ವಿರಾಜಪೇಟೆಯಲ್ಲಿ ಆಟೋ ಸೇವೆಗೆ ಬಂತು‘ಪರಿಹಾರ’ ಆ್ಯಪ್‌; ಆಗಸ್ಟ್‌ನಲ್ಲಿ ಪ್ರಾಯೋಗಿಕ ಜಾರಿ !

By Kannadaprabha News  |  First Published Jul 30, 2023, 12:29 PM IST

ಡಿಜಿಟಲ್‌ ಯುಗದ ಈ ದಿನಗಳಲ್ಲಿ ಎಲ್ಲ ವ್ಯವಹಾರವೂ ಆನ್‌ಲೈನ್‌ನಲ್ಲೇ ನಡೆಯುತ್ತಿವೆ. ನಗರ ವ್ಯಾಪ್ತಿಯಲ್ಲಿ ಬಾಡಿಗೆ ವಾಹನಗಳನ್ನು ಆನ್‌ಲೈನ್‌ ಮೂಲಕವೇ ಬುಕ್ಕಿಂಗ್‌ ಮಾಡುವ ವ್ಯವಸ್ಥೆಯೂ ಇದೆ. ವಿರಾಜಪೇಟೆಯಲ್ಲಿ ಮೊದಲ ಬಾರಿಗೆ ಆಟೋರಿಕ್ಷಾ ಸೇರಿದಂತೆ ಬಾಡಿಗೆ ವಾಹನಗಳನ್ನು ಬಾಡಿಗೆ ಪಡೆಯಲು ‘ಪರಿಹಾರ ’ ಎಂಬ ಆ್ಯಪ್‌ನ್ನು ಜಾರಿಗೆ ತರಲಾಗುತ್ತಿದೆ.


ಮಂಜುನಾಥ್‌ ಟಿ.ಎನ್‌.

ವಿರಾಜಪೇಟೆ (ಜು.30) :  ಡಿಜಿಟಲ್‌ ಯುಗದ ಈ ದಿನಗಳಲ್ಲಿ ಎಲ್ಲ ವ್ಯವಹಾರವೂ ಆನ್‌ಲೈನ್‌ನಲ್ಲೇ ನಡೆಯುತ್ತಿವೆ. ನಗರ ವ್ಯಾಪ್ತಿಯಲ್ಲಿ ಬಾಡಿಗೆ ವಾಹನಗಳನ್ನು ಆನ್‌ಲೈನ್‌ ಮೂಲಕವೇ ಬುಕ್ಕಿಂಗ್‌ ಮಾಡುವ ವ್ಯವಸ್ಥೆಯೂ ಇದೆ. ವಿರಾಜಪೇಟೆಯಲ್ಲಿ ಮೊದಲ ಬಾರಿಗೆ ಆಟೋರಿಕ್ಷಾ ಸೇರಿದಂತೆ ಬಾಡಿಗೆ ವಾಹನಗಳನ್ನು ಬಾಡಿಗೆ ಪಡೆಯಲು ‘ಪರಿಹಾರ ’ ಎಂಬ ಆ್ಯಪ್‌ನ್ನು ಜಾರಿಗೆ ತರಲಾಗುತ್ತಿದೆ.

Latest Videos

undefined

ಆಗಸ್ಟ್‌ ಮೊದಲ ವಾರ ವಿರಾಜಪೇಟೆಯಲ್ಲಿ ಪ್ರಾಯೋಗಿಕವಾಗಿ ಆ್ಯಪ್‌ಗೆ ಚಾಲನೆ ಸಿಗಲಿದೆ. ಇದು ಯಶಸ್ವಿಯಾದಲ್ಲಿ ಇನ್ನೆರಡು ತಿಂಗಳೊಳಗೆ ಕೊಡಗು ಜಿಲ್ಲೆಯಾದ್ಯಂತ ಈ ಸೇವೆ ವಿಸ್ತಾರಗೊಳ್ಳಲಿದೆ. ಇದರೊಂದಿಗೆ ಆನ್‌ಲೈನ್‌ ಮೂಲಕೇ ಮೂಲಕವೇ ಪ್ರತಿಯೊಂದು ವ್ಯವಹಾರವೂ ಲಭ್ಯವಾಗುವಂತೆ ಮಾಡುವ ಸಿದ್ಧತೆಯೂ ನಡೆದಿದೆ.

ಆಂಬುಲೆನ್ಸ್‌ ಚಾಲಕ, ಗರ್ಭಿಣಿ ಪತ್ನಿಗೆ ಹಲ್ಲೆ, ಜೀವಬೆದರಿಕೆ: ದೂರು, ಪ್ರತಿದೂರು ದಾಖಲು

ಎಂಜಿನಿಯರಿಂಗ್‌ ಪದವೀಧರರಾಗಿರುವ ವಿರಾಜಪೇಟೆಯ ಯುವ ಉದ್ಯಮಿ ಪಿ. ವಿಷ್ಣು ‘ಪರಿಹಾರ’ ಆ್ಯಪ್‌ ರೂವಾರಿಯಾಗಿದ್ದಾರೆ. ವಿರಾಜಪೇಟೆಯಲ್ಲಿ ರವಿರಾಜ್‌ ಗ್ಯಾಸ್‌ ಏಜೆನ್ಸಿ ನಡೆಸುತ್ತಿರುವ ಉದ್ಯಮಿ ಪರಮಶಿವ ಅವರ ಪುತ್ರ ವಿಷ್ಣು ಹೊಸ ವ್ಯವಸ್ಥೆ¿æೂಂದನ್ನು ಜನರಿಗೆ ಪರಿಚಯಿಸುವ ಕೆಲಸ್ಕೆ ಮುಂದಾಗಿದ್ದಾರೆ. ಇವರ ಪ್ರಯತ್ನಕ್ಕೆ ನೂರಾರು ಸದಸ್ಯರನ್ನು ಹೊಂದಿರುವ ವಿರಾಜಪೇಟೆ ಆಟೋ ಚಾಲಕರ ಸಂಘ ಸಾಥ್‌ ನೀಡೆದೆ.

ಏನಿದು ಪರಿಹಾರ ಆ್ಯಪ್‌?: ಪ್ರಥಮ ಹಂತದಲ್ಲಿ ಆನ್‌ಲೈನ್‌ ಮೂಲಕ ವಿರಾಜಪೇಟೆಯಲ್ಲಿ ಆಟೋ ರಿಕ್ಷಾ ಬುಕ್ಕಿಂಗ್‌ ಮಾಡುವ ಅವಕಾಶ ಕಲ್ಪಿಸಲಾಗುತ್ತದೆ. ತಾವು ಇರುವ ಸ್ಥಳಕ್ಕೆ ಆಟೋಗಳು ಬರುವ ಸವಲತ್ತು ಲಭ್ಯವಾಗಲಿದೆ. ತಾವು ಇರುವ ಸ್ಥಳದಿಂದ ತೆರಳಬೇಕಾದ ಸ್ಥಳಕ್ಕೆ ಎಷ್ಟುಖರ್ಚಾಗುತ್ತದೆ ಎಂಬ ಮಾಹಿತಿಯೂ ಆ್ಯಪ್‌ನಲ್ಲಿ ಲಭ್ಯವಾಗುತ್ತದೆ. ಆನ್‌ಲೈನ್‌ ಮೂಲಕ ಬುಕ್ಕಿಂಗ್‌ ಮಾಡಿದ್ದಾಗ, ಸಮೀಪದಲ್ಲಿರುವ ಆಟೋ ತಾವಿರುವಲ್ಲಿಗೇ ಬರಲಿದೆ. ಕನ್ನಡ ಮತ್ತು ಇಂಗ್ಲೀಷ್‌ ಭಾಷೆಯಲ್ಲಿ ಈ ಆ್ಯಪ್‌ ಕಾರ್ಯನಿರ್ವಹಿಸಲಿದೆ.

ಆಟೋ ಸೇವೆ ಬಳಿಕ ಕಾರು, ಜೀಪು, ಗೂಡ್‌್ಸ ವಾಹನಗಳು ಕೂಡ ಪರಿಹಾರ ಆ್ಯಪ್‌ನಲ್ಲಿ ಲಭ್ಯವಾಗುವಂತೆ ಮಾಡಲು ಉದ್ದೇಶಿಸಲಾಗಿದೆ. ಹಣ್ಣುಹಂಪಲು, ತರಕಾರಿ, ಆಹಾರ ಪದಾರ್ಥ, ಔಷಧಿ ಸೇರಿದಂತೆ ಪ್ರತಿಯೊಂದು ಉತ್ಪನ್ನ ಮತ್ತು ಸವಲತ್ತುಗಳನ್ನು ಮನೆಯಿಂದಲ್ಲೇ ಪಡೆದುಕೊಳ್ಳುವ ಅವಕಾಶವನ್ನು ಮುಂದಿನ ದಿನಗಳಲ್ಲಿ ಪರಿಹಾರ ಆ್ಯಪ್‌ನಲ್ಲಿ ಕಲ್ಪಿಸಲು ಚಿಂತಿಸಲಾಗಿದೆ. ‘ನಿಮ್ಮ ಪರಿವಾರ- ನಿಮ್ಮ ಪರಿಹಾರ’ ಎಂಬ ಘೋಷ ವಾಕ್ಯದೊಂದಿಗೆ ಪರಿಹಾರ ಆ್ಯಪ್‌ ವಿನ್ಯಾಸಗೊಳ್ಳುತ್ತಿದೆ.

ಆ್ಯಪ್‌ಗೆ ರಿಕ್ಷಾಗಳ ನೋಂದಣಿ ಹೇಗೆ?: ಆಟೋ ರಿಕ್ಷಾ ದಾಖಲಾತಿ (ಆರ್‌ಸಿ), ಚಾಲಕ ಹೊಂದಿರುವ ಚಾಲನಾ ಪರವಾನಗಿ, ಬ್ಯಾಡ್ಜ್‌ ನಂಬರ್‌ ಸಹಿತ ಭರ್ತಿ ಮಾಡಿದ ಅರ್ಜಿ ಸಲ್ಲಿಸುವುದರ ಮೂಲಕ ಆಟೋಗಳು ಆ್ಯಪ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ದಾಖಲೆ ಸೇರಿದಂತೆ ಪ್ರತಿಯೊಂದು ಕ್ರಮಬದ್ಧವಾಗಿರುವ ಆಟೋರಿಕ್ಷಾಗಳನ್ನು ಮಾತ್ರ ಸೇರ್ಪಡೆ ಮಾಡಲಾಗುತ್ತದೆ. ಈ ಸಂದರ್ಭ ಚಾಲಕನ ಹಿನ್ನೆಲೆ ಕೂಡ ಗಮನಿಸಲಾಗುತ್ತದೆ.

ಕಳೆದೊಂದು ವರ್ಷದಿಂದ ಪರಿಹಾರ ಆ್ಯಪ್‌ ಸಿದ್ಧ ಪಡಿಸಲು ಶ್ರಮಿಸಿದ್ದೇನೆ. ತಮ್ಮ ಸಹಪಾಠಿ ಸ್ನೇಹಿತರ ಮೂಲಕ ಆ್ಯಪ್‌ ಅಭಿವೃದ್ಧಿ ಪಡಿಸಲಾಗಿದೆ. ಆಗಸ್ವ್‌ ಮೊದಲ ವಾರದಿಂದ ಮೊದಲ ಹಂತದಲ್ಲಿ ವಿರಾಜಪೇಟೆ ನಗರಕ್ಕೆ ಸಂಬಂಧಿಸಿದ್ದಂತೆ ಆ್ಯಪ್‌ ಕಾರ್ಯಾರಂಭ ಮಾಡಲಿದೆ. ಇನ್ನೆರಡು ತಿಂಗಳಲ್ಲಿ ಜಿಲ್ಲೆಯಾದ್ಯಂತ ಕಾರ್ಯಾರಂಭ ಮಾಡಲಿದೆ ಎನ್ನುತ್ತಾರೆ ವಿಷ್ಣು ಪರಮಶಿವ.

ವಿರಾಜಪೇಟೆ ನಗರದಲ್ಲಿ ಪ್ರಸ್ತುತ 600 ಕ್ಕೂ ಹೆಚ್ಚು ಆಟೋರಿಕ್ಷಾಗಳಿವೆ. ಈ ಪೈಕಿ 100 ಆಟೋರಿಕ್ಷಾಗಳು ಪರಿಹಾರ ಆ್ಯಪ್‌ ಮೂಲಕ ಜನಸೇವೆ ನೀಡಲು ಒಪ್ಪಿಗೆ ನೀಡಿವೆ. ಪರಿಹಾರ ಆ್ಯಪ್‌ ಮೂಲಕ ಜನಸೇವೆ ಪ್ರಾರಂಭವಾಗುತ್ತಿದ್ದಂತೆ ಮತ್ತಷ್ಟುಆಟೋರಿಕ್ಷಾಗಳು ಸೇರಿಕೊಳ್ಳುವ ನಿರೀಕ್ಷೆ ಇದೆ.

ಪರಿಹಾರ ಆ್ಯಪ್‌ ಮೂಲಕ ಸೇವೆ ಬಳಸಲು ಉದ್ದೇಶಿಸುವ ಗ್ರಾಹಕರು ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಪರಿಹಾರ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಡೌನ್‌ಲೋಡ್‌ ಉಚಿತವಾಗಿದೆ. ಡೋನ್‌ಲೋಡ್‌ ಮಾಡಿದ ಬಳಿಕ ಅದರಲ್ಲಿ ಗ್ರಾಹಕರು ತಮ್ಮ ಹೆಸರು, ಮೊಬೈಲ್‌ ಸಂಖ್ಯೆ, ಇ-ಮೇಲ್‌ ಐಡಿ ನೋಂದಾಯಿಸಿಕೊಳ್ಳಬೇಕು. ಇನ್ನೆರಡು ತಿಂಗಳೊಳಗೆ ಕೊಡಗಿನಲ್ಲಿರುವ 1 ಸಾವಿರ ಆಟೋರಿಕ್ಷಾಗಳು ಪರಿಹಾರ ಆ್ಯಪ್‌ ಮೂಲಕ ಜನಸೇವೆ ಒದಗಿಸುವಂತೆ ಮಾಡಲು ವಿಷ್ಣು ಪರಮಶಿವ ಯೋಜನೆ ರೂಪಿಸಿದ್ದಾರೆ. ದಕ್ಷಿಣ ಭಾರತದ ಕಾಶ್ಮೀರ ಎಂದು ಪ್ರಖ್ಯಾತಿ ಹೊಂದಿರುವ ಕೊಡಗಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಪ್ರವಾಸಿಗರಿಗೆ ಅಗತ್ಯವಾದ ಬಾಡಿಗೆ ವಾಹನ ಸವಲತ್ತನ್ನು ಆನ್‌ಲೈನ್‌ ಮೂಲಕ ಪಡೆಯುವ ಯೋಜನೆ ರೂಪುಗೊಳ್ಳುತ್ತಿದೆ. ಆನ್‌ಲೈನ್‌ ಬುಕ್ಕಿಂಗ್‌ ಮಾಡಿಕೊಳ್ಳುವುದರ ಮೂಲಕ ತಮಗೆ ಬೇಕಾದವಸ್ತುಗಳನ್ನು ತಾವಿರುವ ಸ್ಥಳಕ್ಕೆ ಒದಗಿಸುವ ರೀತಿ ಪರಿಹಾರ ಆ್ಯಪ್‌ನ್ನು ವಿನ್ಯಾಸಗೊಳಿಸಲಾಗುತ್ತಿದೆ. ಪರಿಹಾರ ಆ್ಯಪ್‌ ಸೇವೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ವಿಷ್ಣು ಪರಮಶಿವ (9481113577) ಅವರನ್ನು ಸಂಪರ್ಕಿಸಬಹುದು.

ಅರ್ಧ ಚಂದ್ರಾಕೃತಿಯಲ್ಲಿ ಕಣ್ಮನ ಸೆಳೆಯುತ್ತಿದೆ ಕೊಡಗಿನ ಮಿನಿ ನಯಾಗರ!

ವಿರಾಜಪೇಟೆಯಲ್ಲಿ ಆಟೋಗಳ ಸೇವೆ ಪಡೆಯಲು ಹೊಸ ಆ್ಯಪ್‌ ಅಭಿವೃದ್ಧಿ ಪಡಿಸುತ್ತಿರುವುದು ಸ್ವಾಗತರ್ಹ. ಎಲ್ಲ ಕ್ಷೇತ್ರಗಳಲ್ಲಿ ತಂತ್ರಜ್ಞಾನ ಬಳಸಿಕೊಂಡು ಮುನ್ನಡೆಯುತ್ತಿರುವಾಗ ಆಟೋ ವೃತ್ತಿ ಕೂಡ ತಂತ್ರಜ್ಞಾನ ಅಳವಡಿಸುವುದು ಸೂಕ್ತ . ಸರ್ಕಾರ ಆಟೋಗಳಿಗೆ ಪರ್ಮಿಟ್‌ ಕೊಟ್ಟು ಕೈತೊಳೆದುಕೊಳ್ಳುತ್ತದೆ. ನಂತರ ಆಟೋಗಳಿಗೆ ನಿಲ್ಲಿಸಲು ಕೂಡ ಸೂಕ್ತ ಸ್ಥಳವಿರುವುದಿಲ್ಲ. ಇದರಿಂದ ಬಹಳಷ್ಟುಆಟೋ ಚಾಲಕರು ನಿಲುಗಡೆ ಇಲ್ಲದೆ ಕಂಗಾಲಾಗಿದ್ದಾರೆ. ಈ ಸಂದರ್ಭದಲ್ಲಿ ಆ್ಯಪ್‌ ಆಧಾರಿತ ಆಟೋ ಸೇವೆ ವರದಾನವಾಗಲಿದೆ. ನಾವಿರುವ ಸ್ಥಳದಿಂದಲೇ ಬಾಡಿಗೆಯ ಆಯ್ಕೆ ಗಿಟ್ಟಿಸಿಕೊಳ್ಳಬಹುದು ಹಾಗೂ ದರದ ವಿಚಾರದಲ್ಲಿ ಪ್ರಯಾಣಿಕರು ಹಾಗೂ ಚಾಲಕರ ಮಧ್ಯೆ ಭಿನ್ನಾಭಿಪ್ರಾಯ ಇಲ್ಲದೆ ವ್ಯವಹರಿಸಬಹುದು. ಸ್ಥಳೀಯರೇ ಆದ ಯುವ ಉದ್ಯಮಿ ಪಿ. ವಿಷ್ಣು ಅವರು ಆ್ಯಪ್‌ ಜಾರಿಗೆ ತರುತ್ತಿರುವುದು ಅಭಿನಂದನೀಯ

- ಶಶಿಧರನ್‌ಅಧ್ಯಕ್ಷರು, ಆಟೋ ಚಾಲಕ ಹಾಗೂ ಮಾಲಕರ ಸಂಘ, ವಿರಾಜಪೇಟೆ

 

ಕೊಡಗಿನಲ್ಲಿ ನೆಲೆಸಿರುವವರು ಹಾಗೂ ಪ್ರವಾಸಿಗರನ್ನು ಗಮನದಲ್ಲಿಟ್ಟುಕೊಂಡು ಪರಿಹಾರ ಆ್ಯಪ್‌ ರೂಪಿಸಲಾಗಿದೆ. ಮೊದಲ ಹಂತದಲ್ಲಿ ಆಟೋ ಸೇವೆ ಪ್ರಾರಂಭಿಸಲಾಗುತ್ತದೆ. ಆಗಸ್ಟ್‌ ಮೊದಲ ವಾರ ಚಾಲನೆಗೊಳ್ಳಲಿದ್ದು, ವಿರಾಜಪೇಟೆ ನಗರದಲ್ಲಿ ಆಟೋ ಸೇವೆ ಪ್ರಾರಂಭವಾಗಲಿದೆ. ಇನ್ನೆರಡು ತಿಂಗಳಲ್ಲಿ ಜಿಲ್ಲೆಯಾದ್ಯಂತ ಸೇವೆ ಲಭ್ಯವಾಗುವಂತೆ ಮಾಡಲಾಗುತ್ತದೆ. ತದನಂತರ ಮತ್ತಷ್ಟುಸೇವೆ ಒದಗಿಸಲು ಉದ್ದೇಶಿಸಲಾಗಿದೆ

- ವಿಷ್ಣು ಪರಮಶಿವ, ‘ಪರಿಹಾರ’ ಆ್ಯಪ್‌ ರೂವಾರಿ, ವಿರಾಜಪೇಟೆ

click me!