ದೇಶ ವಿರೋಧಿಗಳು ಸಿಕ್ಕರೆ ಕಲ್ಲಲ್ಲಿ ಹೊಡೀಬೇಕು: ಸಂಸದ ಮುನಿಸ್ವಾಮಿ

Suvarna News   | Asianet News
Published : Feb 28, 2020, 03:35 PM IST
ದೇಶ ವಿರೋಧಿಗಳು ಸಿಕ್ಕರೆ ಕಲ್ಲಲ್ಲಿ ಹೊಡೀಬೇಕು: ಸಂಸದ ಮುನಿಸ್ವಾಮಿ

ಸಾರಾಂಶ

ದೇಶದ್ರೋಹಿಗಳು ಸಿಕ್ಕಿದರೆ ಕಲ್ಲಲ್ಲಿ ಹೊಡೆಯಿರಿ ಎಂದು ಸಂಸದ ಮುನಿಸ್ವಾಮಿ ಹೇಳಿದ್ದಾರೆ. ಕೋಲಾರದಲ್ಲಿ ಶಾಸಕ ಯತ್ನಾಳ್ ಹೇಳಿಕೆ ಸಮರ್ಥಿಸಿಕೊಂಡ ಅವರು ದೆಹಲಿ ಗಲಭೆಯಲ್ಲಿ ಪಾಕಿಸ್ತಾನದ ಕೈವಾಡವಿದೆ ಎಂದಿದ್ದಾರೆ.  

ಕೋಲಾರ(ಫೆ.28) : ದೇಶದ್ರೋಹಿಗಳು ಸಿಕ್ಕಿದರೆ ಕಲ್ಲಲ್ಲಿ ಹೊಡೆಯಿರಿ ಎಂದು ಸಂಸದ ಮುನಿಸ್ವಾಮಿ ಹೇಳಿದ್ದಾರೆ. ಕೋಲಾರದಲ್ಲಿ ಶಾಸಕ ಯತ್ನಾಳ್ ಹೇಳಿಕೆ ಸಮರ್ಥಿಸಿಕೊಂಡ ಅವರು ದೆಹಲಿ ಗಲಭೆಯಲ್ಲಿ ಪಾಕಿಸ್ತಾನದ ಕೈವಾಡವಿದೆ ಎಂದಿದ್ದಾರೆ.

ದೆಹಲಿ ಗಲಭೆಯಲ್ಲಿ ಪಾಕಿಸ್ತಾನದ ಕೈವಾಡವಿದೆ. ಅಮ್ ಆದ್ಮಿ ಹಾಗೂ ಕಾಂಗ್ರೆಸ್ ಕೈವಾಡವಿದೆ. ದೇಶದ ವಿರುದ್ದ ಹೇಳಿಕೆ ಕೊಡೋರನ್ನ ಗಡಿಪಾರು ಮಾಡ್ಬೇಕು. ದೇಶ ವಿರೋಧಿಗಳು ಸಿಕ್ಕರೆ ಜನರು ಕಲ್ಲುಗಳಲ್ಲಿ ಹೊಡೆಯಬೇಕು. ದೇಶ ವಿರೋಧಿಗಳ ವಿರುದ್ಧ ಕಠಿಣ ಕಾನೂನು ಬರಬೇಕು ಎಂದಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿಯನ್ನ ಪಾಕ್ ಏಜೆಂಟ್ ಎಂದ ಬಿಜೆಪಿ ಶಾಸಕ

ಕೋಲಾರದಲ್ಲಿ ಶಾಸಕ ಯತ್ನಾಳ್ ಹೇಳಿಕೆ ಸಮಥಿ೯ಸಿಕೊಂಡ ಸಂಸದ ಮುನಿಸ್ವಾಮಿ ಇವರು ಸ್ವಾತಂತ್ರ್ಯ ಹೋರಾಟ ಮಾಡಿದ್ದಾರೆ ಅನ್ನೋದು ನನಗೂ ಅನುಮಾನ. ಯಾವುದೇ ರಾಜಕೀಯ ಪಕ್ಷದ ಪ್ರಧಾನಿಯಾಗಿರಲಿ ಗೌರವ ಕೊಡಬೇಕಿತ್ತು. ಪ್ರಧಾನಿ ಬಗ್ಗೆ ಮಾತನಾಡುವಾಗ,ನಾಲಿಗೆ ಬಿಗಿ ಹಿಡಿದು ಮಾತನಾಡಬೇಕಿತ್ತು  ಎಂದಿದ್ದಾರೆ.

ದೊರೆಸ್ವಾಮಿ ನಾಲಿಗೆ ಬಿಗಿ ಹಿಡಿದು ಮಾತನಾಡಲಿ: ಸಚಿವ ಸೋಮಣ್ಣ

ನಾವೂ ಅವರ ವಯಸ್ಸಿಗೆ ಮಯಾ೯ದೆ ಕೊಡುತ್ತೇವೆ. ಅದನ್ನು ಉಳಿಸಿಕೊಂಡು,ಬೆಳಸಿಕೊಂಡು ಹೋಗ್ಬೇಕು. ಲೋಪ ಇದ್ರೆ ಚಚೆ೯ ಮಾಡಿ,ಈ ರೀತಿ ಮಾತನಾಡಬಾರದು ಎಂದು ಹೇಳಿದ್ದಾರೆ.

PREV
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!