ಉಡುಪಿಯಲ್ಲಿ ಮುಂದುವರಿದ ಕಮಲಪರ್ವ

By Web DeskFirst Published Sep 3, 2018, 5:06 PM IST
Highlights
  • ‘ಕೈ’ಯಿಂದ ನಗರಸಭೆ ಕಸಿದುಕೊಂಡ ಬಿಜೆಪಿ
  • ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಗೆ ಭಾರೀ ಮುಖಭಂಗ

ಉಡುಪಿ:  ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಪ್ರತಾಪ ಮುಂದುವರೆದಿದೆ.  ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಜನಸಂಘಕ್ಕೆ ಅಧಿಕಾರ ನೀಡಿದ್ದ ಉಡುಪಿ ನಗರ, ಈ ಬಾರಿಯು ಕಮಲಕ್ಕೆ ನೀರೆರೆಯುವುದನ್ನು ಮುಂದುವರೆಸಿದೆ.

ಕಳೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಉಡುಪಿ ನಗರಸಭೆ ಕಾಂಗ್ರೆಸ್ ಪಾಲಾಗಿತ್ತು. ಆದರೆ ಈ ಬಾರಿ ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಉಡುಪಿ ನಗರಸಭೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಕಂಡಿದೆ.

ಸ್ಥಳೀಯ ಸಂಸ್ಥೆ ಬಿಜೆಪಿ ಕಾಂಗ್ರೆಸ್ ಪಕ್ಷೇತರರು
ಉಡುಪಿ ನಗರ ಸಭೆ 31 4 0
ಕಾರ್ಕಳ ಪುರಸಭೆ 11 11 1
ಕುಂದಾಪುರ ಪುರಸಭೆ 14 8 1
ಸಾಲಿಗ್ರಾಮ ಪ.ಪಂ 10 5 1

ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಸ್ವಂತ ವಾರ್ಡ್ ನಲ್ಲೇ ತೀವ್ರ ಮುಖಭಂಗ ಎದುರಿಸಿದ್ದಾರೆ. ಅವರ ಎಲ್ಲಾ ವಾರ್ಡ್ ಗಳನ್ನೆಲ್ಲಾ ಬಿಜೆಪಿ ಗೆದ್ದುಕೊಂಡಿದೆ

ಕಾರ್ಕಳ ಪುರಸಭೆ ಅತಂತ್ರವಾಗಿದ್ದರೂ ಬಿಜೆಪಿ ಅಧಿಕಾರ ಹಿಡಿಯುವುದು ಸ್ಪಷ್ಟವಾಗಿದೆ. ಕುಂದಾಪುರ  ಪುರಸಭೆ ಹಾಗೂ ಸಾಲಿಗ್ರಾಮ ಪಟ್ಟಣ ಪಂಚಾಯತ್ ನಲ್ಲೂ ಬಿಜೆಪಿ ತನ್ನ ಪ್ರಾಬಲ್ಯ ಮುಂದುವರೆದಿದೆ.

click me!