
ಸಕಲೇಶಪುರ(ಜೂ.11): ರಾತ್ರಿ ಅಂಗಡಿ ಮುಚ್ಚಿ ಮುಂಜಾನೆ ಅಂಗಡಿ ಬಾಗಿಲನ್ನು ತೆಗೆಯಲು ಹೋದಾಗ ಅಂಗಡಿಯ ಮುಂಭಾಗ ಕಾವಲುಗಾರನಂತೆ ಕುಳಿತಿದ್ದ ಗೂಬೆಯೊಂದನ್ನು ಅರಣ್ಯ ಇಲಾಖೆಗೆ ಒಪ್ಪಿಸಿರುವ ಘಟನೆ ಪಟ್ಟಣದಲ್ಲಿ ಬುಧವಾರ ನಡೆದಿದೆ.
ಪಟ್ಟಣದ ಜನನಿಬಿಡ ಬಿ.ಎಂ, ರಸ್ತೆಯಲ್ಲಿರುವ ನ್ಯಾಷನಲ್ ಟ್ರೇಡರ್ಸ್ ಮಾಲೀಕ ಜಮೀಲ್ ಅಹಮ್ಮದ್ ತಮ್ಮ ಅಂಗಡಿಯನ್ನು ತೆರೆಯಲು ಮುಂಜಾನೆ ಹೋದಾಗ ಗೂಬೆಯೊಂದು ಕುಳಿತಿರುವುದು ನೋಡಿ ಚಕಿತಗೊಂಡಿದ್ದಾರೆ.
ಕೇವಲ 100 ರು. ಸಬ್ಸಿಡಿ ನೀಡಲು ರೈತರೇನು ಭಿಕ್ಷುಕರೇ: ಮಾಜಿ ಸಚಿವ ರೇವಣ್ಣ
ತಕ್ಷಣ ಸಮಾಜ ಸೇವಕರಾದ ಅನೀಫ್ ಹಾಗೂ ಅಕ್ಬರ್‌ರವರ ನೆರವಿನಿಂದ ಗೂಬೆಯನ್ನು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ಗೂಬೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯಿದ್ದು ಗೂಬೆ ಮಾರಾಟ ಮಾಡುವವರ ಒಂದು ಕಳ್ಳ ಗ್ಯಾಂಗ್ ಕಾರ್ಯನಿರತವಾಗಿದೆ ಆದರೂ ಸಹ ಇಂತಹವರಿಗೆ ಹಣಕ್ಕಾಗಿ ಗೂಬೆಯನ್ನು ನೀಡದೆ ಅರಣ್ಯ ಇಲಾಖೆಗೆ ಒಪ್ಪಿಸಿರುವುದು ಶ್ಲಾಘನೀಯವಾಗಿದೆ.
"