ಹೆತ್ತಮ್ಮನಿಗೆ ಬೇಡವಾಯ್ತು ಹೆಣ್ಣು ಮಗು-ಆಸ್ಪತ್ರೆಯಲ್ಲೇ ಬಿಟ್ಟು ಪರಾರಿ!

By Web DeskFirst Published Oct 14, 2018, 6:05 PM IST
Highlights

ಹೆತ್ತ ಮಗುವನ್ನ ಆಸ್ಪತ್ರೆಯಲ್ಲಿ ಬಿಟ್ಟು ಪರಾರಿಯಾದ ಹೆತ್ತಮ್ಮ. ಸುದ್ದಿ ತಿಳಿದು ದತ್ತು ಪಡೆಯಲು ಮುಂದಾದ ದತ್ತು ಪೋಷಕರು. ಈ ಘಟನೆ ನಡೆದಿರೋದು ಕೋಲಾರದಲ್ಲಿ. ಇಲ್ಲಿದೆ ಹೆಣ್ಣು ಮಗುವಿನ ಅಂತರಾಳದ ಕೂಗು.

ಕೋಲಾರ(ಅ.14): ಹೆಣ್ಣು ಮಗುವಿನ ಜನ್ಮ ನೀಡಿದ ತಾಯಿ ಪುಟ್ಟ ಕಂದನನ್ನ ಆಸ್ಪತ್ರೆಯಲ್ಲಿ ಬಿಟ್ಟು ಪರಾರಿಯಾದ ಘಟನೆ ಕೋಲಾರ ಜಿಲ್ಲೆಯ ಎಸ್.ಎನ್.ಆರ್ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಸೆ.22 ರಂದು ಆಸ್ಪತ್ರೆಗೆ ದಾಖಲಾಗಿದ್ದ ಪುಷ್ಪ, ಹೆಣ್ಣು ಮುಗವಿಗೆ ಜನ್ಮ ನೀಡಿದ್ದಾರೆ. ಹುಟ್ಟಿದ ಮಗು ತೂಕ ಕಡಿಮೆ ಹಾಗೂ ಉಸಿರಾಟದ ತೊಂದರೆ ಇದ್ದ ಹಿನ್ನೆಲೆ ಪೋಷಕರಾದ ಪುಷ್ಪ ಹಾಗೂ ಸುನಿಲ್ ಮಗುವನ್ನ ಆಸ್ಪತ್ರೆಯಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.
 
ಆಸ್ಪತ್ರೆಗೆ ತಪ್ಪು ವಿಳಾಸ ಹಾಗೂ ದೂರವಾಣಿ ಸಂಖ್ಯೆ ನೀಡಿದ ಪೋಷಕರು ಪರಾರಿಯಾಗಿದ್ದಾರೆ. ಇತ್ತ ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ವೈದ್ಯರು ಹೇಳಿದ್ದಾರೆ. ಇದೀಗ ಮಗುವಿನ ಪೋಷಕರಿಗಾಗಿ ಆಸ್ಪತ್ರೆ ಸಿಬ್ಬಂಧಿ ಹಾಗೂ ಕೋಲಾರ ನಗರ ರಾಣೆ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ಮಗುವನ್ನು ಬಿಟ್ಟು ಪರಾರಿಯಾದ ಸುದ್ದಿ ತಿಳಿದು ಇದೀಗ ಪುಟ್ಟ ಕಂದಮ್ಮನ್ನ ದತ್ತು ಪಡೆಯಲು ಪೋಷಕರು ಆಸ್ಪತ್ರೆಗೆ ಧಾವಿಸಿದ್ದಾರೆ. ಮಗುವನ್ನ ದತ್ತು ಪಡೆಯಲು  ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಅನುಮತಿ ಪಡೆಯಲು ದತ್ತು ಪೋಷಕರು ಮುಂದಾಗಿದ್ದಾರೆ.

click me!