ಮೈಸೂರು: ಹೈಲಿರೈಡ್‌, ಓಪನ್‌ ಬಸ್‌ಗೆ ಮುಗಿಬಿದ್ದ ಜನ

By Kannadaprabha NewsFirst Published Oct 4, 2019, 8:25 AM IST
Highlights

ಮೈಸೂರು ದಸರಾ ವೈಭವವನ್ನು ಆಕಾಶದಿಂದ ಕಣ್ತುಂಬಿಕೊಳ್ಳುವಲ್ಲಿ ಬಹಳಷ್ಟು ಜನ ಆಸಕ್ತಿ ತೋರಿಸಿದ್ದಾರೆ. ದಸರಾ ಪ್ರಯುಕ್ತ ಆಯೋಜಿಸಲಾದ ಹೈಲಿರೈಡ್‌ ಮತ್ತು ಓಪನ್‌ ಬಸ್‌ ವ್ಯವಸ್ಥೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ಮೈಸೂರು(ಅ.04): ದಸರೆ ಸೊಬಗು ನೋಡಲು ದೂರದೂರಿಂದ ಬರುತ್ತಿರುವ ಜನರಿಗೆ ಪಕ್ಷಿನೋಟದಲ್ಲಿಯೂ ತೋರಿಸಲು ಜಿಲ್ಲಾಡಳಿತ ಸೂಕ್ತ ವ್ಯವಸ್ಥೆ ಮಾಡಿದೆ. ಅದರ ಭಾಗವಾಗಿ ಹೈಲಿರೈಡ್‌ ಮತ್ತು ಓಪನ್‌ ಬಸ್‌ ಸಾರ್ವಜನಿಕರಿಗೆ ಸಾಕಷ್ಟುಅನುಕೂಲ ಮಾಡಿಕೊಡುತ್ತಿದೆ.

ಬೆಳಗ್ಗೆಯಿಂದ ಸಂಜೆಯವರೆಗೆ ನೋಡುವ ಮೈಸೂರು ಒಂದು ರೀತಿ ಕಂಡರೆ, ರಾತ್ರಿ ನೋಡುವ ಮೈಸೂರೇ ಮತ್ತೊಂದು ರೀತಿಯಲ್ಲಿ ವಿಶೇಷವಾಗಿ ಕಾಣುತ್ತಿದೆ. ಸದಾ ಗಿಜಿಗುಡುವ ಮೈಸೂರು, ಪಾರಂಪರಿಕ ಕಟ್ಟಡಗಳು, ವಿಸ್ತಾರ ವೃತ್ತಗಳೂ, ಪ್ರವಾಸಿ ತಾಣಗಳನ್ನು ಹೈಲಿರೈಡ್‌ನಲ್ಲಿ 8 ನಿಮಿಷ ಹಾಗೂ ಓಪನ್‌ ಬಸ್ಸಿನಲ್ಲಿ ಅರ್ಧ ತಾಸಿನಲ್ಲಿ ನೋಡುವ ಸೌಭಾಗ್ಯ ಪ್ರವಾಸಿಗರಿಗೆ ದೊರಕಿದೆ.

ಏನೇನು ನೋಡಬಹುದು?:

ಅಂಬಾ ವಿಲಾಸ ಅರಮನೆ, ದೀಪಾಲಂಕಾರ, ಕೆಆರ್‌ಎಸ್‌ ಅಣೆಕಟ್ಟು, ಮೃಗಾಲಯ, ಚಾಮುಂಡಿ ಬೆಟ್ಟವನ್ನು ಮೇಲಿನಿಂದಲೇ ಕಣ್ತುಂಬಿಕೊಳ್ಳಬಹುದು. ಇದುವರೆಗೂ 283 ಜನ ಆಕಾಶದಿಂದ ಸಾಂಸ್ಕೃತಿಕ ನಗರವನ್ನು ನೋಡಿ ಸಂತಸ ಪಟ್ಟಿದ್ದಾರೆ. ಪ್ರತಿ ಪ್ರಯಾಣಿಕನಿಗೆ 2700 ರೂಪಾಯಿ ನಿಗದಿ ಮಾಡಲಾಗಿದೆ. ಹೆಲಿಪ್ಯಾಡ್‌ನಿಂದ ಹೊರಟರೆ ಅರಮನೆ, ಚಾಮುಂಡಿ ಬೆಟ್ಟ, ಡಿಸಿ ಆಫೀಸ್‌ ಸೇರಿದಂತೆ 8 ನಿಮಿಷದಲ್ಲಿ ಇಡೀ ಮೈಸೂರನ್ನು ಆಗಸದಿಂದ ನೋಡಿ ಮಲ್ಲಿಗೆ ನಗರಿ ವೈಭವವನ್ನು ಕಣ್ತುಂಬ ನೋಡಿ ಆನಂದಿಸಬಹುದು.

ನೆರೆ ಪರಿಹಾರ ತನ್ನಿ ಎಂದಿದಕ್ಕೆ ಚಕ್ರವರ್ತಿ ವಿರುದ್ಧ ಸಿಂಹ ಘರ್ಜನೆ

2000, 2500 ರು. ಟಕೆಟ್ ದರ:

ಪ್ಯಾರಾ ಗ್ಲೈಡಿಂಗ್‌ ಸೌಲಭ್ಯವನ್ನು ಮಹಾರಾಜ ಕಾಲೇಜಿನ ಹಿಂಭಾಗದ ಹಾಕಿ ಮೈದಾನದಲ್ಲಿ ಏರ್ಪಡಿಸಿದೆ. ಅಲ್ಲಿ ಹೋಗಿ 2000, 2500 ರು. ನೀಡಿ ಆಕಾಶದಲ್ಲಿ ವಿಹರಿಸಬಹುದು. ಇದರಲ್ಲಿ 110 ಕೆಜಿ ಮಾತ್ರ ತೂಕ ಇರಬೇಕು. ಅದಕ್ಕಿಂತ ಹೆಚ್ಚು ಕೂರಿಸುವುದಿಲ್ಲ. ಇನ್ನು ಮಕ್ಕಳಾದರೆ ಇಬ್ಬರು, ಹಿರಿಯಾರದರೆ ಒಬ್ಬರು ಇದರ ಜೊತೆಗೆ ಪೈಲಟ್‌ ಒಬ್ಬರು ಇರುತ್ತಾರೆ.

ಓಪನ್‌ ಬಸ್ಸಿನಲ್ಲಿ ಓಡಾಟ

ಪ್ರವಾಸೋದ್ಯಮ ಇಲಾಖೆ ವತಿಯಿಂದ 1 ಓಪನ್‌ ಬಸ್‌ ವ್ಯವಸ್ಥೆಯನ್ನು ಮಾಡಲಾಗಿದೆ. ಇದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಒಬ್ಬರಿಗೆ 100 ರು. ಹಾಗೂ ಸಂಜೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಒಬ್ಬರಿಗೆ 200 ರು. ದರವನ್ನು ನಿಗದಿಪಡಿಸಿದೆ. ಇದರ ಸೇವೆ ಆ.10 ವರೆಗೆ ಈ ಸೇವೆ ದೊರಕಲಿದೆ. ಬೆಳಗ್ಗೆ 10 ಗಂಟೆಗೆ ಮಯೂರ ಹೋಟೆಲ್‌ನಿಂದ ಹೊರಟರೆ ರಾಮಸ್ವಾಮಿ ವೃತ್ತ, ಹಾರ್ಡಿಂಜ್‌ ವೃತ್ತ, ಕೆ.ಆರ್‌. ಸರ್ಕಲ್‌ ದೇವರಾಜ ಅರಸ್‌ ರಸ್ತೆ, ಮೆಟ್ರೋಪೋಲ್‌, ರೈಲ್ವೆ ನಿಲ್ದಾಣ, ಕೆ.ಆರ್‌. ಆಸ್ಪತ್ರೆ, ಬನ್ನಿ ಮಂಟಪದಿಂದ ಎಲ್‌ಐಸಿ ಕಚೇರಿಯ ಮೂಲಕ ಸಾಗಿ ಸ್ವಸ್ಥಾನಕ್ಕೆ ಮರಳಲಿದೆ.

ಮೈಸೂರು: 30 ಸೆಕೆಂಡ್‌ನಲ್ಲಿ 6 ಮೊಟ್ಟೆತಿಂದ ಕೌಶಿಕ್‌!

ಜೆಎಸ್‌ಎಸ್‌ ಮೈದಾನದಲ್ಲಿ ದಿನಕ್ಕೆ 30 ಜನರನ್ನು ಕೂರಿಸಿ ಹಾರಾಟ ಮಾಡುತ್ತಿದ್ದೆವು. ಈಗ ಇಲ್ಲಿ ಇವತ್ತು 80 ಜನರು ಹಾರಾಟ ನಡೆಸಿದ್ದಾರೆ. ಒಟ್ಟು 4 ಪ್ಯಾರಾ ಗ್ಲೈಡಿಂಗ್ ಮೆಷಿನ್‌ ಇವೆ ಎಂದು ಪ್ಯಾರಾ ಗ್ಲೈಡಿಂಗ್‌ ವ್ಯವಸ್ಥಾಪ ರಾಕೇಶ್‌ ಹೇಳಿದ್ದಾರೆ.

-ಆರ್‌. ವೆಂಕಟಾಚಲಪತಿ

click me!