ಮೀಸಲಾತಿಗಾಗಿ ಡಿಸೆಂಬರ್ 22 ರಂದು ಪಂಚಮಸಾಲಿ ಸಮಾಜದಿಂದ ಬೆಳಗಾವಿ ಸುವರ್ಣಸೌಧದಲ್ಲಿ ಪ್ರತಿಭಟನೆ

By Suvarna News  |  First Published Dec 20, 2022, 9:57 PM IST

2 ಎ ಮೀಸಲಾತಿಗಾಗಿ ರಾಜ್ಯದ  ಪಂಚಮಸಾಲಿ ಸಮಾಜ ಬಾಂಧವರಿಂದ ಡಿ 22  ರಂದು ಬೆಳಗ್ಗೆ 11 ರಿಂದ ಬೆಳಗಾವಿಯ‌ ಸುವರ್ಣಸೌಧದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. 


ವರದಿ : ವರದರಾಜ್, ಏಷ್ಯಾನೆಟ್ ಸುವರ್ಣನ್ಯೂಸ್

ದಾವಣಗೆರೆ (ಡಿ.20): 2 ಎ ಮೀಸಲಾತಿಗಾಗಿ ರಾಜ್ಯದ  ಪಂಚಮಸಾಲಿ ಸಮಾಜ ಬಾಂಧವರಿಂದ ಡಿ 22  ರಂದು ಬೆಳಗ್ಗೆ 11 ರಿಂದ ಬೆಳಗಾವಿಯ‌ ಸುವರ್ಣಸೌಧದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ‌ ಶಾಸಕ‌ ಹೆಚ್.ಎಸ್ ಶಿವಶಂಕರ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೂಡಲಸಂಗಮದ ಶ್ರೀ ಬಸವಜಯಮೃತ್ಯುಂಜ ಸ್ವಾಮೀಜಿ ನೇತೃತ್ವದಲ್ಲಿ ಬೆಳಗಾವಿಗೆ ತೆರಳಲಿದ್ದೇವೆ. ಮೀಸಲಾತಿಗೆ ಒತ್ತಾಯಿಸಿ ಕೂಡಲಸಂಗಮ ದಿಂದ ಬೆಂಗಳೂರಿನವರೆಗೆ ಶ್ರೀಗಳ ನೇತೃತ್ವದಲ್ಲಿ ಬೆಂಗಳೂರಿನವರೆಗೆ ಪಾದಯಾತ್ರೆ ಕೈಗೊಂಡು ‌ಶಕ್ತಿ ಪ್ರದರ್ಶನ ಮಾಡಿದ ಫಲವಾಗಿ ಸರ್ಕಾರ ಮೀಸಲಾತಿ ನೀಡುವ ಬಗ್ಗೆ ಚಿಂತನೆ ನಡೆಸಿದೆ ಎರಡು ವರ್ಷದ ಈ ಹೋರಾಟದಲ್ಲಿ ಅನೇಕ ಗಡುವುಗಳನ್ನು ಶ್ರೀಗಳು ನೀಡಿದ್ದರು ಸರ್ಕಾರ ಸಕಾರಾತ್ಮಕ ವಾಗಿ‌ ಸ್ಪಂದಿಸಿದೆ. ಹೋರಾಟದಲ್ಲಿ ಕೆಲವರು ತಟಸ್ಥ ರಾದರೂ ಕೂಡ ಶ್ರೀಗಳು‌ ನಿರಂತರವಾಗಿ ರಾಜ್ಯದ ಉದ್ದಗಲಕ್ಕೂ ಶಕ್ತಿ ಮೀರಿ ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದಾರೆ.

Tap to resize

Latest Videos

ಈಗಾಗಲೇ ಸವದತ್ತಿಯಿಂದ ಬೆಳಗಾವಿಗೆ ಶ್ರೀ ಗಳ ನೇತೃತ್ವದಲ್ಲಿ ಪಾದಯಾತ್ರೆ ನಡೆಯುತ್ತಿದೆ ಸುಮಾರು 25 ಲಕ್ಷ ಜನರು ಸೇರುವ ನಿರೀಕ್ಷೆ ಇದೆ 10 ಲಕ್ಷ ಜನರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ದಾವಣಗೆರೆಯಿಂದ 1000 ಕ್ವಿಂಟಾಲ್ ಅಕ್ಕಿ ತೆಗೆದುಕೊಂಡು ಹೋಗಲಾಗುತ್ತಿದೆ. ಎಲ್ಲಾ ಜಿಲ್ಲೆಯ ಸಮಾಜಬಾಂಧವರು ಸಹಕಾರ ನೀಡುತ್ತಿದ್ದಾರೆ ಬಹುದೊಡ್ಡ ಹೋರಾಟ ಇದಾಗಿದೆ. ಇಂತಹ ಹೋರಾಟದಲ್ಲಿ ಅನೇಕರು ನಡುವೆ ಬಂದು ಹೋಗಿದ್ದಾರೆ. ಆದರೆ ಹೋರಾಟ ನಿಂತಿಲ್ಲ. ಹೋರಾಟದಿಂದ ಸಮಾಜ‌ ಸಂಘಟಿತವಾಗಿದೆ. ಉಳಿದ ಸಮಾಜಕ್ಕೆ ನಮ್ಮ ಹೋರಾಟ ಮಾದರಿಯಾಗಿದೆ. ಸಿಎಂ ಭೇಟಿ ಮಾಡಿದ ವೇಳೆ ಭರವಸೆ ನೀಡಿದ್ದಾರೆ. ಸಮಾಜಕ್ಕೆ ನ್ಯಾಯ ಒದಗಿಸುವುದಾಗಿ ಹೇಳಿದ್ದಾರೆ. ಡಿ.22 ರೊಳಗೆ‌ ಮೀಸಲಾತಿ ಘೋಷಿಸದಿದ್ದರೆ ರಾಜಕೀಯವಾಗಿ ಪರಿಣಾಮ ಬೀರುವ ಸಮಾವೇಶ ಆಗಲಿದೆ. ನಮ್ಮ ಬೇಡಿಕೆಗಳನ್ನು ಗಮನಿಸಿ ಗೌರವಿಸದಿದ್ದರೆ ಸರ್ಕಾರಕ್ಕೆ ಪೆಟ್ಟು ಶತಸಿದ್ದ.

ಮೀಸಲಾತಿ ಘೋಷಿಸದಿದ್ರೆ ಬೃಹತ್ ಪ್ರತಿಭಟನೆ: ಸರ್ಕಾರಕ್ಕೆ ಪಂಚಮಸಾಲಿ ಹೋರಾಟಗಾರರ ಎಚ್ಚರಿಕೆ

ಯಾವುದೇ ಪಕ್ಷ ವ್ಯಕ್ತಿಯ ವಿರುದ್ದ ನಮ್ಮ ಹೋರಾಟ ಅಲ್ಲ ಇದು ಪಕ್ಷಾತೀತ ಹೋರಾಟ, ಸಮಾಜದ ಹೋರಾಟ ಯಾರನ್ನೂ ಟೀಕಿಸುವ ಹೋರಾಟ ನಮ್ಮದಲ್ಲ. ಯಾವುದೇ ತಂತ್ರಗಾರಿಕೆಗೆ ಸಮಾಜ ಬಗ್ಗುವುದಿಲ್ಲ. ಸರ್ಕಾರ ತಾರತಮ್ಯ ಮಾಡದೇ ಮೀಸಲಾತಿ ನೀಡಬೇಕು ಎಂದರು. 

ಒಳ ಮೀಸಲಾತಿ ವಿಚಾರ: ಕಾಂಗ್ರೆಸ್‌ ಒಡೆದು ಆಳುವ ನೀತಿ ಅನುಸರಿಸುತ್ತಿದೆ ಎಂದ ಸಿ.ಟಿ. ರವಿ

ವೈಯಕ್ತಿಕ ಪ್ರತಿಷ್ಠೆ ಬಿಟ್ಟು‌ ಸಮಾಜದ ಹೋರಾಟಕ್ಕೆ ಎಲ್ಲರೂ ಬರಬೇಕು.ಶ್ರೀಗಳ ಹೋರಾಟ ಸುನಾಮಿಯಂತೆ. ಎಲ್ಲರನ್ನೂ‌ ಸ್ವಾಗತ ಮಾಡಲಾಗುತ್ತದೆ. ಸಮಾಜಕ್ಕಾಗಿ  ಸ್ವಾಮೀಜಿಗಳೇ ಹೊರತು ಶ್ರೀಗಳಿಗಾಗಿ ಸಮಾಜವಲ್ಲ. ಸ್ವಾಮೀಜಿಗಳಾದವರು  ಸಮಾಜಕ್ಕಾಗಿ‌ ತಮ್ಮನ್ನು ಸವೆಸಿಕೊಳ್ಳಬೇಕು. ಸಮಾಜದ ಋಣ‌ ತೀರಿಸುವ‌ ಕೆಲಸ ಮಾಡಬೇಕು ಎಂದು ಹೆಚ್ ಎಸ್  ಶಿವಶಂಕರ್ ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಸದಸ್ಯ ಸೋಗಿ ಶಾಂತಕುಮಾರ್, ಪರಮೇಶ್ವರ ಗೌಡ್ರು, ಗೋಪನಾಳ್ ಅಶೋಕ್, ಎಸ್ ಓಂಕಾರಪ್ಪ, ಬಕ್ಕೇಶ್ ಕಾರಿಗನೂರು, ಭರತ್, ಮಹದೇವಪ್ಪ, ಮಂಜುನಾಥ್ ಇದ್ದರು.

click me!