Chikkamagaluru: ಹಸುಗಳ ಸಾವಿಗೆ ಕಾರಣವಾಯ್ತಾ ಜೆಡಿಎಸ್ ಪಕ್ಷದ ಪಂಚರತ್ನ ಯಾತ್ರೆ

By Suvarna News  |  First Published Feb 28, 2023, 5:14 PM IST

ಮೂರು ದಿನದ ಪಂಚರತ್ನ ಯಾತ್ರೆ ಎಫೆಕ್ಟ್ ಎರಡು ಹಸುಗಳ ದಾರುಣ ಸಾವು. ಪಂಚರತ್ನ ಯಾತ್ರೆಯಲ್ಲಿ ಉಳಿದ ಊಟ, ಪ್ಲಾಸ್ಟಿಕ್ ನಿಂದ ಹಸುಗಳು ಸಾವು . ಶೃಂಗೇರಿ ತಾಲೂಕಿನ ವೈಕುಂಠಪುರ ಗ್ರಾಮದಲ್ಲಿ ಘಟನೆ. ಕುಮಾರಸ್ವಾಮಿಯ ಪಂಚರತ್ನ ಯಾತ್ರೆಯಿಂದ ನಮ್ಮ ಹಸು ಸತ್ತುವಾಗಿದೆ ರೈತರ ಆರೋಪ 


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಮಗಳೂರು (ಫೆ.28): ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪಂಚರತ್ನ ಯಾತ್ರೆಯ ಬಳಿಕ ಉಳಿದಿದ್ದ ಅನ್ನವನ್ನು ತಿಂದು ಎರಡು ಹಸುಗಳು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ವೈಕುಂಠಪುರ ಗ್ರಾಮದಲ್ಲಿ ನಡೆದಿದೆ. ಯಾತ್ರೆ ಮುಗಿದ ಎರಡು ದಿನಗಳ ಬಳಿಕ ನಿನ್ನೆ ಹಾಗೂ ಇಂದು ಎರಡು ಹಸುಗಳು ಸಾವನ್ನಪ್ಪಿವೆ. ಕುಮಾರಸ್ವಾಮಿ ಬರುತ್ತಾರೆ ಎಂದು ಶೃಂಗೇರಿ ತಾಲೂಕಿನ ವೈಕುಂಠಪುರ ಗ್ರಾಮದಲ್ಲಿ ಗ್ರಾಮ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದರು. ಅಂದು 2000 ಜನರಿಗೆ ಅಡುಗೆ ಮಾಡಿಸಿದ್ದರು. ಆದರೆ ಊಟ ಮಾಡಿದ್ದು 1000 ಜನ ಮಾತ್ರ. ಉಳಿದ ಆಹಾರ ಹಾಗೂ ಪ್ಲಾಸ್ಟಿಕ್ ಗಳನ್ನ ಅರಣ್ಯ ಪ್ರದೇಶದಲ್ಲಿ ಎಸೆದಿದ್ದರು. ಅದನ್ನ ತಿಂದ ಎರಡು ಹಸುಗಳು ಸಾವನ್ನಪ್ಪಿವೆ. ಬೆಳಗ್ಗೆ ಮೇವಿಗೆ ಹೋಗಿದ್ದ ರಾಸುಗಳು ಸಂಜೆ ಮನೆಗೆ ಬಂದ ಬಳಿಕ ಹೊಟ್ಟೆ ಉಬ್ಬರಿಸಿಕೊಂಡು ಬೆಳಗಾಗುವುದರಲ್ಲಿ ಎರಡು ಹಸುಗಳು ಸಾವನ್ನಪ್ಪಿವೆ. 

Tap to resize

Latest Videos

ಶೃಂಗೇರಿ ಕ್ಷೇತ್ರದಲ್ಲಿ ಜೆಡಿಎಸ್‌ ಪರ ಉತ್ತಮ ಅಲೆಯಿದೆ: ಎಚ್‌.ಡಿ.ಕುಮಾರಸ್ವಾಮಿ

ರೈತ ಕುಟುಂಬದ ಕಣ್ಣೀರು: 
ಹೈನುಗಾರಿಕೆಯಿಂದಲೇ ಬದುಕು ಕಟ್ಟಿಕೊಂಡಿದ್ದ ಕುಟುಂಬಗಳು ಹಸುಗಳು ಸಾವನ್ನಪ್ಪಿರುವುದರಿಂದ ಪಂಚರತ್ನ ಯಾತ್ರೆ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ವೈಕುಂಠ ಪುರದಲ್ಲಿ ಗ್ರಾಮ ವಾಸ್ತವ್ಯ ಮಾಡಿದ ಸಂದರ್ಭದಲ್ಲಿ ಬಂದಂತಹ ಕಾರ್ಯಕರ್ತರಿಗೆ ಜನರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಊಟ ಮಾಡಿದ ಜನರು ಕೂಡ ಊಟ ಮಾಡಿದ ಅಡಿಕೆ ತಟ್ಟೆಗಳನ್ನು ಎಲ್ಲೆಂದರಲ್ಲಿ ಬಿಸಾಡಿದ ಪರಿಣಾಮ ಕಸದ ರಾಶಿ ಒಂದೆಡೆಯಾದರೆ ಮತ್ತೊಂದೆಡೆ ಉಳಿದ ಅನ್ನ ಸೇರಿದಂತೆ ಅಡಿಕೆ ಹಾಳೆ ಪ್ಲಾಸ್ಟಿಕ್ ಗಳನ್ನು ತಿಂದಿದ ಪರಿಣಾಮ ಹಸುಗಳು ಮೃತಪಟ್ಟಿವೆ ಎನ್ನುವ ಆರೋಪ ವ್ಯಕ್ತವಾಗಿದೆ.

ಮುಸಲ್ಮಾನರ ತಂಟೆಗೆ ಯಾರು ಬರ್ತಾರೆ ನೋಡೋಣ: ಎಚ್‌.ಡಿ.ಕುಮಾರಸ್ವಾಮಿ

ಶೃಂಗೇರಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿರುವ ಸುಧಾಕರ್ ಶೆಟ್ಟಿ ವಿರುದ್ಧವೂ ಕೂಡ ರೈತ ಕುಟುಂಬ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು ಕಾರ್ಯಕ್ರಮ ಮುಗಿದ ಮೇಲೆ ಖಾಲಿ ಮೈದಾನವನ್ನು ಸ್ವಚ್ಛಗೊಳಿಸುವ ಬದಲು ಹಾಗೆ ತೆರಳಿದ ಪರಿಣಾಮ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿದೆ. ಇದರ ಜೊತೆಗೆ ಬದುಕಿಗೆ ಅನಿವಾರ್ಯವಾಗಿದ್ದ ರಾಸುಗಳು ಸಾವನಪ್ಪಿರುವುದು ಮತ್ತಷ್ಟು  ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಅದಕ್ಕೆ ಜವಾಬ್ದಾರಿ ಯಾರೆಂದು ಜೆಡಿಎಸ್ ಪಕ್ಷದ ವಿರುದ್ಧ ಕಿಡಿಕಾರಿದ್ದಾರೆ.

click me!