ಚಕ್ಕಡಿ ಮಗುಚಿಬಿದ್ದು ಎತ್ತು ಸಾವು| ಹಾವೇರಿ ತಾಲೂಕಿನ ಕೊಳೂರು ಗ್ರಾಮದ ರೈಲ್ವೇ ಬ್ರಿಡ್ಜ್ ಗೇಟ್ ನಂ. 241 ಬಳಿ ನಡೆದ ಘಟನೆ| ಊರಿನಿಂದ ತನ್ನ ಹೊಲದ ಕಡೆ ಹೊರಟಿದ್ದಾಗ ನಡೆದ ದುರ್ಘಟನೆ| ರೈಲ್ವೆ ಅಂಡರ್ ಬ್ರಿಡ್ಜ್ ಕಾಮಗಾರಿಯಿಂದಾಗಿ ಸಂಭವಿಸಿದ ಅನಾಹುತ|
ಹಾವೇರಿ(ಅ.23): ರೈಲ್ವೇ ಕೆಳ ಸೇತುವೆಯಲ್ಲಿ ಹೋಗುವ ಸಂದರ್ಭದಲ್ಲಿ ಚಕ್ಕಡಿಯೊಂದು ಮಗುಚಿಬಿದ್ದ ಪರಿಣಾಮ ಒಂದು ಎತ್ತು ಸಾವನ್ನಪ್ಪಿ, ಮತ್ತೊಂದು ಎತ್ತು ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಕೊಳೂರು ಗ್ರಾಮದ ರೈಲ್ವೇ ಬ್ರಿಡ್ಜ್ ಗೇಟ್ ನಂ. 241 ಬಳಿ ನಿನ್ನೆ ರಾತ್ರಿ(ಗುರುವಾರ) ನಡೆದಿದೆ.
ನಿನ್ನೆ ಸುರಿದ ಭಾರೀ ಮಳೆಗೆ ರೈಲ್ವೇ ಕೆಳ ಸೇತುವೆ ಕೆರೆಯಂತಾಗಿತ್ತು. ಈ ವೇಳೆ ಬ್ರಿಡ್ಜ್ ದಾಟಿ ಹೋಗುವ ವೇಳೆ ಚಕ್ಕಡಿ ಮಗುಚಿಬಿದ್ದಿದೆ. ಪರಿಣಾಮ ಒಂದು ಎತ್ತು ಸ್ಥಳದಲ್ಲೇ ಸಾವನ್ನಪ್ಪಿದರೆ, ಇನ್ನೊಂದು ಎತ್ತಿನ ಪರಿಸ್ಥಿತಿ ಗಂಭೀರವಾಗಿದೆ. ಇನ್ನು ಗೌಸ್‌ಮುದ್ದಿನ ವಸೀರ್‌ಬಾಬಾ ಸವಣೂರ ಎಂಬ ರೈತ ಕೂಡ ಅಸ್ವಸ್ಥನಾಗಿದ್ದಾನೆ ಎಂದು ತಿಳಿದು ಬಂದಿದೆ.
undefined
ಮೀಸಲಾತಿ ಯಾರಪ್ಪನ ಮನೆ ಆಸ್ತಿಯಲ್ಲ: ಬಿಎಸ್‌ವೈ ಸರ್ಕಾರಕ್ಕೆ ಪ್ರಸನ್ನಾನಂದ ಶ್ರೀ ಎಚ್ಚರಿಕೆ
ರೈಲ್ವೆ ಅಂಡರ್ ಬ್ರಿಡ್ಜ್ ಕಾಮಗಾರಿಯಿಂದಾಗಿ ಅನಾಹುತವೊಂದು ಸಂಭವಿಸಿದೆ. ಅಂಡರ್ ಬ್ರಿಡ್ಜ್‌ನಲ್ಲಿ ನೀರು ಸರಾಗವಾಗಿ ಹರಿಯುವ ಹಾಗೆ ವ್ಯವಸ್ಥೆ ಮಾಡದೇ ಇರುವುದೇ ದುರಂತಕ್ಕೆ ಕಾರಣವಾಗಿದೆ. ಕಳೆದ ಒಂದು ವಾರದಿಂದ ನಮ್ಮ ಪರಿಸ್ಥಿತಿ ಹೇಳದಂತಾಗಿದೆ. ಕಾಮಗಾರಿ ಅರ್ಧ ಮಾಡಿರುವುದರಿಂದಲೇ ಇಂತಹ ಅನಾಹುತಗಳು ಜರುಗುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.