ಯಲ್ಲಾಪುರ: ಮೋರಿಗೆ ಡಿಕ್ಕಿ ಹೊಡೆದ ಸಾರಿಗೆ ಬಸ್‌

Kannadaprabha News   | Asianet News
Published : Feb 03, 2021, 10:51 AM IST
ಯಲ್ಲಾಪುರ: ಮೋರಿಗೆ ಡಿಕ್ಕಿ ಹೊಡೆದ ಸಾರಿಗೆ ಬಸ್‌

ಸಾರಾಂಶ

ಮೋರಿಗೆ ಡಿಕ್ಕೆ ಹೊಡೆದ ಪರಿ​ಣಾಮ ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಗಾಯ| ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ-ಹಳಿಯಾಳ ರಸ್ತೆಯ ಡೌಗಿನಾಲಾ-ಕಣ್ಣಿಗೇರಿ ನಡುವೆ ನಡೆದ ಘಟನೆ| ಬಸ್‌ ಚಾಲಕ ಮಾರುತಿ ರಾಮಪ್ಪ ಪಟವರ್ಧನ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು| 

ಯಲ್ಲಾಪುರ(ಫೆ.03): ಚಾಲ​ಕನ ನಿಯಂತ್ರಣ ತಪ್ಪಿದ ಸಾರಿಗೆ ಬಸ್‌ ರಸ್ತೆ ಬದಿಯ ಮೋರಿಗೆ ಡಿಕ್ಕೆ ಹೊಡೆದ ಪರಿ​ಣಾಮ ಬಸ್‌ನಲ್ಲಿದ್ದ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಸೋಮ​ವಾರ ಯಲ್ಲಾಪುರ-ಹಳಿಯಾಳ ರಸ್ತೆಯ ಡೌಗಿನಾಲಾ-ಕಣ್ಣಿಗೇರಿ ನಡುವೆ ಸಂಭವಿಸಿದೆ. 

ಹಳಿಯಾಳದಿಂದ ಯಲ್ಲಾಪುರಕ್ಕೆ ಬರುತ್ತಿದ್ದ ಸಾರಿಗೆ ಸಂಸ್ಥೆ ಬಸ್‌ ಚಾಲಕನ ನಿಯಂತ್ರಣ ತಪ್ಪಿ ದುರ್ಘ​ಟನೆ ನಡೆ​ದಿದೆ. ಬಸ್‌ನಲ್ಲಿದ್ದ ಕಿರವತ್ತಿ ಇಂದಿರಾನಗರ ನಿವಾಸಿಗಳಾದ ರೋಸಿ ಕಿರಣ ಡಯಾಸ್‌ ಸಿದ್ದಿ (28), ನಿಶಲ್ಮನವೆಲ್‌ ಸಿದ್ದಿ (13), ಡೆಸಿ ಮನವೇಲ್‌ ಸಿದ್ದಿ (15), ಶಾಂತಾ ಮನವೇಲ್‌ ಸಿದ್ದಿ(35), ಅಶ್ವಿನಿ ಲಾರೆನ್ಸ್‌ ಸಿದ್ದಿ (13) ಹಾಗೂ ಕಾಳಮ್ಮನಗರದ ನಿವಾಸಿ ಫರ್ವಿನ್‌ಬಾನು ರಿಯಾಜ್‌ಅಹ್ಮದ್‌ ಕಂಡು(23) ಗಾಯಗೊಂಡಿದ್ದು ತಾಲೂಕಾ ಆಸ್ಪ​ತ್ರೆಗೆ ದಾಖ​ಲಿಸಿ ಚಿಕಿತ್ಸೆ ನೀಡ​ಲಾ​ಗು​ತ್ತದೆ. 

ಅಂಕೋಲಾ ಬಳಿ ಭೀಕರ ಅಪಘಾತ; ಧಾರವಾಡ ಮಹಿಳೆ ದುರ್ಮರಣ

ಬಸ್‌ ಚಾಲಕ ಮಾರುತಿ ರಾಮಪ್ಪ ಪಟವರ್ಧನ(53) ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

PREV
click me!

Recommended Stories

ಜನರ ವಿಶ್ವಾಸ ಕಳೆದುಕೊಂಡ ಕಾಂಗ್ರೆಸ್, ಚುನಾವಣೆಗೇ ಬನ್ನಿ: ಸರ್ಕಾರಕ್ಕೆ ಸಿ.ಟಿ.ರವಿ ಸವಾಲು
ಸಿದ್ದರಾಮಯ್ಯ ಆಡಳಿತ ಕೇವಲ ಟೀಕೆಯಲ್ಲಿ ಮುಳುಗಿದೆ: ಕೇಂದ್ರ ಸಚಿವ ವಿ.ಸೋಮಣ್ಣ ಆರೋಪ