ಕುಂಚಿಟಿಗರಿಗೆ ಓಬಿಸಿ ಮೀಸಲು ದೊರೆಯುವ ಭರವಸೆ

By Kannadaprabha News  |  First Published Oct 24, 2022, 4:23 AM IST

ಕುಂಚಿಟಿಗ ಜನಾಂಗಕ್ಕೆ 2023ರ ವೇಳೆಗೆ ಕೇಂದ್ರ ಓಬಿಸಿ ಮೀಸಲಾತಿ ದೊರೆಯುವಂತೆ ಮಾಡುತ್ತೇನೆ. ಇದರಲ್ಲಿ ಯಾವುದೇ ಅನುಮಾನ ಬೇಡ. 2023 ಡೆಡ್‌ಲೈನ್‌ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.


 ಶಿರಾ (ಅ.24):  ಕುಂಚಿಟಿಗ ಜನಾಂಗಕ್ಕೆ 2023ರ ವೇಳೆಗೆ ಕೇಂದ್ರ ಓಬಿಸಿ ಮೀಸಲಾತಿ ದೊರೆಯುವಂತೆ ಮಾಡುತ್ತೇನೆ. ಇದರಲ್ಲಿ ಯಾವುದೇ ಅನುಮಾನ ಬೇಡ. 2023 ಡೆಡ್‌ಲೈನ್‌ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಭಾನುವಾರ ತಾಲೂಕಿನ ಚಿಕ್ಕಹುಲಿಕುಂಟೆದಲ್ಲಿ (village)  ನಿರ್ಮಿಸಿದ್ದ ನಾಡಪ್ರಭುರ ಪುತ್ಥಳಿ ಅನಾವರಣ ಮಾಡಿ ಮಾತನಾಡಿದರು. ಕೆಂಪೇಗೌಡರ ಪ್ರತಿಮೆಯನ್ನು ಬೆಂಗಳೂರಿನ ನಿಲ್ದಾಣದಲ್ಲಿ ಪ್ರತಿಷ್ಠಾಪನೆ ಮಾಡಲು ಪ್ರಧಾನಮಂತ್ರಿಯವರು (PM)  ನ.11ಕ್ಕೆ ರಾಜ್ಯಕ್ಕೆ ಬರುತ್ತಿದ್ದಾರೆ. ಅಂದು ದೇವೇಗೌಡರ ಉಪಸ್ಥಿತಿ ಇರುತ್ತದೆ. ಆ ಸಂದರ್ಭದಲ್ಲಿ ಕುಂಚಿಟಿಗ ಜನಾಂಗವನ್ನು ಕೇಂದ್ರದ ಓಬಿಸಿ ಪಟ್ಟಿಗೆ ಸೇರಿಸುವ ಒಂದು ಮನವಿ ಪತ್ರವನ್ನು ಸಿದ್ದಪಡಿಸಿ ದೇವೇಗೌಡರ ಮುಖಾಂತರ ಪ್ರಧಾನಮಂತ್ರಿಯವರ ಗಮನ ಸೆಳೆಯುವ ಕೆಲಸ ಮಾಡಿ ಮನವಿ ಸಲ್ಲಿಸಲಾಗುವುದು ಎಂದರು.

Tap to resize

Latest Videos

ಸ್ಪಟಿಕಪುರಿ ಸಂಸ್ಥಾನ ಮಠದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿಗಳು ಮಾತನಾಡಿ, ರಾಜ್ಯದಲ್ಲಿ ಶೇ.16ರಷ್ಟುಕುಂಚಿಟಿಗ ಒಕ್ಕಲಿಗ ಜನಸಂಖ್ಯೆ ಇದ್ದೇವೆ. ರಾಜ್ಯದ ಅತಿ ದೊಡ್ಡ ಜನಾಂಗವಾದ ಒಕ್ಕಲಿಗ ಜನಾಂಗ ಔದ್ಯೋಗಿಕ, ರಾಜಕೀಯ, ಸಾಮಾಜಿಕವಾಗಿ ಅನ್ಯಾಯ ಎದುರಿಸುತ್ತಿದ್ದೇವೆ. ಒಕ್ಕಲಿಗ ಸಮುದಾಯಕ್ಕೆ ಸಿಗುತ್ತಿರುವ 3ಎ ಗೆ ನೀಡುತ್ತಿರುವ ಶೇ.4ರಷ್ಟುಮೀಸಲಾತಿಯನ್ನು ಶೇ.10ಕ್ಕೆ ಏರಿಕೆ ಮಾಡಬೇಕು. ಒಕ್ಕಲಿಗ ಜನಾಂಗದ ಉಪಜಾತಿಯಾದ ಕುಂಚಿಟಗ ಜನಾಂಗವನ್ನು ಕೇಂದ್ರದ ಓಬಿಸಿ ಪಟ್ಟಿಗೆ ಸೇರಿಸಬೇಕು. ಹಾಗೂ ಅರ್ಬನ್‌ ಒಕ್ಕಲಿಗರನ್ನೂ ಸಹ ಕೇಂದ್ರ ಓಬಿಸಿ ಪಟ್ಟಿಗೆ ಸೇರಿಸಬೇಕು ಎಂದರು.

ವಿಧಾನ ಪರಿಷತ್‌ ಸದಸ್ಯ ಚಿದಾನಂದ್‌ ಎಂ.ಗೌಡ ಮಾತನಾಡಿ, ಕೆಂಪೇಗೌಡರ ದೂರದೃಷ್ಟಿಯಿಂದ ಬೆಂಗಳೂರನ್ನು ಕಟ್ಟಿದ್ದಾರೆ. ಇಂದು ಇಡೀ ರಾಜ್ಯದಲ್ಲಿ ಬೆಂಗಳೂರು ಕೇಂದ್ರೀಕೃತವಾಗಿ ಇಡೀ ಪ್ರಪಂಚದಲ್ಲಿಯೇ ಬೆಂಗಳೂರು ಆಕರ್ಷಿತವಾಗುತ್ತಿದೆ. ಒಕ್ಕಲಿಗ ಸಮುದಾಯದ ಯುವಕರು ಕೆಂಪೇಗೌಡ ಅವರ ಆದರ್ಶವನ್ನು ಬೆಳೆಸಿಕೊಳ್ಳಬೇಕು. ಕುಂಚಿಟಿಗ ಸಮುದಾಯ ಒಕ್ಕಲಿಗ ಜನಾಂಗದ ಒಂದು ಭಾಗ ಆದರೆ ನಮಗೆ ಕೇಂದ್ರದಲ್ಲಿ ಓಬಿಸಿ ಮೀಸಲಾತಿಯಲ್ಲಿ ಅನ್ಯಾಯವಾಗಿದೆ. ಬಹಳ ದಿನಗಳ ಬೇಡಿಕೆಯಾದ ಕೇಂದ್ರ ಓಬಿಸಿ ಮೀಸಲಾತಿಯನ್ನು ಪಡೆಯಲು ಎಲ್ಲರೂ ಶ್ರಮಿಸಿ ಎಂದರು.

ಮಾಜಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ನಾಡಪ್ರಭು ಕೆಂಪೇಗೌಡ ಅವರು 500 ವರ್ಷಗಳ ಹಿಂದೆಯೇ ಬೆಂಗಳೂರನ್ನು ಎಲ್ಲಾ ರೀತಿಯಲ್ಲೂ ಅಭಿವೃದ್ಧಿಪಡಿಸಿದ್ದಾರೆ. ಇಂದು ಪ್ರಪಂಚದಲ್ಲಿಯೇ ಬೆಂಗಳೂರಿನಲ್ಲಿ 1500 ಕಂಪನಿಗಳು ಇವೆ. ರಾಜ್ಯದ ಅಭಿವೃದ್ಧಿಗೆ ಬೆಂಗಳೂರಿನಿಂದ ಹೆಚ್ಚು ತೆರಿಗೆ ಬರುತ್ತಿದೆ ಎಂದರು.

ರಾಜ್ಯ ರೇಷ್ಮೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್‌.ಆರ್‌.ಗೌಡ ಮಾತನಾಡಿ, ನಾಡಪ್ರಭು ಕೆಂಪೇಗೌಡ ಅವರು ಎಲ್ಲಾ ಜನಾಂಗದ ದೀನ ದಲಿತರ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅವರ ದೂರದೃಷ್ಟಿಯಿಂದ ಬೆಂಗಳೂರು ನಗರವನ್ನು ವಿಶ್ವದ ಭೂಪಟದಲ್ಲಿ ಮೆರೆಸಿದ ಕೀರ್ತಿ ಕೆಂಪೇಗೌಡ ಅವರಿಗೆ ಸಲ್ಲುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪ, ನಗರಸಭೆ ಅಧ್ಯಕ್ಷ ಬಿ.ಅಂಜಿನಪ್ಪ, ಉಪಾಧ್ಯಕ್ಷೆ ಅಂಬುಜ ನಟರಾಜ್‌, ತಾಲೂಕು ಜೆಡಿಎಸ್‌ ಅಧ್ಯಕ್ಷ ಆರ್‌.ಉಗ್ರೇಶ್‌, ತಾಲೂಕು ಕುಂಚಿಟಿಗರ ಸಂಘದ ಕಾರ್ಯದರ್ಶಿ ಗುಳಿಗೇನಹಳ್ಳಿ ನಾಗರಾಜ್‌, ನಿರ್ದೇಶಕ ಲಿಂಗದಹಳ್ಳಿ ಸುಧಾಕರ ಗೌಡ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪಿ.ಆರ್‌.ಮಂಜುನಾಥ್‌, ಕಾಂಗ್ರೆಸ್‌ ಕಾನೂನು ಮತ್ತು ಮಾನವ ಹಕ್ಕುಗಳ ಘಟಕದ ಅಧ್ಯಕ್ಷ ಎಚ್‌.ಗುರುಮೂರ್ತಿ ಗೌಡ, ಸಮಾಜ ಸೇವಕ ಶ್ರೀರಾಮೇಗೌಡ, ಜಿಪಂ ಮಾಜಿ ಸದಸ್ಯ ರಾಮಕೃಷ್ಣ, ಸತ್ಯಪ್ರಕಾಶ್‌ ಸೇರಿದಂತೆ ಹಲವರು ಹಾಜರಿದ್ದರು.

2023ಕ್ಕೆ ಜೆಡಿಎಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ರಾಜ್ಯದ 6000 ಗ್ರಾಮ ಪಂಚಾಯಿತಿಗಳಲ್ಲೂ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ 30 ಹಾಸಿಗೆಯುಳ್ಳು ಒಂದು ಸುಸಜ್ಜಿತ ಆಸ್ಪತ್ರೆ ನಿರ್ಮಿಸಲಾಗುವುದು ಹಾಗೂ ಎಂತಹ ಕಾಯಿಲೆಗಳೇ ಬರಲಿ ಸರ್ಕಾರದಿಂದ ಜನತೆಗೆ ಉಚಿತವಾಗಿ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗುವುದು.

ಎಚ್‌.ಡಿ.ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ

click me!