ಕಳೆದ ನಾಲ್ಕು ದಿನದ ಹಿಂದೆ ಎನ್.ಟಿ.ಟಿ.ಎಫ್ ಬಳಿ ಚಿರತೆ ರಸ್ತೆಯಲ್ಲಿ ಹಾದು ಹೋಗಿರುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದಾದ ಬಳಿಕ ಆನೇಕಲ್ ಹಾಗೂ ಕೆ.ಆರ್.ಪುರಂ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಚಿರತೆಗಾಗಿ ಶೋಧಿಸಿದ್ದರು. ಆದರೆ ಚಿರತೆ ಪತ್ತೆ ಆಗಿರಲಿಲ್ಲ. ಶುಕ್ರವಾರ ಎಲೆಕ್ಟ್ರಾನಿಕ್ ಸಿಟಿ ಡಿ.ಮಾರ್ಟ್ ಹಿಂಭಾಗದಲ್ಲಿನ ಕೆರೆ ಬಳಿ ಚಿರತೆ ಹೆಜ್ಜೆ ಗುರುತು ಪತ್ತೆ ಆಗಿದ್ದು, ಈಗ ಮತ್ತಷ್ಟು ಆತಂಕ ಸೃಷ್ಟಿ ಮಾಡಿದೆ.
ಬೆಂಗಳೂರು ದಕ್ಷಿಣ(ಸೆ.22): ಎಲೆಕ್ಟ್ರಾನಿಕ್ ಸಿಟಿ ಟೋಲ್ ಬಳಿ ಹೊಸೂರು-ಬೆಂಗಳೂರು ಮುಖ್ಯರಸ್ತೆಯಲ್ಲಿ ಕಾಣಿಸಿಕೊಂಡ ಚಿರತೆಯ ಹೆಜ್ಜೆಯ ಗುರುತು ಈಗ ಡಿಮಾರ್ಟ್ ಹಿಂಬದಿಯ ಕೆರೆಯ ಬಳಿ ಶುಕ್ರವಾರ ಪತ್ತೆ ಆಗಿದೆ. ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ. ಇದರ ಬೆನ್ನಲ್ಲೇ ಚಿರತೆಯ ಸೆರೆಗೆ ಅರಣ್ಯ ಇಲಾಖೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಕಳೆದ ನಾಲ್ಕು ದಿನದ ಹಿಂದೆ ಎನ್.ಟಿ.ಟಿ.ಎಫ್ ಬಳಿ ಚಿರತೆ ರಸ್ತೆಯಲ್ಲಿ ಹಾದು ಹೋಗಿರುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದಾದ ಬಳಿಕ ಆನೇಕಲ್ ಹಾಗೂ ಕೆ.ಆರ್.ಪುರಂ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಚಿರತೆಗಾಗಿ ಶೋಧಿಸಿದ್ದರು. ಆದರೆ ಚಿರತೆ ಪತ್ತೆ ಆಗಿರಲಿಲ್ಲ. ಶುಕ್ರವಾರ ಎಲೆಕ್ಟ್ರಾನಿಕ್ ಸಿಟಿ ಡಿ.ಮಾರ್ಟ್ ಹಿಂಭಾಗದಲ್ಲಿನ ಕೆರೆ ಬಳಿ ಚಿರತೆ ಹೆಜ್ಜೆ ಗುರುತು ಪತ್ತೆ ಆಗಿದ್ದು, ಈಗ ಮತ್ತಷ್ಟು ಆತಂಕ ಸೃಷ್ಟಿ ಮಾಡಿದೆ.
ಚಿರತೆ ಇದೇ ಪರಿಸರದಲ್ಲಿ ಓಡಾಡುತ್ತಿರುವ ಬಗ್ಗೆ ಹಲವು ಹೆಜ್ಜೆ ಗುರುತುಗಳು ಪತ್ತೆ ಆಗಿವೆ. ಸಿಸಿಟಿವಿ ದೃಶ್ಯಾವಳಿಗಳು ಕೂಡ ಸಿಕ್ಕಿರುವ ಹಿನ್ನೆಲೆಯಲ್ಲಿ ಚಿರತೆ ಕಾರ್ಯಪಡೆಯ 40 ಸಿಬ್ಬಂದಿ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಬೀಡು ಬಿಟ್ಟಿದ್ದಾರೆ. ಚಿರತೆ ಯಾವ ಕಡೆ ಓಡಾಡುತ್ತಿದೆ, ಎಲ್ಲಿ ಅಡಗಿದೆ ಎನ್ನುವ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಆನೇಕಲ್ ಹಾಗೂ ಕೆ.ಆರ್.ಪುರಂ ವಲಯ ಅರಣ್ಯ ಇಲಾಖೆ ಅಧಿಕಾರಿಗಳ ತಂಡದಲ್ಲಿ 20 ಸಿಬ್ಬಂದಿ ಸೇರಿ ಒಟ್ಟು 60 ಜನ ಎಲೆಕ್ಟ್ರಾನಿಕ್ ಸಿಟಿ ಸುತ್ತಮುತ್ತ ಚಿರತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿಗೂ ಬಂತು ಚಿರತೆ, ಆತಂಕದಲ್ಲಿ ಐಟಿ ಬಿಟಿ ಉದ್ಯೋಗಿಗಳು!
3 ಕಡೆ ಬೋನ್ ಇಟ್ಟು ಕಾರ್ಯಾಚರಣೆ
ಚಿರತೆ ಓಡಾಡಿರುವ ಹೆಜ್ಜೆ ಗುರುತು ಪತ್ತೆ ಆಗಿರುವ ಹಾಗೂ ಸಿಸಿಟಿವಿಯಲ್ಲಿ ಕಾಣಿಸಿಕೊಂಡಿರುವ ವ್ಯಾಪ್ತಿಯಲ್ಲಿ ಒಟ್ಟು ಮೂರು ಕಡೆ ಬೋನ್‌ಗಳನ್ನು ಚಿರತೆಯ ಸೆರೆಗಾಗಿ ಇಡಲಾಗಿದ್ದು, ಬೋನಿನ ಒಳಗೆ ಆಹಾರವನ್ನು ಇಟ್ಟು ಚಿರತೆ ಬಂದಾಗ ಅದನ್ನು ಸೆರೆ ಹಿಡಿಯಲು ತಂತ್ರ ರೂಪಿಸಲಾಗಿದೆ.
ಶುಕ್ರವಾರ ಆತಂಕ ತಂದ ಹೆಜ್ಜೆ ಗುರುತು ಎಲೆಕ್ಟ್ರಾನಿಕ್ ಸಿಟಿಯ ಡಿ-ಮಾರ್ಟ್ ಹಿಂಭಾಗದಲ್ಲಿ ಹಲವು ಕಡೆ ಚಿರತೆ ಓಡಾಡಿರುವ ಹೆಜ್ಜೆ ಗುರುತು ಸಿಕ್ಕಿದ್ದು, ಇದಾದ ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಚಿರತೆ ಕಾರ್ಯ ಹುಡುಕಾಟ ನಡೆಸುತ್ತಿದ್ದಾರೆ. ಆದರೆ ಚಿರತೆ ಯಾವ ಕಡೆ ಹೋಗಿದೆ ಎನ್ನುವ ಬಗ್ಗೆ ಮಾಹಿತಿ ಗೊತ್ತಾಗಿಲ್ಲ. ಚಿರತೆ ಓಡಾಡುವ ಚಲನವಲನ ಕಂಡು ಹಿಡಿಯಲು ಎನ್‌ಟಿಟಿಎಫ್ ಆವರಣ ಹಾಗೂ ಎಲೆಕ್ಟ್ರಾನಿಕ್ ಸಿಟಿಯ ಹಲವು ಕಡೆ ಒಟ್ಟು ಐದು ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ.