2 ಸಾವಿರ ನೋಟು ಸ್ವೀಕರಿಸಬೇಡಿ ಎಂದ ಬಿಎಂಟಿಸಿ: ಪ್ರಯಾಣಿಕರ ಆಕ್ರೋಶ

By Kannadaprabha News  |  First Published May 28, 2023, 6:02 AM IST

ಎರಡು ಸಾವಿರ ರುಪಾಯಿ ಮುಖಬೆಲೆಯ ನೋಟುಗಳನ್ನು ತೆಗೆದುಕೊಳ್ಳದಂತೆ ಚಾಲಕರು ಮತ್ತು ನಿರ್ವಾಹಕರಿಗೆ ಬಿಎಂಟಿಸಿಯ ಹೊಸಕೋಟೆ ಘಟಕ-39 ಸೂಚನಾ ಪತ್ರ ಹೊರಡಿಸಿರುವ ಬಗ್ಗೆ ಪ್ರಯಾಣಿಕರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ. 


ಬೆಂಗಳೂರು (ಮೇ.28): ಎರಡು ಸಾವಿರ ರುಪಾಯಿ ಮುಖಬೆಲೆಯ ನೋಟುಗಳನ್ನು ತೆಗೆದುಕೊಳ್ಳದಂತೆ ಚಾಲಕರು ಮತ್ತು ನಿರ್ವಾಹಕರಿಗೆ ಬಿಎಂಟಿಸಿಯ ಹೊಸಕೋಟೆ ಘಟಕ-39 ಸೂಚನಾ ಪತ್ರ ಹೊರಡಿಸಿರುವ ಬಗ್ಗೆ ಪ್ರಯಾಣಿಕರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಎರಡು ದಿನಗಳ ಹಿಂದೆ ಘಟಕ-39ರ ವ್ಯವಸ್ಥಾಪಕರು ಹೊರಡಿಸಿದ್ದ ಸೂಚನಾ ಪತ್ರದಲ್ಲಿ ನಿರ್ವಾಹಕರು ಪ್ರಯಾಣಿಕರಿಂದ ಎರಡು ಸಾವಿರ ರು. ಮುಖಬೆಲೆಯ ನೋಟುಗಳನ್ನು ಪಡೆಯಬಾರದು. 

ಪ್ರಯಾಣಿಕರಿಗೆ ಬ್ಯಾಂಕ್‌ನಲ್ಲಿ ನೋಟು ಬದಲಿಸಿಕೊಳ್ಳಲು ಸಲಹೆ ನೀಡಬೇಕು. ಅಲ್ಲದೇ ಘಟಕದ ನಗದು ಶಾಖೆಯಲ್ಲಿ 2 ಸಾವಿರ ರು.ಗಳ ಮುಖಬೆಲೆಯ ನೋಟುಗಳನ್ನು ನೀಡಬಾರದೆಂದು ಸೂಚಿಸಿದ್ದರು. ಈ ಸೂಚನೆ ಹಿನ್ನೆಲೆಯಲ್ಲಿ ಹೊಸಕೋಟೆ ಘಟಕದ ನಿರ್ವಾಹಕರು ಬಸ್‌ಗಳಲ್ಲಿ ಟಿಕೆಟ್‌ ಪಡೆದುಕೊಳ್ಳಲು ಪ್ರಯಾಣಿಕರು ಎರಡು ಸಾವಿರ ರು. ನೋಟನ್ನು ಕೊಟ್ಟರೆ ನಿರಾಕರಿಸುತ್ತಿದ್ದರು. ಹೀಗಾಗಿ ಕೆಲವು ಕಡೆ ನಿರ್ವಾಹಕರು ಮತ್ತು ಪ್ರಯಾಣಿಕರ ನಡುವೆ ವಾಗ್ವಾದ ಪ್ರಕರಣಗಳು ನಡೆದಿತ್ತು. ಬಿಎಂಟಿಸಿ ನಿರ್ವಾಹಕರ ಈ ಧೋರಣೆ ವಿರುದ್ಧ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. 

Tap to resize

Latest Videos

2 ಬಾರಿ ಗೆದ್ದವರನ್ನಷ್ಟೆ ಮಂತ್ರಿ ಮಾಡಿದ್ದು, ಸಚಿವ ಸ್ಥಾನ ಸಿಗದ್ದಕ್ಕೆ ಪಕ್ಷದಲ್ಲಿ ಅಸಮಾಧಾನವಿಲ್ಲ: ಸಿದ್ದು

ಎರಡು ಸಾವಿರ ರು.ಮುಖಬೆಲೆಯ ನೋಟುಗಳನ್ನು ಬ್ಯಾಂಕ್‌ಗಳಿಗೆ ಕೊಟ್ಟು ಬದಲಿಸಿಕೊಳ್ಳುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದ ಬಳಿಕ ಹಲವು ಪ್ರಯಾಣಿಕರು ಕೇವಲ 10ರಿಂದ 20 ಟಿಕೆಟ್‌ ಪಡೆಯಲು ಸಹ ಎರಡು ಸಾವಿರ ರು. ನೋಟನ್ನು ನೀಡುತ್ತಿರುವುದು ಸಮಸ್ಯೆಗೆ ಕಾರಣವಾಗಿದೆ. ಸಾರ್ವಜನಿಕರು ಬ್ಯಾಂಕ್‌ಗಳಲ್ಲಿ ಎರಡು ಸಾವಿರ ನೋಟುಗಳನ್ನು ಬದಲಾಯಿಸುವ ಬದಲು ಟಿಕೆಟ್‌ ನೀಡುವ ಮೂಲಕ ಚಲಾವಣೆ ಮಾಡಲು ಮುಂದಾಗಿದ್ದಾರೆ. ಆದರೆ ಚಿಲ್ಲರೆ ಕೊರತೆ ಕಾರಣ ಹೊಸಕೋಟೆ ಘಟಕ ಈ ಸೂಚನೆ ಹೊರಡಿಸಿತ್ತು ಎಂದು ಮೂಲಗಳು ತಿಳಿಸಿವೆ.

ತಮ್ಮ ಅನುಕೂಲಕ್ಕೆ ತಕ್ಕಂತೆ ಸಚಿವ ಸಂಪುಟ ರಚನೆ ಮಾಡಿಕೊಂಡ ಸಿದ್ದು: ಬಿ.ಕೆ.ಹರಿಪ್ರಸಾದ್‌ ಆಕ್ರೋಶ

ಸೂಚನಾ ಪತ್ರ ವಾಪಸ್‌: ಪ್ರಯಾಣಿಕರ ವಿರೋಧ ಮತ್ತು ಸಾರ್ವಜನಿಕರ ಆಕ್ರೋಶದಿಂದಾಗಿ ಹೊಸಕೋಟೆ ಘಟಕದ ವ್ಯವಸ್ಥಾಪಕರು ಎರಡು ಸಾವಿರ ರು.ಮುಖಬೆಲೆಯ ನೋಟು ಪಡೆಯಬಾರದೆಂಬ ಸೂಚನೆ ಆದೇಶವನ್ನು ವಾಪಸ್‌ ಪಡೆದಿದ್ದಾರೆ. ಪ್ರಯಾಣಿಕರು ಟಿಕೆಟ್‌ ಪಡೆಯಲು ಸೂಕ್ತ ಚಿಲ್ಲರೆ ಇಟ್ಟುಕೊಂಡು ಪ್ರಯಾಣಿಸಬೇಕು ಎಂದು ಮನವಿ ಮಾಡಲಾಗಿದೆ.

click me!