67 ವರ್ಷದ ವೃದ್ಧನಿಗೆ ಕೊರೋನಾ ಧೃಢ| ಮನೆಗೆ ಬೀಗ ಹಾಕಿ ಎಲ್ಲರೂ ಖಾಲಿ ಮಾಡಿಕೊಂಡು ಹೋಗಿ, ದೂರದ ತಮ್ಮ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದ ಜನರು|ಈ ರೀತಿ ಮನೆಯನ್ನು ತೊರೆಯುವುದರಿಂದ ಸಮಸ್ಯೆ ನೀಗುವುದಿಲ್ಲ: ಡಿಸಿ ಸುನೀಲ್‌ಕುಮಾರ|
ಕೊಪ್ಪಳ(ಜು. 01): ನಗರದ ಕುರುಬರ ಓಣಿಯಲ್ಲಿ 67 ವರ್ಷದ ವೃದ್ಧನಿಗೆ ಕೊರೋನಾ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಸುತ್ತಮುತ್ತಲ ಮನೆಯವರು ಮನೆಯನ್ನೇ ತೊರೆದಿದ್ದಾರೆ.
ಮನೆಗೆ ಬೀಗ ಹಾಕಿಕೊಂಡು ಎಲ್ಲರೂ ಖಾಲಿ ಮಾಡಿಕೊಂಡು ಹೋಗಿ, ದೂರದ ತಮ್ಮ ಸಂಬಂಧಿಕರ ಮನೆಯಲ್ಲಿ ಇದ್ದಾರೆ. 67 ವರ್ಷದ ವೃದ್ಧನನ್ನು ಸಾರಿ ಕೇಸ್‌ನಲ್ಲಿ ದಾಖಲು ಮಾಡಿ, ಚಿಕಿತ್ಸೆ ನೀಡಲಾಗುತ್ತಿತ್ತು. ಈ ವೇಳೆ ಸ್ವ್ಯಾಬ್ ಪರೀಕ್ಷೆ ಮಾಡಿದಾಗ ಕೊರೋನಾ ದೃಢಪಟ್ಟಿದೆ. ಇದರಿಂದ ಆತನನ್ನು ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ವಿಷಯ ಗೊತ್ತಾಗುತ್ತಿದ್ದಂತೆ ಕೊಪ್ಪಳ ನಗರದ ಕುರುಬರ ಓಣಿಯ ಕೆಲ ಮನೆಯವರು ಮನೆಗೆ ಬೀಗ ಜಡಿದು ಹೋಗಿದ್ದಾರೆ.
undefined
ಎಸ್‌ಎಸ್‌ಎಲ್‌ಸಿ ಪರೀಕ್ಷೆ: ವಿದ್ಯಾರ್ಥಿಗಳಿಗೆ ಸೋಂಕು ತಗುಲದಂತೆ ಕ್ರಮ
ಈ ರೀತಿಯಾಗಿ ಮನೆ ತೊರೆಯುವುದು ಸರಿಯಲ್ಲ. ತಮ್ಮಲ್ಲಿ ಯಾರಾಗಾದರೂ ಕೋವಿಡ್ ಲಕ್ಷಣಗಳು ಇದ್ದರೆ ಕೂಡಲೇ ಅವರು ತಪಾಸಣೆಗೆ ಒಳಗಾಗಬೇಕು. ಅವರಿಗೆ ಅಗತ್ಯ ಚಿಕಿತ್ಸೆ ನೀಡುತ್ತೇವೆ. ಆದರೆ, ಈ ರೀತಿ ಮನೆಯನ್ನು ತೊರೆಯುವುದರಿಂದ ಸಮಸ್ಯೆ ನೀಗುವುದಿಲ್ಲ ಎಂದು ಡಿಸಿ ಪಿ. ಸುನೀಲ್‌ಕುಮಾರ ಅವರು ಹೇಳಿದ್ದಾರೆ.