ಮಕ್ಕಳಲ್ಲಿ ದೇಶಾಭಿಮಾನ ಬಿತ್ತಬೇಕು: ಆದರ್ಶ ಗೋಖಲೆ

By Kannadaprabha News  |  First Published Feb 13, 2024, 7:37 AM IST

ವಿಶ್ವದ ಶಕ್ತಿಯಾಗಿ ಮುನ್ನಡೆಯುತ್ತಿರುವ ಭಾರತದ ರಾಷ್ಟ್ರಾಭಿಮಾನವನ್ನು ಮಕ್ಕಳಲ್ಲಿ ಬಿತ್ತುವ ಕೆಲಸವಾಗಬೇಕು ಎಂದು ಖ್ಯಾತ ಅಂಕಣಕಾರ ಆದರ್ಶ ಗೋಖಲೆ ಅಭಿಪ್ರಾಯಪಟ್ಟರು


 ತುಮಕೂರು : ವಿಶ್ವದ ಶಕ್ತಿಯಾಗಿ ಮುನ್ನಡೆಯುತ್ತಿರುವ ಭಾರತದ ರಾಷ್ಟ್ರಾಭಿಮಾನವನ್ನು ಮಕ್ಕಳಲ್ಲಿ ಬಿತ್ತುವ ಕೆಲಸವಾಗಬೇಕು ಎಂದು ಖ್ಯಾತ ಅಂಕಣಕಾರ ಆದರ್ಶ ಗೋಖಲೆ ಅಭಿಪ್ರಾಯಪಟ್ಟರು.

ನಗರದ ಜ್ಯೂನಿಯರ್‌ ಕಾಲೇಜು ಮೈದಾನದಲ್ಲಿ ಮಾನವ ಮತ್ತು ಪರಿಸರ ಸಂರಕ್ಷಣಾ ಪಡೆ ವತಿಯಿಂದ ಆಯೋಜಿಸಿದ್ದ ರಾಷ್ಟ್ರ ಜಾಗೃತಿ ಅಭಿಯಾನದ ಸಮಮಾರೋಪ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.

Tap to resize

Latest Videos

undefined

ಒಂದು ಸಹಸ್ರಾರುಮಾನಗಳ ಕಾಲ ಶತ್ರುಗಳ ವಶವಾಗಿತ್ತೋ ಅಂತಹ ಭಾರತವನ್ನು ಸಹಸ್ರಾರು ಹೋರಾಟಗಾರರು ಸ್ವಾತಂತ್ರ್ಯಗೊಳಿಸಿದರು. ಇಂತಹ ಎಲ್ಲಾ ಭಾರತೀಯ ಹೋರಾಟಗಾರರ ಬದುಕು ಆದರ್ಶವಾಗಬೇಕು ಎಂದು ಕರೆ ನೀಡಿದರು.

ಕ್ರಿಕೆಟ್ ಮ್ಯಾಚ್ ರೂಪುಗೊಂಡು ಗೆಲುವಿನ ಸಂಭ್ರಮದಲ್ಲಿದ್ದಾಗ ದೇಶದ ಭಕ್ತಿ ಮೂಡುವುದಲ್ಲ. ಪ್ರತಿ ಕ್ಷಣವೂ ದೇಶಭಕ್ತಿ, ದೇಶದ ರಕ್ಷಣೆಗೆಗಾಗಿ ಸದಾ ಮುಂದಿರಬೇಕು. ದೇಶಕ್ಕೆ ಸಮಸ್ಯೆಯುಂಟಾದಾಗ ನನ್ನ ದೇಶ ಅನ್ನುವ ಜಾಗೃತಿ ಮೂಡದಿದ್ದರೆ ನಮ್ಮ ಐಡೆಂಟಿಟಿ ಆಧಾರ್‌ ಕಾರ್ಡ್‌ಗೆ ಮಾತ್ರ ಸೀಮಿತವಾಗಿ ಬಿಡುತ್ತದೆ. ಭಾರತ ಇಡೀ ವಿಶ್ವದಲ್ಲೇ ಸರ್ವಶ್ರೇಷ್ಠವಾದ ದೇಶವಾಗಿದೆ. ಇಂತಹ ದೇಶದಲ್ಲಿ ನಾವು ಜನ್ಮ ಪಡೆದಿದ್ದೇವೆ ಎಂದರೆ ದೇಶದ ರಕ್ಷಣೆಗೆ ನಮ್ಮ ಕರ್ತವ್ಯವೂ ಇದೆ ಎಂದು ನುಡಿದರು. ದೇಶದ ರಕ್ಷಣೆ ಕೇವಲ ಸೈನಿಕರಿಗೆ ಸೀಮಿತವಲ್ಲ. ನಮ್ಮೆಲ್ಲರ ಮೇಲೆಯೂ ಇದೆ. ಹಾಗಾಗಿ ನಾವು ದೇಶದ ಜಾಗೃತಿ ಬಗ್ಗೆ ಜಾಗೃತರಾಗಬೇಕು ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ರಾಷ್ಟ್ರೀಯ ಮಾನವ ಮತ್ತು ಪರಿಸರ ಸಂರಕ್ಷಣಾ ಪಡೆ ಅಧ್ಯಕ್ಷ ಜಿ.ಎಸ್. ಬಸವರಾಜು ಮಾತನಾಡಿ, 2ನೇ ಅತಿ ದೊಡ್ಡ ರಾಷ್ಟ್ರ ಜಾಗೃತಿಯನ್ನು ಮೂರು ದಿನಗಳಿಂದ ಹಮ್ಮಿಕೊಳ್ಳಲಾಗಿತ್ತು. ಅಯೋಧ್ಯೆ ರಾಮಮಂದಿರದ ದೃಶ್ಯಕಥನ ಉದ್ಘಾಟನೆ, ಸಾಯಿರಾಮನ್ ನೃತ್ಯ ತಂಡದಿಂದ ರಾಮಾಯಣ ನೃತ್ಯರೂಪಕವನ್ನು ಆಯೋಜಿಸಲಾಗಿತ್ತು ಎಂದರು.

ರಾಮಚಂದ್ರ ಹಡಪದ ಮೈಸೂರು ತಂಡದವರಿಂದ ಭಾವ ಲಹರಿ ಕಾರ್ಯಕ್ರಮ ಸಹ ನಡೆಯಿತು. 2ನೇ ದಿನ ಸಿದ್ಧಗಂಗಾ ಮಠದಲ್ಲಿ ಸಂತರ ಸಮಾವೇಶದಲ್ಲಿ ಹಾಗೂ ಟೌನ್‌ಹಾಲ್ ವೃತ್ತದಿಂದ ೮ ಜೋಡೆತ್ತು ಹಾಗೂ ಶ್ರೀರಾಮನ ಮೂರ್ತಿಯನ್ನು ಕಲಾ ತಂಡಗಳ ಮೆರವಣಿಗೆ ಹಾಗೂ ಸುಮಂಗಲಿಯರ ಪೂರ್ಣಕುಂಭ ಕಳಸದೊಂದಿಗೆ ಮೈದಾನಕ್ಕೆ ಕರೆದೊಯ್ಯಲಾಯಿತು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಾನಪದ ನೃತ್ಯದಲ್ಲಿ ಭಾಗವಹಿಸಿದ್ದ ಮೈಸೂರು ತಂಡಕ್ಕೆ ಪ್ರಥಮ ಬಹುಮಾನ (50 ಸಾವಿರ), ಬೆಂಗಳೂರು ದ್ವಿತೀಯ (40 ಸಾವಿರ) ಬಹುಮಾನ ಹಾಗೂ ಮೂರನೇ ಬಹುಮಾನ (30 ಸಾವಿರ) ಕೊರಟಗೆರೆ ತಂಡಕ್ಕೆ ದೊರೆತಿದೆ ಎಂದರು.

ಭಾಗವಹಿಸಿದ್ದ 8 ಜೋಡೆತ್ತುಗಳಿಗೂ ಕೂಡಾ ತಲಾ 8 ಸಾವಿರದಂತೆ ನಗದು ಬಹುಮಾನ ನೀಡಲಾಗಿದೆ. ರಾಷ್ಟ್ರ ಜಾಗೃತಿ ಅಭಿಯಾನ ಯಶಸ್ವಿಗೆ ಸಹಕರಿಸಿದ ತುಮಕೂರು ನಗರ ಮತ್ತು ಜಿಲ್ಲೆಯ ಜನತೆಗೆ ಧನ್ಯವಾದ ಹೇಳುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕ ಜಿ.ಬಿ. ಜ್ಯೋತಿಗಣೇಶ್, ರಾಷ್ಟ್ರೀಯ ಮಾನವ ಮತ್ತು ಪರಿಸರ ಸಂರಕ್ಷಣಾ ಪಡೆ ಅಧ್ಯಕ್ಷ ಜಿ.ಎಸ್. ಬಸವರಾಜು, ರಾಷ್ಟ್ರೀಯ ಜಾಗೃತಿ ಅಭಿಯಾನದ ಅಧ್ಯಕ್ಷ ಎಸ್.ಪಿ. ಚಿದಾನಂದ್, ಗೌರವಾಧ್ಯಕ್ಷ ಕೋರಿ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಕೆ. ಪರುಶುರಾಮಯ್ಯ, ಸಂಯೋಜಕರಾದ ಗೋವಿಂದರಾವ್, ಕೆ.ಶಂಕರ್‌, ಖಜಾಂಚಿ ಈಶ್ವರಗುಪ್ತ, ಪರಶುರಾಮ್, ಬಿಂದುಶ್ರೀ ಶಿವಕುಮಾರ್‌, ಈಶ್ವರ್‌ ಗುಪ್ತ ಮತ್ತಿತರರು ಉಪಸ್ಥಿತರಿದ್ದರು.

click me!