ಸಾರಿಗೆ ನೌಕರರ ಮುಷ್ಕರ ಹತ್ತಿಕ್ಕಲು ಪೊಲೀಸರ ಯತ್ನ| ಪೊಲೀಸರ ನಡೆ ಪ್ರಶ್ನಿಸಿ ಸಾರಿಗೆ ನೌಕರರ ಪ್ರತಿಭಟನೆ| ಕೆಎಸ್ಆರ್ಟಿಸಿ ಸಿಬ್ಬಂದಿ ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ|
ಚಿಕ್ಕಮಗಳೂರು(ಡಿ.12): ಸಾರಿಗೆ ಸಚಿವ ಒಬ್ಬನೂ ಉದ್ಧಾರ ಆಗಿಲ್ಲ. ಪ್ರತಿಯೊಬ್ಬ ಸಾರಿಗೆ ಸಚಿವನೂ ಮೂಲೆ ಗುಂಪಾಗಿದ್ದಾನೆ. ಇವತ್ತು ಲಕ್ಷ್ಮಣ ಸವದಿನೂ ಮೂಲೆ ಗುಂಪು ಆಗುತ್ತಾನೆ. ಫ್ರೆಂಟ್ ಲೈನ್‌ನಲ್ಲಿದ್ದ ಆರ್. ಅಶೋಕ್ ಈಗ ಮೂಲೆ ಗುಂಪಾಗಿದ್ದಾನೆ ಎಂದು ಜರಿಯುವ ಮೂಲಕ ಸಾರಿಗೆ ನೌಕರರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಅಡುಗೆ ಮಾಡಲು ಬಿಟ್ಟಿಲ್ಲ ಎಂದು ಕಿಡಿ ಕಾರಿರುವ ಸಾರಿಗೆ ನೌಕರರು ಪಿ.ಜಿ.ಆರ್. ಸಿಂದ್ಯಾ ಸೇರಿದಂತೆ ಎಲ್ಲರೂ ಮೂಲೆ ಗುಂಪಾಗಿದ್ದಾರೆ. ಸಗೀರ್ ಅಹಮ್ಮದ್ ಹೇಳ ಹೆಸರಿಲ್ಲದಂತಾಗಿದ್ದಾರೆ. ಎಷ್ಟೋ ಕಾರ್ಮಿಕ ಸಚಿವರು ವಾಶ್ ಔಟ್ ಆಗಿದ್ದಾರೆ ಎಂದು ಕಿಡಿಕಾರಿದ್ದಾರೆ.
undefined
ಸವದಿಯವರು ಹೋರಾಟದ ದಿಕ್ಕು ತಪ್ಪಿಸುವ ಕೆಲಸ ಮಾಡ್ತಿದ್ದಾರೆ: ಕೋಡಿಹಳ್ಳಿ ಆಕ್ರೋಶ
ಬಸ್ ನಿಲ್ದಾಣದ ಒಳಗೆ ಸಾರಿಗೆ ನೌಕರರು ಉಪಹಾರ ತಯಾರಿಸಲು ಮುಂದಾದ ವೇಳೆ ಪೊಲೀಸರು ಅಡ್ಡಿ ಪಡಿಸಿದ್ದಾರೆ. ಹೀಗಾಗಿ ಕೆಎಸ್ಆರ್ಟಿಸಿ ಸಿಬ್ಬಂದಿ ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ. ಬಸ್ ನಿಲ್ದಾಣದ ಒಳಗಡೆ ಅಡುಗೆ ಮಾಡುವಂತಿಲ್ಲ. ಬೇಕಿದ್ರೆ ಹೊರಗಡೆಯಿಂದ ತಂದು, ಇಲ್ಲಿ ತಿನ್ನಬಹುದು ಎಂದು ಹೇಳುವ ಮೂಲಕ ಪೊಲೀಸರು ಸಾರಿಗೆ ನೌಕರರ ಮುಷ್ಕರ ಹತ್ತಿಕ್ಕಲು ಯತ್ನ ನಡೆಸಿದ್ದಾರೆ. ಹೀಗಾಗಿ ಪೊಲೀಸರ ನಡೆ ಪ್ರಶ್ನಿಸಿ ಬಸ್ ನಿಲ್ದಾಣದ ಎದುರು ಸಾರಿಗೆ ನೌಕರರು ಪ್ರತಿಭಟನೆ ನಡೆಸಿದ್ದಾರೆ.