ಸಿಹಿ ಸುದ್ದಿ ನೀಡಿದ್ರು ಬಿಜೆಪಿ ಸಂಸದ ಬಚ್ಚೇಗೌಡ

By Kannadaprabha News  |  First Published Dec 8, 2020, 2:22 PM IST

ಬಿಜೆಪಿ ಸಂಸದ ಬಿ ಎನ್ ಬಚ್ಚೇಗೌಡ ಅವರು ತಮ್ಮ ಕ್ಷೇತ್ರದ ಜನತೆಗೆ ಗುಡ್ ನ್ಯೂಸ್ ನೀಡಿದ್ದಾರೆ. ಏನದು ಗುಡ್ ನ್ಯೂಸ್ ..?


ಚಿಕ್ಕಬಳ್ಳಾಪುರ (ಡಿ.08) :  ಜಿಲ್ಲೆಯ ಗೌರಿಬಿದನೂರು, ದೊಡ್ಡಬಳ್ಳಾಪುರ ತಾಲೂಕುಗಳ ಜನರಿಗೆ ಅನುಕೂಲವಾಗುವಂತೆ ಹಿಂದೂಪುರದಿಂದ ಯಶವಂತಪುರದವರೆಗೆ ಮತ್ತೆ ಪ್ಯಾಸೆಂಜರ್‌ ರೈಲು ಸಂಚಾರವನ್ನು ಆರಂಭಿಸಲಾಗಿದ್ದು, ಈ ರೈಲು ಪರೀಕ್ಷಾರ್ಥವಾಗಿ 10 ದಿನಗಳ ಕಾಲ ಸಂಚರಿಸಲಿದೆ.

 ಸಾರ್ವಜನಿಕರು ಈ ರೈಲು ಸೇವೆಯನ್ನು ಸದುಪಯೋಗ ಮಾಡಿಕೊಳ್ಳಬೇಕೆಂದು ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದ ಬಿ.ಎನ್‌.ಬಚ್ಚೇಗೌಡ ತಿಳಿಸಿದ್ದಾರೆ.

Tap to resize

Latest Videos

ಮಂಗಳೂರು - ಬೆಂಗಳೂರು ಮಧ್ಯೆ ವಿಶೇಷ ರೈಲು : ಇಲ್ಲಿದೆ ಟೈಮ್ ಟೇಬಲ್ .

ಹಿಂದೂಪುರ-ಯಶವಂತಪುರ ರೈಲು ಸಂಚಾರದ ಕುರಿತು ಸೋಮವಾರ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕೋವಿಡ್‌ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ರೈಲು ಸಂಚಾರ ಸೇವೆಗೆ ರೈಲ್ವೆ ಇಲಾಖೆ ಮತ್ತೆ ಹಂತ ಹಂತವಾಗಿ ಚಾಲನೆ ನೀಡುತ್ತಿದೆ.

ಈ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಗೌರಿಬಿದನೂರು, ತೊಂಡೇಬಾವಿ ಮತ್ತು ದೊಡ್ಡಬಳ್ಳಾಪುರದ ಮೂಲಕ 10 ದಿನಗಳ ಕಾಲ ಪರೀಕ್ಷಾರ್ಥವಾಗಿ ಹಿಂದೂಪುರ-ಯಶವಂತಪುರ ಪ್ಯಾಸೆಂಜರ್‌ ರೈಲು ಸಂಚರಿಸಲಿದೆ.

click me!