ಹೊಸ ರೂಲ್ಸ್ : ನಿಮ್ಮ ಮಕ್ಕಳನ್ನು ಶಾಲೆಗೆ ಕಳಿಸಲು ಬದಲಿ ವ್ಯವಸ್ಥೆ ಮಾಡ್ಕೊಳ್ಳಿ

By Kannadaprabha News  |  First Published Sep 12, 2019, 3:42 PM IST

ಪೋಷಕರೇ ಎಚ್ಚರ. ಹೊಸ ನಿಯಮ ಜಾರಿಯಾಗಿದ್ದು, ನಿಮ್ಮ ಮಕ್ಕಳನ್ನು ಶಾಲೆಗೆ ಕಳಿಸಲು ಬದಲಿ ವ್ಯವಸ್ಥೆ ಮಾಡಿಕೊಳ್ಳುವುದು ಒಳಿತು.


ಚಿತ್ರದುರ್ಗ [ಸೆ.12]:  ಮಾರುತಿ ಓಮ್ನಿಗಳಲ್ಲಿ ಮಕ್ಕಳನ್ನು ಶಾಲೆಗೆ ಕಳಿಸುತ್ತಿರುವ ಪೋಷಕರು 15 ದಿನಗಳ ಒಳಗಾಗಿ ಬದಲಿ ವ್ಯವಸ್ಥೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿ ಯಾಗಿದೆ.

ಮೋಟಾರು ವಾಹನ ಕಾಯ್ದೆ ಅಧಿನಿಯಮ 1988 ಕ್ಕೆ ತಿದ್ದುಪಡಿ ಮಾಡಿ ಸಂಚಾರಿ ನಿಯಮ ಉಲ್ಲಂಘನೆಗಳಿಗೆ ಹಾಲಿ ಇದ್ದ ದಂಡದ ದರವನ್ನು ಹೆಚ್ಚಳ ಮಾಡಿರುವುದರಿಂದ ಓಮ್ನಿ ಚಾಲಕರು ಹಾಗೂ ಮಾಲೀಕರು ಇನ್ನು ಮೇಲೆ ಮಕ್ಕಳನ್ನುಶಾಲೆಗೆ ಕರೆದೊಯ್ಯುವ ಸಾಹಸ ಮಾಡ ಲಾರರು. 

Latest Videos

undefined

ಹಾಗೊಂದು ವೇಳೆ ಮಾಡಿದರೆ ದಂಡ, ಲೈಸೆನ್ಸ್ ರದ್ದು ಮುಂತಾದ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ. ಚಿತ್ರದುರ್ಗ ನಗರದಲ್ಲಿ ಹತ್ತಕ್ಕೂ ಹೆಚ್ಚು ಪ್ರತಿಷ್ಠಿತ ಶಾಲೆಗಳಿದ್ದು, ಇಲ್ಲಿಗೆ ವಿದ್ಯಾಭ್ಯಾಸಕ್ಕಾಗಿ ಮಕ್ಕಳನ್ನು ಕಳಿಸುವ ಪೋಷಕರು ಅನಿವಾರ್ಯವಾಗಿ ಮಾರುತಿ ಓಮ್ನಿ ಅವಲಂಭಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಶಾಲೆಗಳ ಬಸ್‌ಗಳಲ್ಲಿ ದುಬಾರಿ ಮೊತ್ತ ತೆರಬೇಕಾಗುತ್ತದೆ ಎಂಬ ಕಾರಣಕ್ಕೆ ಖಾಸಗಿಯಾಗಿ ಓಡುವ ಮಾರುತಿ ಓಮ್ನಿಗಳಲ್ಲಿ ಮಕ್ಕಳನ್ನು ಕಳಿಸುತ್ತಿದ್ದಾರೆ. ಈ ಓಮ್ನಿಗಳಲ್ಲಿ 20 ರಿಂದ 25 ಮಂದಿ ಹುಡುಗರನ್ನು ಕುರಿಗಳ ರೀತಿ ತುಂಬಿ ಕರೆದೊಯ್ಯ ಲಾಗುತ್ತದೆ. ಮೋಟಾರು ವಾಹನ ಕಾಯ್ದೆ ಅಧಿನಿಯಮದ ಪ್ರಕಾರ ಇದು ಅಪಾಯಕಾರಿ ಚಾಲನೆ ಎಂಬ ವಾಖ್ಯಾನಕ್ಕೆ ಒಳಪಡುತ್ತದೆ. 

ಪ್ರಾಂಶುಪಾಲರ ಹೆಸರಿಗೇ  ಇರಬೇಕು: ಮಕ್ಕಳನ್ನು ಶಾಲೆಗಳಿಗೆ ಕರೆದೊಯ್ಯಲು ಖಾಸಗಿಯವರು ಮುಂದಾಗುವಂತಿಲ್ಲ. ನಿಯಮಗಳ ಪ್ರಕಾರ ಶಾಲಾ ಬಸ್‌ಗಳು ಇಲ್ಲವೇ ವಾಹನಗಳು ಆಯಾ ಶಾಲೆಗಳ ಪ್ರಾಂಶುಪಾಲರ ಹೆಸರಿಗೆ ಇರಬೇಕು. ಕಡ್ಡಾಯವಾಗಿ ಹಳದಿ ಬಣ್ಣ ಬಳಿದಿರಬೇಕು. ವಾಹನಗಳಲ್ಲಿ ಮಕ್ಕಳ ಸುರಕ್ಷತೆಗಾಗಿ ಅಗತ್ಯ ಕ್ರಮ ಕೈಗೊಂಡಿರಬೇಕು. 

ಇದಾವ ನಿಯಮಗಳು ಓಮ್ನಿಗಳಲ್ಲಿ ಪಾಲನೆ ಆಗುತ್ತಿಲ್ಲ. ಇದು ಪೂರ್ಣ ಪ್ರಮಾಣದ ಕಾನೂನು ಉಲ್ಲಂಘನೆ. ಶಾಲಾ ಬಸ್‌ಗಳಿಗೆ ತೆರಿಗೆಯಲ್ಲಿ ವಿನಾಯಿತಿ ತೋರಿಸಲಾಗಿದೆ. ಶಾಲಾ ಮಕ್ಕಳನ್ನು ಕರೆದೊಯ್ಯುವ ಬಹುತೇಕ ಓಮ್ನಿಗಳು ಸ್ವಂತಕ್ಕೆ ಬಳಕೆ ಮಾಡಿಕೊಳ್ಳುವ ಅವಕಾಶ ಇರುವ ಬಿಳಿ ಬೋರ್ಡ್ ವಾಹನಗಳಾಗಿವೆ. 

ಹಾಗೊಂದು ವೇಳೆ ಹಳದಿ ಬೋರ್ಡ್ ಇದ್ದರೂ ಶಾಲಾ ಮಕ್ಕಳನ್ನು ಕರೆದೊಯ್ಯುವಂತಿಲ್ಲ. ಸಾರಿಗೆ ಪ್ರಾಧಿಕಾರದಿಂದ ಅನುಮತಿ ಪಡೆದು ನಿಯಮಾ ವಳಿಗಳ ಪಾಲನೆ ಮಾಡಬೇಕು. ಯಾವುದೇಕಾರ ಣಕ್ಕೂ ಖಾಸಗಿಯವರು ಮಕ್ಕಳನ್ನು ಕರೆದೊಯ್ಯು ವಂತಿಲ್ಲ. ಓಮ್ನಿಯಲ್ಲಿ 6 ಪ್ಲಸ್ ಎರಡು ಸೀಟಿನ ಸಾಮರ್ಥ್ಯ ಇರುತ್ತದೆ.

ಮಕ್ಕಳನ್ನು ಅರ್ಧ ಸೀಟುಗಳಾಗಿ ಪರಿಗಣಿ ಸಿದರೂ 14 ಮಂದಿ ಮಾತ್ರ ಪ್ರಯಾಣಿಸಬಹುದು. ಆದರೆ, 20 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಉಸಿರು ಗಟ್ಟುವ ವಾತಾವರಣದಲ್ಲಿ ಕರೆದೊಯ್ಯಲಾಗುತ್ತದೆ. ಶಾಲಾ ವೇಳೆಗೆ ಕರೆದೊಯ್ಯಲು ಚಾಲಕ ಕೆಲವು ಸಾರಿ  ಎರ್ರಾಬಿರ್ರಿಯಾಗಿ ಓಡಿಸುತ್ತಾನೆ.

ದಂಡ, ಜೈಲು ಶಿಕ್ಷೆ ಎಲ್ಲ ಇದೆ: ವಾಹನವನ್ನು ಅಪಾಯಕಾರಿಯಾಗಿ ಚಾಲನೆ ಮಾಡಿದರೆ ರು.5000 ಮೊದಲ ಅಪರಾಧಕ್ಕಾಗಿ ಮತ್ತು ರು. 10000  2ನೇ ಅಪರಾಧಕ್ಕಾಗಿ ಹಾಗೂ ಲೈಸೆನ್ಸ್ ರದ್ದು ಮಾಡುವ ಅವಕಾಶ ಕಾಯ್ದೆಯಲ್ಲಿದೆ. 

ಅಡ್ಡಾದಿಡ್ಡಿಯಾಗಿ ವಾಹನ ಚಾಲನೆ ಮಾಡಿದರೆ ಮೊದಲ ಅಪರಾಧಕ್ಕಾಗಿ ರು.5000, ಪರವಾನಗಿ ಇಲ್ಲದೆ, ವಾಹನ ಚಾಲನೆ ಮಾಡಿದರೆ ರು.10000 (ನ್ಯಾಯಾಲಯದಲ್ಲಿ ದಂಡ) ಎಲ್ಲವೂ ಅನ್ವಯ ವಾಗಲಿದೆ. ಮಾರುತಿ ಓಮ್ನಿಯಲ್ಲಿ ಶಾಲಾ ಮಕ್ಕಳನ್ನು ಕರೆದೊಯ್ಯುವವರು ಇಷ್ಟೆಲ್ಲಾ ರಿಸ್ಕ್‌ಗಳನ್ನು ಎದುರಿಸಬೇಕಾಗುತ್ತದೆ.

click me!