ಮಾದನಾಯಕನಹಳ್ಳಿ ಪೊಲೀಸ್ ಠಾಣೆ ಆವರಣದಲ್ಲೇ ಲಾಕ್‌ಡೌನ್ ವೇಳೆ ಸೀಜ್ ಮಾಡಿದ್ದ 500ಕ್ಕೂ ಅಧಿಕ ವಾಹನಗಳು ಇಂದಿಗೂ ಅಲ್ಲೇ ಬಿದ್ದಿವೆ| ನಾನಾ ಕಾರಣಗಳಿಂದ ಸೀಜ್ ಮಾಡಿದ್ದ ವಾಹನಗಳು ನಾಲ್ಕೈದು ತಿಂಗಳು ಕಳೆದರೂ, ಠಾಣೆಯಲ್ಲೇ ಉಳಿದಿವೆ|
ಬೆಂಗಳೂರು(ಅ.10): ಮಹಾಮಾರಿ ಕೊರೋನಾ ಸೋಂಕು ಹಬ್ಬುವುದನ್ನು ತಡೆಗಟ್ಟುವ ಸಲುವಾಗಿ ಜಾರಿಗೊಳಿಸಿದ್ದ ಲಾಕ್‌ಡೌನ್ ಅವಧಿಯಲ್ಲಿ ನಿಯಮ ಮೀರಿ ರಸ್ತೆಗೆ ಇಳಿದಿದ್ದ ಸಾವಿರಾರು ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಅನೇಕರು ದಂಡ ಕಟ್ಟಿ, ವಶಕ್ಕೆ ಪಡೆದ ವಾಹನಗಳನ್ನು ಬಿಡಿಸಿಕೊಂಡು ಹೋಗಿದ್ದರು. ಆದರೆ, ಲಾಕ್‌ಡೌನ್ ವೇಳೆ ಸೀಜ್ ಮಾಡಿದ್ದ ನೂರಾರು ವಾಹನಗಳು ಇಂದಿಗೂ ಠಾಣೆಗಳಲ್ಲೇ ಧೂಳು ತಿನ್ನುತ್ತಿದ್ದು, ಹೇಳುವವರು ಕೇಳುವವರು ಇಲ್ಲದಂತಾಗಿದೆ.
ಹೌದು, ಇಲ್ಲಿನ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ಆವರಣದಲ್ಲೇ ಲಾಕ್‌ಡೌನ್ ವೇಳೆ ಸೀಜ್ ಮಾಡಿದ್ದ 500ಕ್ಕೂ ಅಧಿಕ ವಾಹನಗಳು ಇಂದಿಗೂ ಅಲ್ಲೇ ಬಿದ್ದಿವೆ. ಲಾಕ್‌ಡೌನ್ ಜಾರಿಯಾಗುತ್ತಿದ್ದಂತೆ ಬಹುತೇಕರು ತಮ್ಮ ಊರುಗಳತ್ತ ಮುಖ ಮಾಡಿದ್ದಾರೆ. ಅನೇಕರು ಕೆಲಸ ಕಳೆದುಕೊಂಡು ಜೀವನ ನಡೆಸುವುದೇ ಕಷ್ಟವಾಗಿದೆ. ಇನ್ನೂ ಹಲವರು ಸೂಕ್ತ ದಾಖಲೆಗಳಲ್ಲಿದ ಕಾರಣ ಠಾಣೆಗಳತ್ತ ಮುಖ ಮಾಡಿಲ್ಲ. ಹೀಗೆ ನಾನಾ ಕಾರಣಗಳಿಂದ ಸೀಜ್ ಮಾಡಿದ್ದ ವಾಹನಗಳು ನಾಲ್ಕೈದು ತಿಂಗಳು ಕಳೆದರೂ, ಠಾಣೆಯಲ್ಲೇ ಉಳಿದಿವೆ ಎನ್ನುತ್ತಾರೆ ಅಧಿಕಾರಿಗಳು.
undefined
ಲಾಕ್‌ಡೌನ್ ಸಡಿಲಿಕೆ: ಬೈಕ್ ಸೀಜ್ ಮಾಡಲು ಪೊಲೀಸರಿಗೆ ಟಾರ್ಗೆಟ್!
ಹೀಗೆ ವಶಕ್ಕೆ ಪಡೆದ ವಾಹನಗಳನ್ನು ಪುರಸಭೆ ಆವರಣದಲ್ಲೂ ನಿಲ್ಲಿಸಲಾಗಿದ್ದು, ಇದರಿಂದ ಕಚೇರಿಗೆ ಆಗಮಿಸುವ ಜನರಿಗೂ ಕಿರಿಕಿರಿ ಉಂಟಾಗುತ್ತಿದೆ. ವಾಹನಗಳನ್ನು ನಿಲುಗಡೆ ಮಾಡಲು ಸೂಕ್ತ ಜಾಗವಿಲ್ಲದೇ ರಸ್ತೆ ಬದಿಯಲ್ಲೇ ಪಾರ್ಕಿಂಗ್ ಮಾಡುತ್ತಿದ್ದಾರೆ.