ಪಾದರಾಯನಪುರ ಕಾರ್ಪೋರೇಟರ್‌ ಇಮ್ರಾನ್‌ ಪಾಷಾ ಮತ್ತು 21 ಜನರಿಗೆ ಜಾಮೀನು

Kannadaprabha News   | Asianet News
Published : Jul 15, 2020, 09:22 AM IST
ಪಾದರಾಯನಪುರ ಕಾರ್ಪೋರೇಟರ್‌ ಇಮ್ರಾನ್‌ ಪಾಷಾ ಮತ್ತು 21 ಜನರಿಗೆ ಜಾಮೀನು

ಸಾರಾಂಶ

ಲಾಕ್‌ಡೌನ್‌ ನಿಯಮಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದ ಪಾದರಾಯನಪುರ ಕಾರ್ಪೋರೇಟರ್‌ ಇಮ್ರಾನ್‌ ಪಾಷಾ ಹಾಗೂ ಅವರ 21 ಮಂದಿ ಬೆಂಬಲಿಗರಿಗೆ ಎಸಿಎಂಎಂ ನ್ಯಾಯಾಲಯ ಮಂಗಳವಾರ ಜಾಮೀನು ಮಂಜೂರು ಮಾಡಿದೆ.

ಬೆಂಗಳೂರು(ಜು.15): ಲಾಕ್‌ಡೌನ್‌ ನಿಯಮಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದ ಪಾದರಾಯನಪುರ ಕಾರ್ಪೋರೇಟರ್‌ ಇಮ್ರಾನ್‌ ಪಾಷಾ ಹಾಗೂ ಅವರ 21 ಮಂದಿ ಬೆಂಬಲಿಗರಿಗೆ ಎಸಿಎಂಎಂ ನ್ಯಾಯಾಲಯ ಮಂಗಳವಾರ ಜಾಮೀನು ಮಂಜೂರು ಮಾಡಿದೆ.

ಇಮ್ರಾನ್‌ ಪಾಷಾ ಹಾಗೂ ಅವರ ಬೆಂಬಲಿಗರು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಇಮ್ರಾನ್‌ ಪಾಷಾ ಹಾಗೂ ಅವರ 21 ಮಂದಿ ಬೆಂಬಲಿಗರಿಗೆ ಷರತ್ತು ಬದ್ದ ಜಾಮೀನು ಮಂಜೂರು ಮಾಡಿದೆ.

ಹಳಸಿದ ಅನ್ನ ಕೊಡ್ತಾರೆ: ಸೋಂಕಿತರ ಆಕ್ರೋಶ

ತಲಾ .1 ಲಕ್ಷ ಮೊತ್ತದ ಬಾಂಡ್‌, ಅಷ್ಟೇ ಮೊತ್ತದ ಇಬ್ಬರ ಭದ್ರತಾ ಶ್ಯೂರಿಟಿ, ಅನುಮತಿ ಇಲ್ಲದೆ ನ್ಯಾಯಾಲಯದ ವ್ಯಾಪ್ತಿಯಿಂದ ಹೊರಹೋಗಬಾರದು, ಸಾಕ್ಷ್ಯ ನಾಶಪಡಿಸಬಾರದು ಎಂಬ ಷರತ್ತುಗಳನ್ನು ವಿಧಿಸಿದೆ.

ಕೊರೋನಾಗೆ ತುತ್ತಾಗಿ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಯಾದ ಹಿನ್ನೆಲೆಯಲ್ಲಿ ಇಮ್ರಾನ್‌ ಪಾಷಾ ತೆರೆದ ವಾಹನದಲ್ಲಿ ತಮ್ಮ ಬೆಂಬಲಿಗರೊಂದಿಗೆ ಮೆರವಣಿಗೆ ಮಾಡಿದ್ದರು. ಕೊರೋನಾ ಮಾರ್ಗಸೂಚಿ ಪಾಲಿಸದಿರುವ ಮತ್ತು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಬಂಧಿಸಲಾಗಿತ್ತು.

PREV
click me!

Recommended Stories

ದ್ವೇಷ ಭಾಷಣ ಪ್ರಕರಣ; ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ ನಿರೀಕ್ಷಣಾ ಜಾಮೀನು!
Uttara Kannada: ಆಸ್ಪತ್ರೆಗೆ ಹೋಗಿದ್ದ ಗರ್ಭಿಣಿ ಹುಟ್ಟುಹಬ್ಬದಂದೇ ಸಾವು; ಹೊಟ್ಟೆಯಲ್ಲೇ ಅಸುನೀಗದ ಮಗು!