ವಾಣಿಜ್ಯ ಬೆಳೆಗಳ ಮಾದರಿಯಲ್ಲಿಯೇ ಆಹಾರ ಧಾನ್ಯಗಳ ಬೆಳೆಗಳಿಗೆ ನರೇಗಾ ಯೋಜನೆ ಅಡಿ, ಕೂಲಿ ಹಣ ಬಿಡುಗಡೆಗೊಳಿಸಿ, ಸಣ್ಣ ಮತ್ತು ಅತಿ ಸಣ್ಣ ರೈತರ ಪ್ರಗತಿಗೆ ಸಹಕರಿಸುವಂತೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೊತ್ತೂರು ಹನುಮಂತರಾಯಪ್ಪ ಹಾಗೂ ರಾಷ್ಟ್ರೀಯ ಕಿಸಾನ್ ಸಂಘದ ರಾಜ್ಯಾಧ್ಯಕ್ಷ ಪಾವಗಡ ವಿ.ನಾಗಭೂಷಣರೆಡ್ಡಿ ಕೇಂದ್ರ ಸಚಿವೆ ಶೋಭಾಕರಂದ್ಲಾಜೆ ಅವರಲ್ಲಿ ಮನವಿ ಮಾಡಿದ್ದಾರೆ.
ಪಾವಗಡ (ಅ.24): ವಾಣಿಜ್ಯ ಬೆಳೆಗಳ ಮಾದರಿಯಲ್ಲಿಯೇ ಆಹಾರ ಧಾನ್ಯಗಳ ಬೆಳೆಗಳಿಗೆ ನರೇಗಾ ಯೋಜನೆ ಅಡಿ, ಕೂಲಿ ಹಣ ಬಿಡುಗಡೆಗೊಳಿಸಿ, ಸಣ್ಣ ಮತ್ತು ಅತಿ ಸಣ್ಣ ರೈತರ ಪ್ರಗತಿಗೆ ಸಹಕರಿಸುವಂತೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೊತ್ತೂರು ಹನುಮಂತರಾಯಪ್ಪ ಹಾಗೂ ರಾಷ್ಟ್ರೀಯ ಕಿಸಾನ್ ಸಂಘದ ರಾಜ್ಯಾಧ್ಯಕ್ಷ ಪಾವಗಡ ವಿ.ನಾಗಭೂಷಣರೆಡ್ಡಿ ಕೇಂದ್ರ ಸಚಿವೆ ಶೋಭಾಕರಂದ್ಲಾಜೆ ಅವರಲ್ಲಿ ಮನವಿ ಮಾಡಿದ್ದಾರೆ.
ಇಲ್ಲಿನ ಅನೇಕ ಮಂದಿ (Farmers) ಮುಖಂಡರೊಂದಿಗೆ ಭಾನುವಾರ (Bengaluru) ಅವರ ನಿವಾಸಕ್ಕೆ ನಿಯೋಗ ತೆರಳಿ, ಕೇಂದ್ರ ಕೃಷಿ ರಾಜ್ಯ ಸಚಿವೆ ಶೋಭಾಕರಂದ್ಲಾಜೆ ಅವರನ್ನು ಭೇಟಿ ಮಾಡಿ, ಗ್ರಾಮೀಣ ರೈತರ ಸಮಸ್ಯೆ ಕುರಿತು ಚರ್ಚಿಸಿದರು.
ಈ ವೇಳೆ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕೊತ್ತೂರು ಎಸ್.ಹನುಮಂತರಾಯಪ್ಪ ಮಾತನಾಡಿ, ಅತಿವೃಷ್ಠಿ ಹಾಗೂ ಅನಾವೃಷ್ಠಿ ಪರಿಣಾಮ ನೀರಾವರಿ ಬೆಳೆಗಳ ಹಾನಿಯಿಂದ ಗ್ರಾಮೀಣ ಭಾಗದ ರೈತರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ವ್ಯವಸಾಯವನ್ನೆ ನಂಬಿದ್ದ ರೈತರು ಪದೇ ಪದೇ ಬೆಳೆನಷ್ಟದಿಂದ ಜೀವನೋಪಯಕ್ಕಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಗ್ರಾಮೀಣ ಭಾಗದ ಜನತೆಗೆ ಉಪಯುಕ್ತ ಯೋಜನೆಯಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಈ ಯೋಜನೆಗೆ ಹೆಚ್ಚು ಉತ್ತೇಜನ ನೀಡುತ್ತಿದ್ದು, ಇದರಿಂದ ಗ್ರಾಮೀಣ ಪ್ರಗತಿಗೆ ಸಹಕಾರಿಯಾಗುತ್ತಿದೆ. ಹೀಗಾಗಿ ತಾವು ಪರಿಶೀಲನೆ ನಡೆಸಿ, ಅಡಕೆ, ತೆಂಗು, ದಾಳಿಂಬೆ, ಪಪ್ಪಾಯಿ ಇತರೆ ತೋಟಗಾರಿಕೆ ಮತ್ತು ವಾಣಿಜ್ಯ ಬೆಳೆಗಳ ಮಾದರಿಯಲ್ಲಿಯೇ ಭತ್ತ, ರಾಗಿ, ಗೋದಿ, ಸಜ್ಜೆ, ಸವಣೆ, ತೊಗರಿ, ಹಲಸಂದಿ ಇತರೆ ಆಹಾರ ಧಾನ್ಯಗಳ ಬೆಳೆಗಳಿಗೆ ನರೇಗಾದಲ್ಲಿ ಕೂಲಿ ಹಣ ಕಲ್ಪಿಸುವಂತೆ ಒತ್ತಾಯಿಸಿ, ಗ್ರಾಮೀಣ ಪ್ರದೇಶಗಳ ರೈತರಲ್ಲಿ ಈ ಬಗ್ಗೆ ಸಾಕಷ್ಟುಒತ್ತಡವಿದೆ ಎಂದು ಸಚಿವರಲ್ಲಿ ಮನವಿ ಮಾಡಿದರು.
ರಾಷ್ಟೀಯ ಕಿಸಾನ್ ರೈತ ಸಂಘದ ರಾಜ್ಯಾಧ್ಯಕ್ಷರಾದ ಪಾವಗಡ ವಿ.ನಾಗಭೂಷಣರೆಡ್ಡಿ ಮಾತನಾಡಿ, ಭತ್ತ, ರಾಗಿ, ಸಜ್ಜೆ, ತೊಗರಿ ಇತರೆ ಆಹಾರ ಧಾನ್ಯಗಳ ಬೆಳೆಗಳಿಗೆ ನರೇಗಾದಲ್ಲಿ ಕೂಲಿ ಹಣ ನೀಡಿದರೆ ರೈತರ ಸಂಕಷ್ಟದಲ್ಲಿ ನೆರವಾದಂತಾಗಲಿದ್ದು, ರೈತರಿಗೆ ಸಮಸ್ಯೆ ಆಗುವುದಿಲ್ಲ. ಬೆಳೆನಷ್ಟದಿಂದ ಆತ್ಮಹತ್ಯೆಯಂತಹ ಪ್ರಕರಣಗಳು ಕಡಿಮೆ ಆಗಲು ಸಾಧ್ಯವಾಗಲಿದೆ ಎಂದರು.
ಇದೇ ವೇಳೆ ಜಿಲ್ಲಾ ಬಿಜೆಪಿ ಮುಖಂಡರಾದ ಕೃಷ್ಣಗಿರಿ ತಿಪ್ಪೇಸ್ವಾಮಿ, ತಾಲೂಕು ಬಿಜೆಪಿ ಹಿಂದುಳಿದ ವರ್ಗಗಳ ಮುಖಂಡ ಕ್ಯಾತಗಾನಬರ್ಲು ಶ್ರೀನಿವಾಸ್, ಪಾವಗಡದ ಸ್ವಾಮಿ ರಾಮಾಂಜಿನಪ್ಪ, ರೈತ ಮುಖಂಡರಿದ್ದರು.
ಕೇಂದ್ರ ಸಚಿವರ ಭರವಸೆ
ರೈತ ಮುಖಂಡರ ಸಮಸ್ಯೆ ಆಲಿಸಿದ ಬಳಿಕ ಮಾತನಾಡಿದ ಸಚಿವೆ ಶೋಭಾಕರಂದ್ಲಾಜೆ, ಪ್ರಧಾನಿ ಮೋದಿ ಹಾಗೂ ಸಿಎಂ ಬಸವರಾಜ ಬೊಮ್ಮಯಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತ ಮತ್ತು ಜನಸಾಮಾನ್ಯರ ಆಶೋತ್ತರಗಳಿಗೆ ಸ್ಪಂದಿಸಿ ಕೆಲಸ ಮಾಡುತ್ತಿದೆ. ನರೇಗಾದಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರ ಆಹಾರ ಧಾನ್ಯಗಳ ಬೆಳೆಗಳ ಪ್ರಗತಿಗೆ ಕೂಲಿ ಹಣ ನೀಡುವ ವಿಚಾರ ಸದನದಲ್ಲಿ ಚರ್ಚಿಸಿ ಶೀಘ್ರ ತೀರ್ಮಾನ ಕೈಗೊಳ್ಳುವ ಭರವಸೆ ನೀಡುವುದಾಗಿ ತಿಳಿಸಿದ್ದಾರೆ.
.ಆಹಾರ ಧಾನ್ಯ ಬೆಳೆಗೆ ನರೇಗಾದಲ್ಲಿ ಕೂಲಿ ಹಣ ನೀಡಿ
ಕೇಂದ್ರ ಸಚಿವೆ ಶೋಭಾಕರಂದ್ಲಾಜೆ ಅವರಿಗೆ ರೈತರಿಂದ ಮನವಿ
ಅತಿವೃಷ್ಠಿ ಹಾಗೂ ಅನಾವೃಷ್ಠಿ ಪರಿಣಾಮ ನೀರಾವರಿ ಬೆಳೆಗಳ ಹಾನಿ
ರೈತರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ವ್ಯವಸಾಯವನ್ನೆ ನಂಬಿದ್ದ ರೈತರು ಪದೇ ಪದೇ ಬೆಳೆನಷ್ಟದಿಂದ ಜೀವನೋಪಯಕ್ಕಾಗಿ ನಗರ ಪ್ರದೇಶಗಳಿಗೆ ವಲಸೆ
ಪ್ರಧಾನಿ ಮೋದಿ ಹಾಗೂ ಸಿಎಂ ಬಸವರಾಜ ಬೊಮ್ಮಯಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತ ಮತ್ತು ಜನಸಾಮಾನ್ಯರ ಆಶೋತ್ತರಗಳಿಗೆ ಸ್ಪಂದಿಸಿ ಕೆಲಸ
ಸದನದಲ್ಲಿ ಚರ್ಚಿಸುವ ಭರವಸೆ