ಸಂಘರ್ಷ ಸರಿ ಅಲ್ಲ, ಕುಕ್ಕೆ ಮಠದ ಪರ ನಿಂತ ಪೇಜಾವರ ಸ್ವಾಮೀಜಿ

By Web Desk  |  First Published Oct 14, 2018, 6:38 PM IST

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಸುಬ್ರಹ್ಮಣ್ಯ ಮಠದ ಗೊಂದಲಕ್ಕೆ ಪೇಜಾವರ ಸ್ವಾಮೀಜಿ ತೆರೆ ಎಳೆಯುವ ಯತ್ನ ಮಾಡಿದ್ದಾರೆ. ಒಂದು ಕಡೆ ದೇವಾಲಯ ನೀರು ಬಿಡಲು ತೊಂದರೆ ಮಾಡುತ್ತಿದೆ ಎಂದು ಸುಬ್ರಹ್ಮಣ್ಯ ಸ್ವಾಮೀಜಿ ಉಪವಾಸ ಕುಳಿತಿದ್ದಾರೆ.


ಉಡುಪಿ(ಅ14]  ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ ಸುಬ್ರಹ್ಮಣ್ಯ ಮಠಕ್ಕೆ ಸಮಸ್ಯೆಯಾಗಿದೆ. ಸುಬ್ರಹ್ಮಣ್ಯ ಮಠಾಧೀಶರಿಗೆ ದೇವಸ್ಥಾನದ ಆಡಳಿತ ಮಂಡಳಿ ಕಿರುಕುಳ ನೀಡುತ್ತಿದೆ. ಉಡುಪಿಯ ಅಷ್ಟಮಠಾಧೀಶರಿಗೆ ಈ ಬಗ್ಗೆ ಅತೀವ ಕಳವಳವಾಗಿದೆ. ದೇವಸ್ಥಾನದವರು ಮಠಕ್ಕೆ ಅನಾವಶ್ಯಕ ತೊಂದರೆ ಕೊಡಬಾರದು ಎಂದು ಪೇಜಾವರ ಸ್ವಾಮೀಜಿ ಒತ್ತಾಯ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿ,  ಮಠದ ಗೋಶಾಲೆಗೆ ಬರುವ ನೀರನ್ನು ದೇವಸ್ಥಾನ ಸ್ಥಗಿತಗೊಳಿಸಿದೆ. ಸರ್ಪ ಸಂಸ್ಕಾರಕ್ಕೆ ಎಲ್ಲೂ ನಿರ್ಬಂಧ ಇಲ್ಲ. ಮಠದ ವಿರೋಧಿ ವರ್ಗದ ಈ ನಿಲುವು ಸರಿಯಲ್ಲ. ಈ ನಿಲುವಿನಿಂದ ಸಮಾಜಕ್ಕೆ ತೊಂದರೆಯಾಗುತ್ತಿದೆ. ಕುಕ್ಕೆ ಸುಬ್ರಹ್ಮಣ್ಯ ಮಠ ಜನರಿಗೆ ಹಾನಿಕಾರಕವಾಗಿ ವರ್ತಿಸುತ್ತಿಲ್ಲ. ಕುಕ್ಕೆ ದೇವಸ್ಥಾನ -ಮಠದ ಸಂಘರ್ಷ ಸರಿಯಲ್ಲ. ದೇವಸ್ಥಾನಕ್ಕೆ ಭಿನ್ನಾಭಿಪ್ರಾಯ ಇದ್ದರೆ ಮಾತುಕತೆ ಮಾಡೋಣ. ಸುಬ್ರಹ್ಮಣ್ಯ ಮಠದಿಂದ ತೊಂದರೆಯಾದ್ರೆ ಸರಿಪಡಿಸೋಣ. ಸುಬ್ರಹ್ಮಣ್ಯ ಶ್ರೀಗಳ ಜೊತೆ ಮಾತಮಾಡುತ್ತೇನೆ ಎಂದು ಪೇಜಾವರ ಶ್ರೀ ತಿಳಿಸಿದ್ದಾರೆ.

Latest Videos

undefined

ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಮಠಕ್ಕೆ ಗೌರವ ಸಿಗುತ್ತಿಲ್ಲ. ವಿದ್ಯಾಭೂಷಣ ಶ್ರೀ ಇದ್ದಾಗ ಇದ್ದ ಗೌರವವಾದರೂ ಸಿಗಬೇಕು. ಸರಕಾರದ ಪ್ರವೇಶವೇ ಗೊಂದಲಕ್ಕೆ ಕಾರಣ. ದೇವಸ್ಥಾನ, ಮಠ ಸ್ವತಂತ್ರವಾಗಿ ನಡೆಯಬೇಕು. ಎಲ್ಲಾ ಪಕ್ಷ, ಎಲ್ಲಾ ಜನರ ಸಹಕಾರ ಬೇಕು. ದೇವಸ್ಥಾನದ ಆಡಳಿತ ಮಂಡಳಿ ಸಹಕರಿಸಬೇಕು. ಉಪವಾಸ ಕೈಬಿಡುವಂತೆ ಸುಬ್ರಹ್ಮಣ್ಯ ಸ್ವಾಮಿಗಳ ಮನ ಒಲಿಸಬೇಕು ಎಂದು ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಪಲಿಮಾರು ಶ್ರೀ, ಕಾಣಿಯೂರು ಶ್ರೀ, ಸೋದೆ ಸ್ವಾಮೀಜಿ ಭಾಗಿಯಾಗಿದ್ದರು.

 

 

click me!