ಮೊಬೈಲ್‌ ಟವರ್‌ನ ರೂಟರ್‌ ಕದಿಯುತಿದ್ದ ಈ ಎಂಜಿನಿಯರ್‌!

By Kannadaprabha NewsFirst Published Oct 4, 2019, 8:15 AM IST
Highlights

ಮೊಬೈಲ್ ಟವರ್ ರೂಟರ್ ಕದಿಯುತ್ತಿದ್ದ ಎಂಜಿನಿಯರ್ ಓರ್ವ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. 

ಬೆಂಗಳೂರು [ಅ.04]: ಬೈಲ್‌ ಟವರ್‌ಗೆ ಅಳವಡಿಸುವ ರೂಟರ್‌ ಹಾಗೂ ಬಿಡಿ ಭಾಗಗಳನ್ನು ಕಳ್ಳತನ ಮಾಡುತ್ತಿದ್ದ ಎಂಜಿನಿಯರ್‌ನನ್ನು ವೈಟ್‌ಫೀಲ್ಡ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ವಿಜಿನಾಪುರದ ರಾಮಮೂರ್ತಿ ನಗರ ನಿವಾಸಿ ಕರುಣಾಕರಣ್‌ ಅಲಿಯಾಸ್‌ ಕಾರ್ತಿಕ್‌ ಅಲಿಯಾಸ್‌ ಕರ್ಣ (31) ಬಂಧಿತ. ಆರೋಪಿಯಿಂದ ಕಳವು ಮಾಡಿದ್ದ ಸಿಸ್ಕೋ ಕಂಪನಿಯ .3 ಲಕ್ಷ ಮೌಲ್ಯದ ರೂಟರ್‌ ಹಾಗೂ ಬಿಡಿ ಭಾಗಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿ ಡಿಪ್ಲೋಮಾ ಪದವೀಧರನಾಗಿದ್ದು, ಈ ಹಿಂದೆ ನೋಕಿಯಾ ಸಿಮೆನ್ಸ್‌ ನೆಟ್‌ವರ್ಕ್ನಲ್ಲಿ ಎಂಜಿನಿಯರ್‌ ಆಗಿ 2011ರಿಂದ ಎರಡು ವರ್ಷ ಕೆಲಸ ಮಾಡಿದ್ದ. ಬಳಿಕ ಟಾಟಾ ಡೊಕೊಮೊ ಕಂಪನಿಯಲ್ಲಿ ಮೊಬೈಲ್‌ ಟವರ್‌ ಕಂಬಗಳ ಮೇಲ್ವಿಚಾರಕ ಹಾಗೂ ಎಂಜಿನಿಯರ್‌ ಆಗಿ ಕೆಲಸ ಮಾಡಿದ ಅನುಭವ ಹೊಂದಿದ್ದ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕೆಲಸ ತ್ಯಜಿಸಿದ್ದ ಆರೋಪಿ ಒಂದೂವರೆ ವರ್ಷದಿಂದ ಮನೆಯಲ್ಲಿಯೇ ಇದ್ದ. ಈತನ ತಂದೆ ಅನಾರೋಗ್ಯಕ್ಕೆ ಒಳಗಾಗಿದ್ದು, ಜೀವನ ನಿರ್ವಹಣೆ ಕಷ್ಟವಾಗಿತ್ತು. ಅಲ್ಲದೆ, ಕುರುಣಾಕರಣ್‌ ಕುಡಿತದ ಚಟಕ್ಕೆ ಬಿದ್ದಿದ್ದ. ಹಣಕ್ಕಾಗಿ ಟವರ್‌ ಕಂಬಗಳಿಗೆ ಅಳವಡಿಸುವ ರೂಟರ್‌ಗಳನ್ನು ಹಾಗೂ ರೂಟರ್‌ಗಳಿಗೆ ಅಳವಡಿಸುವ ಎಸ್‌ಎಫ್‌ಸಿಗಳನ್ನು ಕಳ್ಳತನ ಮಾಡುತ್ತಿದ್ದ. ಕದ್ದ ವಸ್ತುಗಳನ್ನು ಮಹದೇವಪುರದಲ್ಲಿ ಗುಜರಿ ಅಂಗಡಿಗೆ ಮಾರಾಟ ಮಾಡುತ್ತಿದ್ದ.

click me!