆ. ನಿಯಮಗಳ ಪ್ರಕಾರ ಯಾವುದೇ ರಸ್ತೆ ನಿರ್ಮಾಣ ಮಾಡೋ ಮುನ್ನ ಈ  ಹಿಂದೆ ಇರೋ ರಸ್ತೆಯ ಡಾಂಬರನ್ನು ಸಂಪೂರ್ಣವಾಗಿ ತೆಗೆದು, ಕೆಳಗೆ ಇರೋ ಸ್ವಲ್ಪ ಮಣ್ಣನ್ನು ಅಗೆಯೋ ಮೂಲಕ ಗಟ್ಟಿಯಾದ ಗ್ರಾವೆಲ್ ಮಣ್ಣು ಹಾಕಿ. ಡಾಂಬರನಿಂದ  ಹೊಸ ರಸ್ತೆ ನಿರ್ಮಾಣ ಮಾಡಬೇಕು. ಹೀಗೆ ಮಾಡಿದ್ರೇ, ಇರೋ ಮನೆಗಳ ಮತ್ತು ಚರಂಡಿ ವ್ಯವಸ್ಥೆಯಲ್ಲಿ ಯಾವುದೇ  ತೊಂದರೆಯಾಗೋದಿಲ್ಲ. ಆದ್ರೇ, ಬಳ್ಳಾರಿಯಲ್ಲಿ ಮಾತ್ರ ಇರೋ ರಸ್ತೆ ಮೇಲೆಯೇ ಹೊಸ ರಸ್ತೆ ನಿರ್ಮಾಣ ಮಾಡುತ್ತಿರೋದ್ರಿಂದ ಚರಂಡಿಗಳು ಮತ್ತು ಮನೆಯಲ್ಲಿ ರಸ್ತೆಗಿಂತ ಕೆಳಕ್ಕಿಳಿಯುತ್ತಿವೆ. ಇದರಿಂದಾಗಿ ಮನೆಯಲ್ಲಿರೋ ಶೌಚಾಲಯದ ನೀರು ಹೊರ ಹೋಗದೇ ಮನೆಯೊಳಗೆ ರಿವರ್ಸ್ ಆಗಿ ಬರುವ ಸಾಧ್ಯತೆ ಇದೆ. ಹೀಗಾಗಿ ಈ ರೀತಿಯ ರಸ್ತೆ ನಿರ್ಮಾಣ ಮಾಡೋದು ಬೇಡವೇ ಬೇಡ ಎನ್ನುತ್ತಿದ್ಧಾರೆ ಇಲ್ಲಿಯ ನಿವಾಸಿಯಾಗಳಾದ ಮಂಜುನಾಥ. ಚಂದ್ರಶೇಖರ..

ಕಾಂಗ್ರೆಸ್ ಸೇರಿಲ್ಲ ಕೇವಲ ಸರ್ಕಾರಕ್ಕೆ ಬೆಂಬಲ ನೀಡಿದ್ದೇನೆ: ಉಲ್ಟಾ ಹೊಡೆದ ಹರಪನಹಳ್ಳಿ ಶಾಸಕಿ ಎಂ.ಪಿ.ಲತಾ

ಪಾಲಿಕೆ ಅಧಿಕಾರಿಗಳ ದೂರು ನೀಡಿದ ಜನರು

ಸದ್ಯ ರೆಡ್ಡಿ ಬೀದಿಯಲ್ಲಿ ಮಾಡುತ್ತಿರೋ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ದೂರು ನೀಡಿರೋ ಸ್ಥಳೀಯರು. ಈ ಹಿಂದೆಯೂ ಇದೇ ರೀತಿ ಮೂರು ನಾಲ್ಕು ಬಾರಿ ರಸ್ತೆ ನಿರ್ಮಾಣ ಮಾಡಿರೋದ್ರಿಂದ ಇಲ್ಲಿಯ ಮನೆಗಳ ಮೂರು ಮೆಟ್ಟಿಲುಗಳು ಮುಳುಗಿವೆ. ಇದೀಗ ಮತ್ತೊಮ್ಮೆ ಆ ರೀತಿಯಾದ್ರೇ, ಮನೆಗಳು ರಸ್ತೆಗಿಂತ ಕೆಳಕ್ಕೆ ಕುಸಿಯುವ ಭೀತಿ ಇದೆ. ಹೀಗಾಗಿ ರಸ್ತೆ ಇಲ್ಲದೇ ಇದ್ರೂ ಪರ್ವಾಗಿಲ್ಲ. ಈ ರೀತಿಯ ರಸ್ತೆ ನಿರ್ಮಾಣ ಮಾಡಬೇಡಿ ಎಂದು ಲೋಕೋಪಯೋಗಿ ಇಲಾಖೆ ಮತ್ತು ಪಾಲಿಕೆ ವಿರುದ್ಧ ಜಿಲ್ಲಾಧಿಕಾರಿಗಳಿಗೆ ದೂರನ್ನು ನೀಡಿದ್ದಾರೆ.

ಹೊಸ ರಸ್ತೆ ಬೇಡವೇ ಬೇಡ ಹಳೇ ರಸ್ತೆಯೇ ಇರಲಿ

ರಸ್ತೆ ನಿರ್ಮಾಣಕ್ಕೆ ಕೋಟಿ ಕೋಟಿ ಖರ್ಚು ಮಾಡೋ ಸರ್ಕಾರ, ಆ ರಸ್ತೆ ನಿರ್ಮಾಣವಾದ ಬಳಿಕ ಸ್ಥಳೀಯರಿಗೆ ಸಹಾಯವಾಗುತ್ತದೆಯೋ ಅಥವಾ ಅದರಿಂದ ಯಾರಿಗಾದ್ರೂ ತೊಂದರೆಯಾಗುತ್ತದೆಯೋ ಅನ್ನೋ ಬಗ್ಗೆ ಕನಿಷ್ಠ ಯೋಚನೆ ಮಾಡೋದಿಲ್ಲ. ಅಧಿಕಾರಿಗಳು ಮಾಡಿದ ಎಡವಟ್ಟಿಗೆ ಜನರೀಗ ಹೊಸರಸ್ತೆಯೇ ಬೇಡ ಎನ್ನುವಂತಾಗಿದೆ.

click me!