ಉತ್ತರ ಕನ್ನಡ : ಏಕಾ ಏಕಿ ಬಸ್ ಸೇವೆ ಸ್ಥಗಿತ - ಜನರ ಆಕ್ರೋಶ

By Kannadaprabha News  |  First Published Aug 19, 2019, 1:30 PM IST

ಏಕಾ ಏಕಿ ಬಸ್ ಸೇವೆ ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಇಲ್ಲಿನ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಹಾರಿಕೆ ಉತ್ತರ ದೊರೆಯುತ್ತಿದೆ. 


ಕಾರವಾರ [ಆ.19]: ಸಿದ್ದಾಪುರದಿಂದ ಹಾರ್ಸಿಕಟ್ಟಾ, ಮುಠ್ಟಳ್ಳಿ, ಕಿಲಾರ, ಹಿರೇಕೈ, ಹಾಲ್ಕಣಿ, ಕೋಡ್ಸರ, ಕಾನಸೂರು ಮಾರ್ಗದ ಬಸ್ ಸೇವೆ ಏಕಾಏಕಿ ಸ್ಥಗಿತಗೊಂಡಿದೆ. ಈ ಮಾರ್ಗದ ವಿದ್ಯಾರ್ಥಿಗಳಿಗೆ ಸುಮಾರು 50 ರಿಂದ 60 ಬಸ್ ಪಾಸನ್ನು ವಿತರಿಸಿ ಬಸ್ ಸೇವೆಯನ್ನು ಸ್ಥಗಿತಗೊಳಿಸಿದ್ದರಿಂದ ಆ ಭಾಗದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. 

ಇದನ್ನು ವಿಭಾಗೀಯ ನಿಯಂತ್ರಣಾಧಿಕಾರಿಗಳನ್ನು ಕೇಳಿದರೆ ಮಾಣಿ ಹೊಳೆ ಸೇತುವೆ ಕುಸಿತ ಹಿನ್ನೆಲೆಯಲ್ಲಿ ಆ ಮಾರ್ಗದ ಎಲ್ಲ ಬಸ್‌ಗಳನ್ನು ಇದೇ ಮಾರ್ಗದಲ್ಲಿ ಓಡಿಸುತ್ತಿದ್ದೇವೆ.  ಅದೇ ಬಸ್ ಹತ್ತಿ ಕೋಡ್ಸರ ದಲ್ಲಿ ಇಳಿದು ಬಾಳೇಸರ ಬಸ್ ಹತ್ತಿ ಶಿರಸಿ ತಲುಪಿ ಎಂದು ಉಡಾಫೆ ಉತ್ತರ
ನೀಡುತ್ತಾರೆ. 

Latest Videos

undefined

ಬಸ್ ಸೇವೆ ಸ್ಥಗಿತಗೊಳಿಸಿದ್ದರಿಂದ ಹಾಲ್ಕಣಿ ಶಾಲೆ, ಕಾನಸೂರು ಪ್ರೌಢಶಾಲೆ, ನಾಣಿಕಟ್ಟಾ,ಯಡಳ್ಳಿ, ಶಿರಸಿ ಶಾಲಾ ಕಾಲೇಜಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗಿದೆ. ಕಳೆದ ವರ್ಷ ಹಿರೇಕೈ ಗ್ರಾಮದಲ್ಲಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಸೇರಿ ಬಸ್ ತಡೆ ನಡೆಸಿ ಪ್ರತಿಭಟನೆ ಸಹ ನಡೆಸಿದ್ದರು. 

ಹೆಚ್ಚಿನ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಬಸ್ ಬೆಳಗ್ಗೆ ಸಿದ್ದಾಪುರದಿಂದ 7 .30  ಹೊರಟು 9 ಗಂಟೆಗೆ  ಶಿರಸಿ ನಗರವನ್ನು ತಲುಪುತ್ತಿತ್ತು. ಇನ್ನು ಒಂದು ವಾರದೋಳಗೆ ಬಸ್ ಸೇವೆಯನ್ನು ಪುನರಾರಂಭಗೋಳಿಸದಿದ್ದರೆ. ಮತ್ತೆ ಬೃಹತ್ ಪ್ರತಿಭಟನೆ ಮಾಡುವುದಾಗಿ ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.

click me!