ಕಲಬುರಗಿ: ಮಹಿಳಾ ಕಂಡಕ್ಟರ್‌ ಮೇಲೆ ಪ್ರಯಾಣಿಕರಿಂದ ಹಲ್ಲೆ

Kannadaprabha News   | Asianet News
Published : Jul 12, 2020, 12:10 PM IST
ಕಲಬುರಗಿ: ಮಹಿಳಾ ಕಂಡಕ್ಟರ್‌ ಮೇಲೆ ಪ್ರಯಾಣಿಕರಿಂದ ಹಲ್ಲೆ

ಸಾರಾಂಶ

ಮಹಿಳಾ ಕಂಡಕ್ಟರ್‌ ಸುಮಿತ್ರಾ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಪ್ರಯಾಣಿಕರು| ವಿಜಯಪುರ-ಹುಮನಾಬಾದ ಬಸ್‌ನಲ್ಲಿ ನಡೆದ ಘಟನೆ| ಈ ಸಂಬಂಧ ಅಂಕುಶ್‌ ಮತ್ತು ಮಹೇಶ್‌ ಎಂಬುವರ ವಿರುದ್ಧ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ ಕಂಡಕ್ಟರ್‌ ಸುಮಿತ್ರಾ|

ಕಲಬುರಗಿ(ಜು.12): ಪ್ರಯಾಣಿಕರಿಬ್ಬರು ಮಹಿಳಾ ಕಂಡಕ್ಟರ್‌ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಘಟನೆ ಶನಿವಾರ ನಗರದಲ್ಲಿ ನಡೆದಿದೆ.

ಸುಮಿತ್ರಾ ಶಿವಾಜಿ ಹಲ್ಲೆಗೊಳಗಾದ ಮಹಿಳಾ ಕಂಡಕ್ಟರ್‌. ನಗರದ ಅಂಕುಶ್‌ ಮತ್ತು ಮಹೇಶ್‌ ಎಂಬುವವರು ಸುಮಿತ್ರಾ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದರಿಂದ ಅವರ ವಿರುದ್ಧ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕ ಕಾಂಗ್ರೆಸ್‌ನ ಮತ್ತೋರ್ವ ಶಾಸಕನಿಗೆ ಕೊರೋನಾ ಅಟ್ಯಾಕ್..!

ವಿಜಯಪುರ-ಹುಮನಾಬಾದ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ನಗರದ ಅಂಕುಶ್‌ ಮತ್ತು ಮಹೇಶ್‌ ನಗರದ ಆಳಂದ ಸರ್ಕಲ್‌ ಬಳಿ ಬಸ್‌ ನಿಲುಗಡೆ ಮಾಡುವಂತೆ ಕೋರಿದ್ದಾರೆ. ಈ ವೇಳೆ ಸುಮಿತ್ರಾ ಇದು ನಿಲುಗಡೆ ಸ್ಥಳವಲ್ಲ, ಬಸ್‌ ನಿಲುಗಡೆ ಮಾಡಲು ಬರುವುದಿಲ್ಲ ಎಂದಿದ್ದಕ್ಕೆ ಅವರೊಂದಿಗೆ ವಾಗ್ವಾದಕ್ಕಿಳಿದು ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಅಂಕುಶ್‌ ಮತ್ತು ಮಹೇಶ್‌ ವಿರುದ್ಧ ಸುಮಿತ್ರಾ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.
 

PREV
click me!

Recommended Stories

ಮೆಟ್ರೋ ಗುಲಾಬಿ ಮಾರ್ಗದ ರೈಲು ಅನಾವರಣ: ಯಾವ್ಯಾವ ಮಾರ್ಗಕ್ಕೆ?
ದಿಲ್ಲಿ, ಮುಂಬಯಿ ರೀತಿ ರಾಜಧಾನಿಗೆ ಎರಡು ಪೊಲೀಸ್‌ ಕಮೀಷನರೇಟ್‌