ಜೆಡಿಎಸ್ ತೊರೆದು ಮತ್ತೆ ಮಾತೃಪಕ್ಷಕ್ಕೆ : ಕಾಂಗ್ರೆಸ್ ಸೇರಿದ ಮುಖಂಡರು

By Kannadaprabha News  |  First Published Aug 10, 2021, 12:49 PM IST
  • ಮಾಜಿ ಸಚಿವ ಹಾಗು ಹಾಲಿ ಶಾಸಕ ವೆಂಕಟರಮಣಪ್ಪ ಅವರ ಸಮ್ಮುಖದಲ್ಲಿ JDS ಮುಖಂಡರು ಕೈ ಸೆರ್ಪಡೆ
  • ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುವ ಮುಲಕ  ಮತ್ತೆ ಮಾತೃಪಕ್ಷಕ್ಕೆ ವಾಪಸ್

ಪಾವಗಡ (ಆ.10): ಮಾಜಿ ಸಚಿವ ಹಾಗು ಹಾಲಿ ಶಾಸಕ ವೆಂಕಟರಮಣಪ್ಪ ಅವರ ಸಮ್ಮುಖದಲ್ಲಿ ಭಾನುವಾರ ತಾಲೂಕು ಗೊಲ್ಲ ಸಮಾಜದ ಹಿರಿಯ ಮುಖಂಡ ಜನಾನುರಾಗಿ ಮುಗದಾಲಬೆಟ್ಟ ನರಸಿಂಹಪ್ಪ ಹಾಗು ಬೆಂಬಲಿಗರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುವ ಮುಲಕ  ಮತ್ತೆ ಮಾತೃಪಕ್ಷಕ್ಕೆ ವಾಪಸಾಗಿದ್ದಾರೆ. 

ತಾಲೂಕು ಮುಗದಾಲಬೆಟ್ಟ ವಾಸಿ ತಾಲೂಕು ಯಾದವ ಸಮಾಜದ ಹಿರಿಯ ಮುಖಂಡ ರಾಜಕೀಯ ಧುರೀಣ ನರಸಿಂಹಪ್ಪ  ಬೆಂಬಲಿಗರು ಬೆಳಗ್ಗೆ ತಮ್ಮ ಮುಗದಾಲ ಬೆಟ್ಟ ಗ್ರಾಮದ ನಿವಾಸದಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದರು. 

Tap to resize

Latest Videos

ಜೆಡಿಎಸ್‌ಗೆ ದ್ರೋಹ ಆರೋಪ : ಶಾಸಕರೋರ್ವರ ರಾಜೀನಾಮೆಗೆ ಒತ್ತಡ

ಶಾಸಕ ವೆಂಕಟರಮಣಪ್ಪ ಅವರ ಸಮ್ಮುಖದಲ್ಲಿ ನರಸಿಂಹಪ್ಪ ಹಾಗೂ ಬೆಂಬಲಿಗರು ಕಾಂಗ್ರೆಸ್ ಸೆರ್ಪಡೆಯಾದ ವಿಷಯ ಹೊರಬೀಳುತ್ತಿದ್ದಂತೆ ತಾ. ಬ್ಲಾಕ್ ಕಾಂಗ್ರೆಸ್ ಹಾಗು ಯುವ ಘಟಕದ ವಲಯಗಳಲ್ಲಿ ನರಸಿಂಹಪ್ಪ ಅವರಿಗೆ ಅಭಿನಂದನೆಗಳ ಮಹಾಪೂರವೆ ವ್ಯಕ್ತವಾಗಿದೆ. ಇದೆ ವೇಳೆ ಮುಖಂಡ ನರಸಿಂಹಪ್ಪ ಮಾತನಾಡಿ ತಾಲುಕು ಜಿಲ್ಲೆ ಕಾಂಗ್ರೆಸ್ ನಾಯಕತ್ವದ ಬಗ್ಗೆ ಮೆಚ್ಚುಗೆಯಾಗಿದ್ದು, ಅತಿ ಶೀಘ್ರ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ  ರಾಜಣ್ಣ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸೇರುವುದಾಗಿ ಹೇಳಿದರು.

ಈ ಕುರಿತು ತಾಲೂಕು ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ಎಚ್.ವಿ ವೆಂಕಟೇಶ್ ಅವರು ಮಾತನಾಡಿ ತಾಲೂಕು ಯಾದವ ಸಮಾಜದ ಮುಖಂಡರಾದ ನರಸಿಂಹಪ್ಪ ಹಾಗು ಬೆಂಬಲಿಗರು ಕಾಂಗ್ರೆಸ್ ಸೇರ್ಪಡೆಯಾಗಿದ್ದು ಪಕ್ಷಕ್ಕೆ ಮತ್ತಷ್ಟು ಶಕ್ತಿ ಬಂದಂತಾಗಿದೆ ಎಂದರು. 

click me!