ಬ್ರಾಹ್ಮಣ ಹೆಣ್ಮಕ್ಕಳು ಅನ್ಯ ಜಾತಿ ವಿವಾಹವಾಗುವುದನ್ನು ತಪ್ಪಿಸಿ : ಪೇಜಾವರ ಶ್ರೀ

By Kannadaprabha News  |  First Published Mar 17, 2021, 8:06 AM IST

ಬ್ರಾಹ್ಮಣ ಹೆಣ್ಮಕ್ಕಳು ಬೇರೆ ಜಾರಿಯವರನ್ನು ವಿವಾಹವಾಗುವುದನ್ನು ತಡೆಯುವ ಅಗತ್ಯವಿದೆ. ಅನ್ಯ ಜಾತಿ ವಿವಾಹ ಜಾಸ್ತಿಯಾಗುತ್ತಿದ್ದು ಇದನ್ನು ತಡೆಗಟ್ಟಿವತ್ತ ಕ್ರಮ ವಹಿಸಬೇಕು ಎಂದು ಪೇಜಾವರ ಶ್ರೀ ಹೇಳಿದರು. 


 ಶಿವಮೊಗ್ಗ (ಮಾ.17):  ಇತ್ತೀಚಿನ ದಿನದಲ್ಲಿ ಬ್ರಾಹ್ಮಣ ಸಮಾಜದ ಹೆಣ್ಣುಮಕ್ಕಳು ಇತರೆ ಜಾತಿಯವರನ್ನು ವಿವಾಹವಾಗುತ್ತಿರುವ ಪ್ರಕರಣ ಹೆಚ್ಚಾಗುತ್ತಿದ್ದು, ಇದರ ತಡೆಗೆ ಮಾತೃ ಮಂಡಳಿ ರಚನೆಯ ಅಗತ್ಯವಿದೆ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ನುಡಿದರು.

ಶಿವಮೊಗ್ಗ ನಗರದ ಬ್ರಾಹ್ಮಣ ವಿದ್ಯಾರ್ಥಿ ನಿಲಯ ಆವರಣದಲ್ಲಿ ಲೋಕಲ್ಯಾಣಾರ್ಥ ಕಳೆದ 3 ದಿನಗಳಿಂದ ನಡೆಯುತ್ತಿರುವ ಶ್ರೀ ಯಜುಃ ಸಂಹಿತಾಯಾಗ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿ ಮಾತನಾಡಿದರು.

Latest Videos

undefined

ನಮ್ಮ ಮನೆ ಮಕ್ಕಳು ಇತರೆ ಜಾತಿಯವರನ್ನು ವರಿಸುತ್ತಿರುವುದರ ಹಿಂದಿನ ಸಮಸ್ಯೆ ಏನು ಎಂದು ಅರಿಯಬೇಕಿದೆ. ಪರಿಹಾರವನ್ನು ಹುಡುಕಬೇಕಿದೆ ಎಂದ ಅವರು ಬ್ರಾಹ್ಮಣ ಸಮುದಾಯದ ಜನಸಂಖ್ಯೆ ತೀವ್ರವಾಗಿ ಇಳಿಮುಖವಾಗಿದೆ. ಈ ಕುರಿತು ಕೂಡ ಚಿಂತನೆ ನಡೆಯಬೇಕಿದೆ. ಕೌಟುಂಬಿಕ ಮತ್ತು ಸಾಮಾಜಿಕವಾಗಿ ನಮ್ಮಲ್ಲಿ ಕೆಲವು ಕುಂದುಕೊರತೆ ಇದೆ. ಬ್ರಾಹ್ಮಣ ಸಮಾಜ ಅಭಿವೃದ್ಧಿ ಸಾಧಿಸಬೇಕಿದ್ದರೆ ವೈವಾಹಿಕ ಸಂಕಷ್ಟಮೊದಲು ಪರಿಹಾರವಾಗಬೇಕು. ಇಂತಹ ಸಂದರ್ಭದಲ್ಲಿ ಬ್ರಾಹ್ಮಣರೆಲ್ಲರೂ ಒಂದಾಗಿ ಸಮಸ್ಯೆ ಬಗೆಹರಿಯಬೇಕಿದೆ ಎಂದ ಅವರು, ಮಕ್ಕಳಿಗೆ ಮನೆಯಲ್ಲಿಯೇ ಲೌಖಿಕ ಶಿಕ್ಷಣದ ಜೊತೆ ಧಾರ್ಮಿಕ ಶಿಕ್ಷಣ ನೀಡಬೇಕಿದೆ. ನಮ್ಮ ಸಂಸ್ಕೃತಿ, ಆಚಾರ, ವಿಚಾರ ಕಲಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದರು.

ಉಡುಪಿಯಲ್ಲಿ ಕರಕುಶಲ ಶೋರೂಮ್

ಭಾರತೀಯರ ಕನಸು ನೆರವೇರುತ್ತಿದೆ:  ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕೆಂಬುದು ಭಾರತೀಯರ ಹಾಗೂ ಹಿಂದುಗಳ ಕನಸಾಗಿದ್ದು, ಇದೀಗ ಎಲ್ಲರ ಭಕ್ತಿ ಮತ್ತು ಶಕ್ತಿಯಿಂದ ಶ್ರೀ ರಾಮಮಂದಿರ ನಿರ್ಮಾಣವಾಗುತ್ತಿದೆ. ಕೋಟ್ಯಂತರ ರಾಮ ಭಕ್ತರ ಆಶಯದಂತೆ ಅಯೋದ್ಯೆಯಲ್ಲಿ ಶ್ರೀ ರಾಮಮಂದಿರ ನಿರ್ಮಾಣವಾದರೆ ಸಾಲದು. ಅದರ ನಿರ್ವಹಣೆಯೂ ಅಚ್ಚುಕಟ್ಟಾಗಿ ಆಗಬೇಕು. ಮಂದಿರ ನಿರ್ಮಾಣಕ್ಕೆ ಈಗಾಗಲೇ ಭಕ್ತರಿಂದ ಸಾಕಷ್ಟುದೇಣಿಗೆ ಸಂಗ್ರಹವಾಗಿದೆ. ಮಂದಿರ ಕೇವಲ 100 ವರ್ಷ, 200 ವರ್ಷ ಇರುವುದಲ್ಲ. ಅದು ಶತಶತಮಾನ ಕಾಲ ವರ್ತಮಾನವಾಗಿಯೇ ಇರುತ್ತದೆ. ಹಾಗಾಗಿ ರಾಮಮಂದಿರ ಕೇವಲ ನಿರ್ಮಾಣವಾದರೆ ಸಾಲದು, ನಿರ್ವಹಣೆ ಅತ್ಯಂತ ಎಚ್ಚರಿಕೆಯಿಂದ ನಡೆಬೇಕಾಗಿದೆ ಎಂದು ಹೇಳಿದರು.

click me!