* ಜೋಡೆತ್ತು ಸ್ಪರ್ಧೆಯಲ್ಲಿ ಬಂಗಾರ ಗೆದ್ದು ಬೀಗಿದ ಅಥಣಿಯ ಕಿಲಾರಿ ಎತ್ತುಗಳು
⦁ ಕಿಲಾರಿ ಜೋಡೆತ್ತು ಆಯ್ಕೆ ನಿರ್ಣಾಯಕರಿಗೇ ಸವಾಲು
⦁ ಕತ್ನಳ್ಳಿ ಜಾತ್ರೇಲಿ ತದ್ರೂಪಿ ಜೋಡೆತ್ತುಗಳಿಗೆ ಸಿಗುತ್ತೆ ಚಿನ್ನ
ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್ ವಿಜಯಪುರ
ವಿಜಯಪುರ(ಏ.09): ಕೃಷಿ ಪ್ರಧಾನ ದೇಶ ಭಾರತ ಬೆನ್ನೆಲುಬು ರೈತನಾದ್ರೆ ರೈತನ(Farmer) ಬೆನ್ನೆಲುವು ಜೋಡೆತ್ತುಗಳು. ಟ್ರಾಕ್ಟರ್ ಸೇರಿ ಹೊಸ ಹೊಸ ತಂತ್ರಜ್ಞಾನ ಆವಿಷ್ಕಾರವಾದಂತೆಲ್ಲ ಜೋಡೆತ್ತುಗಳೇ ಮರೆಯಾಗ್ತಿವೆ. ಆದ್ರೆ ಉತ್ತರ ಕರ್ನಾಟಕ(North Karnataka) ಭಾಗದಲ್ಲಿ ಈಗಲು ಜೋಡೆತ್ತುಗಳಿಗೆ ಪ್ರಾಮುಖ್ಯತೆ ಇದೆ. ಈಗ ಗುಮ್ಮಟನಗರಿ ವಿಜಯಪುರ(Vijayapura) ಜಿಲ್ಲೆಯಲ್ಲಿ ಕಿಲಾರಿ ಜೋಡೆತ್ತುಗಳು ರೈತನಿಗೆ 52 ಸಾವಿರ ಮೌಲ್ಯದ ಚಿನ್ನವನ್ನ ಗೆದ್ದು ಕೊಟ್ಟಿವೆ. ಬಂಗಾರ ಗೆದ್ದ ಎತ್ತುಗಳನ್ನ ಈಗ "ಭಲೇ ಬಸವ" ಅಂತ ಕರೆಯಲಾಗ್ತಿದೆ..!
ಕತ್ನಳ್ಳಿ ಜಾತ್ರೆಯಲ್ಲಿ ಚಿನ್ನ ಗೆದ್ದ ಕಿಲಾರಿ ಜೋಡೆತ್ತು..!
ಪ್ರತಿ ವರ್ಷ ಕತ್ನಳ್ಳಿ ಜಾತ್ರೆಯಲ್ಲಿ ಹಲವು ಸ್ಪರ್ಧೆಗಳು ನಡೆಯುತ್ವೆ. ಆದ್ರೆ 2 ವರ್ಷಗಳಿಂದ ಕೊರೋನಾ(Coronavirus) ಹೆಮ್ಮಾರಿಯಿಂದಾಗಿ ಜಾತ್ರೆಯನ್ನ ಸಿಂಪಲ್ಲಾಗಿಯೇ ಆಚರಣೆ ಮಾಡಲಾಗಿತ್ತು. ಆದ್ರೆ ಈ ವರ್ಷ ಅದ್ದೂರಿಯಾಗಿ ಜಾತ್ರೆಯನ್ನ ನಡೆಸಲಾಗಿದೆ. 5 ದಿನಗಳ ಕಾಲ ನಡೆದ ಜಾತ್ರೆಯಲ್ಲಿ ಪ್ರತಿನಿತ್ಯ ಒಂದಿಲ್ಲೊಂದು ಮನರಂಜನಾ ಸ್ಪರ್ಧೆ, ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗಿತ್ತು. ಹಾಗೆಯೇ ರೈತರು ಸಾಕಿದ ಜೋಡೆತ್ತುಗಳ ಪ್ರದರ್ಶನವನ್ನು ನಡೆಸಲಾಯಿತು. ಅವಳಿ ಜವಳಿಯಂತೆ ಕಾಣುವ ಜೋಡೆತ್ತುಗಳನ್ನ ಆಯ್ಕೆ ಮಾಡಿ ಬಹುಮಾನಗಳನ್ನ ನೀಡಲಾಯಿತು. ಅದ್ರಲ್ಲಿ ಸೇಮ್-ಟು-ಸೇಮ್ ಎನ್ನುವಂತಿದ್ದ ಬೆಳಗಾವಿ(Belagavi) ಜಿಲ್ಲೆಯ ಅಥಣಿ ತಾಲೂಕಿನ ಕೋಳಿಗುಡ್ಡ ಗ್ರಾಮದ ಯಲ್ಲಪ್ಪ ನಿಂಗಪ್ಪ ನಾಯಕ್ ರೈತನ ಜೋಡೆತ್ತುಗಳು ಪ್ರಥಮ ಬಹುಮಾನವಾಗಿ ಬರೊಬ್ಬರಿ 10 ಗ್ರಾಂ ಚಿನ್ನವನ್ನ ಗೆದ್ದಿವೆ.
ಪಂಚನದಿಗಳ ಬೀಡು ವಿಜಯಪುರದಲ್ಲಿ ನೀರಿಗಾಗಿ ಶುರುವಾಗಿದೆ ರೈತರ ಪರದಾಟ.!
ಇನ್ನು ದ್ವೀತಿಯ ಬಹುಮಾನವಾಗಿ ವಿಜಯಪುರ ತಾಲೂಕಿನ ಉತ್ನಾಳ ಗ್ರಾಮದ ಶಿವಪ್ಪ ಹಿಪ್ಪರಗಿಯವರ ಜೋಡೆತ್ತುಗಳು 15 ಸಾವಿರ ನಗದು ಗೆದ್ದುಬೀಗಿವೆ. ಉಕ್ಕಲಿ ಗ್ರಾಮದ ಮೌಲಾಸಾಬ್ ಹುಸೇನ್ ಸಾಬ್ ಕರೋಕೆ ಎಂಬುವರ ಜೋಡೆತ್ತುಗಳಿಗೆ ಸಮಾಧಾನಕರ ಬಹುಮಾನ ನೀಡಲಾಯಿತು. ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಹಾಗೂ ವಿಧಾನ ಪರಿಷತ್ ಸದಸ್ಯ ಸುನೀಲ್‌ಗೌಡ ಪಾಟೀಲ್ ಚಿನ್ನ ಗೆದ್ದ ಬಂಗಾರಂದತ ಜೋಡೆತ್ತುಗಳ ಮಾಲೀಕನಿಗೆ ಅಭಿನಂದಿಸಿದ್ದಾರೆ..
ಹೊರ ಜಿಲ್ಲೆಗಳಿಂದಲು ಬರುತ್ವೆ ಜೋಡೆತ್ತುಗಳು..!
ಇನ್ನು ಪ್ರತಿವರ್ಷ ನಡೆಯೋ ಕತ್ನಳ್ಳಿ ಜಾತ್ರೆಯಲ್ಲಿ ಈ ಕಿಲಾರಿ ಜೋಡೆತ್ತುಗಳ(Kilari Oxen) ಸ್ಪರ್ಧೆಯನ್ನ ಹಮ್ಮಿಕೊಳ್ಳೊದು ವಾಡಿಕೆ. ಈ ಸ್ಪರ್ಧೆಯಲ್ಲಿ ಬೆಳಗಾವಿ, ಬಾಗಲಕೋಟೆ, ಕಲ್ಬುರ್ಗಿ, ಯಾದಗಿರಿ, ಕೊಪ್ಪಳ ಸೇರಿದಂತೆ ನಾನಾ ಜಿಲ್ಲೆಗಳಿಂದ ಜೋಡೆತ್ತುಗಳು ಪಾಲ್ಗೊಂಡಿರುತ್ತವೆ. 50 ಜೋಡಿಗಳ ವರೆಗೆ ಇಲ್ಲಿ ಕಿಲಾರಿ ಜೋಡೆತ್ತುಗಳನ್ನ ರೈತರು ಕರೆದುಕೊಂಡು ಬರೋದುಂಟು. ಪಾಲ್ಗೊಂಡ ಜೋಡೆತ್ತುಗಳಲ್ಲಿ ಮೂರು ಜೋಡಿಗಳನ್ನ ಪ್ರಥಮ, ದ್ವೀತಿಯ ಹಾಗೂ ತೃತೀಯ ಅಂತಾ ಆಯ್ಕೆ ಮಾಡಲಾಗುತ್ತೆ.. ನೋಡಲು ಒಂದಕ್ಕೊಂದು ತದ್ರೂಪ ಎನ್ನುವಂತ ಜೋಡಿಗಳನ್ನ ಇಲ್ಲಿ ಆಯ್ಕೆ ಮಾಡಿ ಬಹುಮಾನ ಕೊಡಲಾಗುತ್ತೆ. ಪ್ರಥಮ ಬಹುಮಾನ 1 ತೊಲೆ (10 ಗ್ರಾಂ) ಎರಡನೇ ಬಹುಮಾನ 15 ಸಾವಿರ ನಗದು, ಸಮಾಧಾನಕರವಾಗಿ ಮೂರನೇ ಬಹುಮಾನ ನೀಡಲಾಗುತ್ತೆ.
Vijayapura ಕೆಂಡ ಹಾಯ್ದ ನಾಲ್ಕು ರಾಜ್ಯಗಳ 3 ಸಾವಿರ ಭಕ್ತರು!
ಕಿಲಾರಿ ಜೋಡೆತ್ತುಗಳ ಆಯ್ಕೆ ಅಷ್ಟು ಸುಲಭವಲ್ಲ..!
ಸ್ಪರ್ಧೆಯಲ್ಲಿ ಪಾಲ್ಗೊಂಡ ಜೋಡೆತ್ತುಗಳಿಗೆಲ್ಲ ಬಹುಮಾನ ಸಿಗೊಲ್ಲ. ಎಷ್ಟೇ ಜೋಡೆತ್ತುಗಳು ಸ್ಪರ್ಧೆಯಲ್ಲಿ ಪಾಲ್ಗೊಂಡರು ಮೂರೇ ಜೋಡಿಗಳನ್ನ ಇಲ್ಲಿ ಆಯ್ಕೆ ಮಾಡಲಾಗುತ್ತೆ. ಹಾಗಂತ ಮೂರು ಜೋಡೆತ್ತು ಆಯ್ಕೆ ಮಾಡೋದು ಅಷ್ಟೊಂದು ಸುಲಭದ ಕೆಲಸವಲ್ಲ. ಸ್ಪರ್ಧೆಯ ನಿರ್ಣಾಯಕರಿಗೂ ಜೋಡೆತ್ತುಗಳ ಆಯ್ಕೆ ಒಂದು ಸವಾಲೆ ಆಗಿತ್ತೆ. ತದ್ರೂಪಿಯಂತೆ ಕಾಣುವ ಜೋಡಿ ಎತ್ತುಗಳನ್ನ ಆಯ್ಕೆ ಮಾಡಬೇಕಾಗುತ್ತೆ ಎನ್ನುತ್ತಾರೆ ಜಾತ್ರಾ ಕಮೀಟಿಯ ಮುಖಂಡರು ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ.
ನಿರ್ಣಾಯಕರಿಗು ಜೋಡೆತ್ತುಗಳ ಆಯ್ಕೆ ಸವಾಲು..!
ತದ್ರೂಪಿಯಂತೆ ಕಾಣುವ ಜೋಡಿ ಎತ್ತುಗಳನ್ನ ಆಯ್ಕೆ ಮಾಡೋದು ಇಲ್ಲಿ ನಿರ್ಣಾಯಕರಿಗು ಸವಾಲು ಆಗಿರುತ್ತೆ. ನೋಡಿದ ತಕ್ಷಣವೇ ಇದೆ ಜೋಡೆ ಬೆಸ್ಟ್ ಅನ್ನೋಕೆ ಆಗೊದಿಲ್ಲ. ನೋಡುವ ಎಲ್ಲ ನೋಟಗಳಲ್ಲು ಆ ಜೋಡೆತ್ತುಗಳು ತದ್ರೂಪಿಯಾಗಿರಬೇಕು. ಎತ್ತುಗಳ ಬಣ್ಣ, ಕೊಂಬು, ಕಾಲುಗಳು, ಕುತ್ತಿಗೆಯ ಹೈಟ್ ಎಲ್ಲವನ್ನ ಇಲ್ಲಿ ನಿರ್ಣಾಯಕರು ಗಣನೆಗೆ ತೆಗೆದುಕೊಳ್ತಾರೆ. ಒಂದರ್ಥದಲ್ಲಿ ಥೇಟ್ ಅವಳಿ-ಜವಳಿಯಂತೆ ಇಲ್ಲಿ ಜೋಡೆತ್ತು ಕಾಣಬೇಕು. ಒಂದೊಂದು ಸಾರಿ ಜೋಡೆತ್ತುಗಳ ನಿರ್ಧಾರ ಮಾಡೋಕೆ ಕಷ್ಟವಾದಲ್ಲಿ, ಅವುಗಳ ಮೇಲಿರುವ ಸುಳಿಗಳ ಆಧಾರದ ಮೇಲು ರಿಸಲ್ಟ್ ಪೈನಲ್ ಮಾಡಲಾಗುತ್ತೆ. ಆದ್ರೆ ಕಿಲಾರಿ ಜೋಡೆತ್ತುಗಳ ಆಯ್ಕೆ ಅನ್ನೋದು ನಿರ್ಣಾಯಕರಿಗೆ ಇಲ್ಲಿ ಸವಾಲಾಗಿರೋದಂತು ಸುಳ್ಳಲ್ಲ..!