ಅಕ್ರಮ ವಲಸಿಗರ ಐಡೆಂಟಿಟಿ ಚೆಕ್‌ಗೆ ವಿರೋಧ, ಎಸ್‌ಪಿ ಗರಂ

By Suvarna NewsFirst Published Jan 25, 2020, 11:13 AM IST
Highlights

ಮಂಗಳೂರಿನಲ್ಲಿ ಬಾಂಬ್‌ ಪ್ರಕರಣಕ್ಕೆ ಸಂಬಂಧಿಸಿ ಮುಂಜಾಗೃತಾ ಕ್ರಮವಾಗಿ ಮಡಿಕೇರಿಯಲ್ಲಿ ಐಡೆಂಟಿಟಿ ಚೆಕ್ಕಿಂಗ್‌ಗೆ ಈಗ ವಿರೊಧ ವ್ಯಕ್ತವಾಗಿದೆ. ಬಿಜೆಪಿ ಒತ್ತಡದಿಂದ ಪೊಲೀಸರು ಈ ರೀತಿ ವರ್ತಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಮಡಿಕೇರಿ(ಜ.25): ಕೊಡಗಿನಲ್ಲಿ ಅಕ್ರಮ ವಲಸಿಗರ ತಪಾಸಣೆ ನಡೆಸಲಾಗುತ್ತಿದ್ದು, 11 ಸಾವಿರಕ್ಕೂ ಅಧಿಕ ಮಂದಿಯ ಐಡೆಂಟಿಟಿ ಚೆಕ್ ಮಾಡಲಾಗಿದೆ. ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆ ಪೊಲೀಸ್ ಕಾರ್ಯಾಚರಣೆ ನಡೆಸುತ್ತಿದ್ದಾರೆ.

"

ದಾಖಲೆಗಳನ್ನು ಪರಿಶೀಲಿಸುವ ಕಾರ್ಯಚರಣೆ ಮಾಡದಂತೆ ಇಲಾಖೆ ಮೇಲೆ ಒತ್ತಡ ಹೇರಲಾಗುತ್ತಿದೆ. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಎಸ್‌ಪಿ ಪೊಲೀಸ್ ಇಲಾಖೆಯನ್ನ ಟಾರ್ಗೆಟ್ ಮಾಡುತ್ತಿದ್ದಾರೆ. ಕೆಲವರು ಈಗಾಗಲೇ ನಮ್ಮ‌ ಬೆನ್ನು ಬಿದ್ದಿದ್ದಾರೆ. ಅಪರಾಧ ತಡೆಯೋದಕ್ಕಾಗಿ ನಾವು ತಪಾಸಣೆ ಮಾಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಪತ್ನಿ, ಪುತ್ರಿಯನ್ನು ದೊಣ್ಣೆಯಿಂದಲೇ ಬಡಿದು ಕೊಂದ..!

ಐಡೆಂಟಿಟಿ ಚೆಕ್ ಬಗ್ಗೆ ವಿಸ್ತಾರವಾಗಿ ಯೋಚನೆ ಮಾಡುತ್ತಿಲ್ಲ ಎಂದು ವಿರೋಧ ವ್ಯಕ್ತವಾಗುತ್ತಿರುವ ಬಗ್ಗೆ ಕೊಡಗು ಎಸ್‌ಪಿ ಡಾ. ಸುಮನ್ ಡಿ.ಪಿ ಅಸಮಾಧಾನ ಹೊರಹಾಕಿದ್ದಾರೆ. ಬಿಜೆಪಿಗರ ಒತ್ತಡದಿಂದ ಈ ರೀತಿ ಮಾಡುತ್ತಿದ್ದಾರೆಂದು ಪ್ರಗತಿಪರರು ವಾದಿಸುತ್ತಿದ್ದಾರೆ.

ಅಕ್ರಮ ವಲಸಿಗರ ಪತ್ತೆಗೆ ಕೊಡಗು ಪೊಲೀಸ್ ಬೇಟೆ..!

ಎನ್‌ಆರ್‌ಸಿ ಜಾರಿ ನಿಟ್ಟಿನಲ್ಲಿ ಕಾರ್ಮಿಕರ ತಪಾಸಣೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಇದರಿಂದ ಕಾರ್ಮಿಕರ ಹಕ್ಕುಗಳಿಗೆ ಧಕ್ಕೆಯಾಗುತ್ತಿದೆ. ಸೋಷಿಯಲ್ ಮೀಡಿಯಾ, ಪತ್ರಿಕಾ ಹೇಳಿಕೆ‌ ಮೂಲಕ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.

click me!