ರಾಜೀವ್ ಗಾಂಧಿ ವಿವಿ ಎಡವಟ್ಟು : ವಿದ್ಯಾರ್ಥಿಗಳು ಕಂಗಾಲು

By Web DeskFirst Published Aug 29, 2018, 5:22 PM IST
Highlights

ಮೊದಲು ಅಡ್ಮಿಷನ್ ನಡೆಸಿ ಒಂದು  ತಿಂಗಳ ನಂತರ ವಿದ್ಯಾರ್ಥಿಗಳ ಆಯ್ಕೆಯನ್ನು  ರದ್ದು ಮಾಡಲಾಗಿದೆ. ಇದರಿಂದ ಅಡ್ಮಿಷನ್ ಆದರೂ ಮೈಸೂರು ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಹೊರಬಿದ್ದಿದ್ದಾರೆ.

ಮೈಸೂರು [ಆ.29]: ರಾಜೀವ್ ಗಾಂಧಿ ವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯದ ಎಡವಟ್ಟಿನಿಂದಾಗಿ ಮೈಸೂರಿನ ಮೆಡಿಕಲ್ ಕಾಲೇಜಿನ ಹಲವು ಕೋರ್ಸ್ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ.

ಮೊದಲು ಅಡ್ಮಿಷನ್ ನಡೆಸಿ  ಒಂದು  ತಿಂಗಳ ನಂತರ ವಿದ್ಯಾರ್ಥಿಗಳ ಆಯ್ಕೆಯನ್ನು  ರದ್ದು ಮಾಡಲಾಗಿದೆ. ಇದರಿಂದ ಅಡ್ಮಿಷನ್ ಆದರೂ ಮೈಸೂರು ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಹೊರ ಬಿದ್ದಿದ್ದಾರೆ. ವಿವಿಯು ಆರಂಭದಲ್ಲಿ ಅಡ್ಮಿಷನ್ ಮಾಡಿಸಿಕೊಂಡು  ನಂತರ ಆಯ್ಕೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ವಹಿಸಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆ ಮಾಡಿದೆ.

ಕಾಲೇಜು ಆಡಳಿತ ಮಂಡಳಿಯು ಬಿಎಸ್'ಸಿಯ ಎಂ.ಎಲ್.ಟಿ, ಇಮೇಜಿಂಗ್ ಟೆಕ್ನಾಲಜಿ, ರೆಸ್ಪಿರೇಟರಿ ಟೆಕ್ನಾಲಜಿ ಸೇರಿದಂತೆ 11 ಕೋರ್ಸಿನ 55 ವಿದ್ಯಾರ್ಥಿಗಳ ಅಡ್ಮಿಶನ್ ರದ್ದುಪಡಿಸಿರುವುದರಿಂದ ವಿದ್ಯಾರ್ಥಿಗಳು ಬೀದಿಗೆ ಬಿದ್ದಿದ್ದಾರೆ.

ಬೆಂಗಳೂರು ಮೆಡಿಕಲ್ ಕಾಲೇಜು ಹೊರತುಪಡಿಸಿ ರಾಜ್ಯದ ಎಲ್ಲಾ ಮೆಡಿಕಲ್ ಕಾಲೇಜುಗಳಲ್ಲಿ ಈ ತೊಂದರೆಯುಂಟಾಗಿದೆ. ಅವ್ಯಸ್ಥೆಯ ಬಗ್ಗೆ ಕಾಲೇಜು ನಿರ್ದೇಶಕರನ್ನು ಪ್ರಶ್ನಿಸಿದರೆ, ಇದೇ ಮೊದಯ ಬಾರಿಗೆ ಈ ರೀತಿ ಆಗಿದೆ. ನಮ್ಮ ಹಾಗೂ ವಿ.ವಿ.ನಡುವಿನ ಸಂವಹನ ಕೊರತೆಯೇ ಇದಕ್ಕೆಲ್ಲ ಕಾರಣವಾಗಿದೆ. ಶುಲ್ಕದ ಹಣವನ್ನು ವಾಪಸ್ ನೀಡುತ್ತಿದ್ದೇವೆ. ವಿದ್ಯಾರ್ಥಿಗಳು ಕೆಇಟಿಯಿಂದಲೇ ಆಯ್ಕೆಯಾಗಿ ಬರಲಿ ಎಂದು ಉಡಾಫೆಯ ಉತ್ತರ ನೀಡಿದ್ದಾರೆ.

click me!