Kolar: ಜನಾಂಗದ ಅಭಿವೃದ್ಧಿಗೆ ಸಂಘಟನೆ, ಶಿಕ್ಷಣ ಅಗತ್ಯ: ಶಾಸಕ ನಂಜೇಗೌಡ

By Govindaraj SFirst Published Sep 11, 2022, 11:44 AM IST
Highlights

ಒಂದು ಸಮುದಾಯ ಅಭಿವೃದ್ಧಿಯಾಗಬೇಕಾದರೆ ಸಂಘಟನೆ ಹಾಗೂ ಶಿಕ್ಷಣ ಅತಿ ಮುಖ್ಯವಾಗಿದ್ದು ಎಂದು ಸಾರಿದ್ದ ನಾರಾಯಣ ಗುರುಗಳ ಆದರ್ಶ ಇಂದಿಗೂ ಪ್ರಸ್ತುತ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು. 

ಮಾಲೂರು (ಸೆ.11): ಒಂದು ಸಮುದಾಯ ಅಭಿವೃದ್ಧಿಯಾಗಬೇಕಾದರೆ ಸಂಘಟನೆ ಹಾಗೂ ಶಿಕ್ಷಣ ಅತಿ ಮುಖ್ಯವಾಗಿದ್ದು ಎಂದು ಸಾರಿದ್ದ ನಾರಾಯಣ ಗುರುಗಳ ಆದರ್ಶ ಇಂದಿಗೂ ಪ್ರಸ್ತುತ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು. ಪಟ್ಟಣದ ಮಿನಿ ವಿಧಾನ ಸೌಧ ಮುಂಭಾಗ ತಾಲೂಕು ಈಡಿಗ ಸಮುದಾಯ ಕ್ಷೇಮಾಭಿವೃದ್ಧಿ ಸಂಘವು ಗುರು ನಾರಾಯಣ ಜಯಂತಿ ಆಂಗವಾಗಿ ಹಮ್ಮಿಕೊಂಡಿದ್ದ ಗುರುನಾರಾಯಣ ಸ್ವಾಮೀಜಿಗಳ ಪುಷ್ಪ ಪಲ್ಲಕ್ಕಿಗೆ ಚಾಲನೆ ನೀಡಿ ಮಾತನಾಡಿದ ಅವರು, ಒಂದೇ ಕುಲ ಒಂದೇ ಜನ ಎಂದು ಜೀವನ ಪರ್ಯಾಂತ ಸಾರಿದ ನಾರಾಯಣ ಗುರುಗಳ ತತ್ವಗಳ ಪಾಲನೆ ಇಂದಿನ ಕಾಲಕ್ಕೆ ಅವಶ್ಯವಾಗಿ ಬೇಕಾಗಿದೆ ಎಂದರು.

ಈಡಿಗರ ಸಂಘಕ್ಕೆ ಒಂದು ಎಕರೆ ಭೂಮಿ: ಈಡಿಗ ಸಮುದಾಯವು ರಾಜ್ಯದ ಅಭಿವೃದ್ಧಿಯಲ್ಲಿ ಬಹುಪಾಲು ಹೊಂದಿದೆ. ಈಡಿಗರು ರಾಜ್ಯದಲ್ಲಿ ಕಡಿಮೆ ಸಂಖ್ಯೆಯಾಲಿದ್ದರೂ ದಿವಂಗತ ಮಾಜಿ ಮುಖ್ಯಮಂತ್ರಿ ಎಸ್‌.ಬಂಗಾರಪ್ಪ ತಮ್ಮ ಅಧಿಕಾರಾವಧಿಯಲ್ಲಿ ಶೋಷಿತರ ದನಿಯಾಗಿದ್ದರು ಎಂದು ಸ್ಮರಿಸಿದ ಶಾಸಕರು, ತಾಲೂಕಿನಲ್ಲಿರುವ ಈಡಿಗ ಸಮುದಾಯದ ಅಭಿವೃದ್ಧಿಗಾಗಿ ಪಟ್ಟಣದ ಸಮೀಪ ಒಂದು ಎಕರೆ ಸರ್ಕಾರಿ ಜಮೀನು ನೀಡಲು ಪ್ರಾಮಾಣೀಕ ಪ್ರಯತ್ನ ಮಾಡುವುದಾಗಿ ತಿಳಿಸಿದರು. ಕಾಟಾಚಾರಕ್ಕೆ ಕಚೇರಿಯಲ್ಲಿ ತಾಲೂಕು ಆಡಳಿತ ಏರ್ಪಡಿಸಿದ್ದ ನಾರಾಯಣ ಗುರುಗಳ ಪೂಜಾ ಕಾರ‍್ಯಕ್ರಮವನ್ನು ಈಡಿಗ ಸಮುದಾಯದ ಮುಖಂಡರು ಬಹಿಷ್ಕರಿಸಿ ಹೊರನಡೆದರು.

ಮಳೆಯಿಂದಾಗಿ ಕೋಲಾರ ಜಿಲ್ಲೆಯಲ್ಲಿ ಅವಾಂತರ: ಸಂಕಷ್ಟದಲ್ಲಿ ಅನ್ನದಾತ..!

ಪಟ್ಟಣದ ಪ್ರಮುಖ ಬೀದಿಯಲ್ಲಿ ಸಂಚರಿಸಿದ ನಾರಾಯಣ ಗುರು ಪಲ್ಲಕ್ಕಿಯ ಜತೆಯಲ್ಲಿ ನಿರ್ಮಿಸಲಾಗಿದ್ದ ಪುನೀತ್‌ ರಾಜಕುಮಾರ್‌ ಸೇರಿದಂತೆ ದೊಡ್ಡಮನೆ ಕುಟುಂಬದ ಪಲ್ಲಕ್ಕಿ ಸಹ ಭಾಗವಹಿಸಿತ್ತು. ತಹಸೀಲ್ದಾರ್‌ ಕೆ.ರಮೇಶ್‌, ಕಂದಾಯಾಧಿಕಾರಿ ಶ್ರೀ ಹರಿ ಪ್ರಸಾದ್‌, ಈಡಿಗ ಸಂಘದ ಅಧ್ಯಕ್ಷ ವಾಸುದೇವ ಮೂರ್ತಿ, ,ಅಶ್ವಥ ನಾರಾಯಣ್‌, ಕೆ.ಪಿ.ಸಿ.ಸಿ.ಕಾರ‍್ಯದರ್ಶಿ ಲಕ್ಷ್ಮೇನಾರಾಯಣ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಧುಸೂಧನ್‌ ,ಗೋಪಾಲ್‌ ಮತ್ತಿತರ ಮುಖಂಡರುಗಳಿದ್ದರು.

ರಸ್ತೆ ಅಭಿವೃದ್ಧಿಗೆ 25 ಕೋಟಿ: ತಾಲೂಕಿನಲ್ಲಿ ಹದಗೆಟ್ಟಮುಖ್ಯ ರಸ್ತೆಗಳ ಅಭಿವೃದ್ಧಿಪಡಿಸಲು 25 ಕೋಟಿ ರು.ಗಳು ಬಿಡುಗಡೆಯಾಗಿದ್ದು ಮಾಲೂರು- ಹೊಸಕೋಟೆ ರಸ್ತೆ ಹಾಗೂ ಟೇಕಲ್‌ ಕ್ರಾಸ್‌ನಿಂದ ಗಂಗಾಪುರ ಗೇಟ್‌ವರಿಗೆ, ಕೋಲಾರ ರಸ್ತೆಯನ್ನು ಡಾಂಬರೀಕರಣ ಮಾಡಲಾಗುವುದು ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು. ಪಟ್ಟಣದ ಮಾಲೂರು ಕೋಲಾರ ರಸ್ತೆಯ ಟೇಕಲ್‌ ಕ್ರಾಸ್‌ ಬಳಿ 10 ಕೋಟಿ ರು.ಗಳ ವೆಚ್ಚದಲ್ಲಿ ಟೇಕಲ್‌ ಕ್ರಾಸ್‌ನಿಂದ ಗಂಗಾಪುರ ಗೇಟ್‌ವರೆಗೆ ರಸ್ತೆ ಆಗಲಿಕರಣ ಹಾಗೂ ಡಾಂಬರೀಕರಣಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ರಸ್ತೆ ಕಾಮಗಾರಿಗೆ ಚಾಲನೆ: ತಾಲೂಕಿನಾದ್ಯತ 15 ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಗಳು ಹದಗೆಟ್ಟಿದ್ದು, ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ಮಾಲೂರು ಹೊಸಕೋಟೆ ರಸ್ತೆಯ ಕೆರೆ ಪಕ್ಕದಲ್ಲಿ ಹಾದು ಹೋಗುವ ರಸ್ತೆಯಲ್ಲಿ ಮಳೆಯ ನೀರು ನಿಲ್ಲುವುದರಿಂದ ಸುಮಾರು ಒಂದೂವರೆ ಕಿಮಿ ರಸ್ತೆ ಗುಂಡಿಗಳಾಗಿವೆ. ಹಲವು ಬಾರಿ ಈ ರಸ್ತೆಯಲ್ಲಿ ವಾಹನಗಳು ಅಪಘಾತಕ್ಕೀಡಾಗಿವೆ. ಕೆರೆ ಪಕ್ಕದಲ್ಲಿ ಹಾದು ಹೋಗುವ ರಸ್ತೆಗೆ ಶಾಶ್ವತ ಪರಿಹಾರ ಕಲ್ಪಿಸಲು 2.50 ಕೋಟಿ ರು.ಗಳ ವೆಚ್ಚದಲ್ಲಿ ಕಾಂಕ್ರೀಟ್‌ ರಸ್ತೆ ಕಾಮಗಾರಿಗೆ ಚಾಲನೆ ನೀಡಿರುವುದಾಗಿ ಹೇಳಿದರು.

Heavy Rain: ಕೋಲಾರದಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿರುವ ಮಳೆರಾಯ

ಮಡಿವಾಳ ಗೇಟ್‌ನಿಂದ ಕಟ್ಟಿಗೇನಹಳ್ಳಿ ಗೇಟ್‌ವರೆಗೆ ಹದಗೆಟ್ಟರಸ್ತೆಯನ್ನು ಅಪೆಂಡಿಕ್ಸ್‌ ಸಿ ಯೋಜನೆಯಡಿ ರಸ್ತೆಯನ್ನು ಡಾಂಬರಿಕರಣಗೊಳಿಸಿ ಅಭಿವೃದ್ಧಿಪಡಿಸಲಾಗುವುದು. ಕೋಲಾರ ರಸ್ತೆಯನ್ನು 10 ಕೋಟಿ ರೂಗಳ ವೆಚ್ಚದಲ್ಲಿ ಟೇಕಲ್‌ ಕ್ರಾಸ್‌ ಬಳಿ ಪದೇ ಪದೇ ಕಿತ್ತು ಹೋಗುತ್ತಿರುವ ರಸ್ತೆಯನ್ನು 5.50 ಮೀಟರ್‌ ಕಾಂಕ್ರೀಟ್‌ ರಸ್ತೆ ಮಾಡಿ ಉಳಿದ ಗಂಗಾಪುರ ಗೇಟ್‌ ವರೆಗಿನ ರಸ್ತೆಯನ್ನು ಅಗಲೀಕರಣಗೊಳಿಸಿ ಡಾಂಬರೀಕರಣ ಮಾಡುವ ಕಾರ್ಯ ಆರಂಭಿಸಲಾಗಿದೆ ಎಂದರು.

click me!