ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ, ವಿಶಾಲಾಕ್ಷಿ .ಅ. ಬೋಳಶೆಟ್ಟಿ ಹಾಗೂ ಪ್ರಬು.ಸಿ.ಹಿರೇಮಠ ಸದಸ್ಯರು, ದೂರುದಾರರಿಗೆ ಮೂತ್ರದೋಷ ತೊಂದರೆ 4-5 ವರ್ಷಗಳಿಂದ ಇತ್ತು ಮತ್ತು ಆ ಸಂಗತಿಯನ್ನು ವಿಮೆ ಪಡೆಯುವಾಗ ಅರ್ಜಿದಾರ ಬಹಿರಂಗ ಪಡಿಸಿಲ್ಲ ಅನ್ನುವ ವಿಷಯವನ್ನು ರುಜುವಾತು ಪಡಿಸಲು ವಿಮಾ ಕಂಪನಿಯವರು ವಿಫಲರಾಗಿದ್ದಾರೆಂದು ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.
ವರದಿ: ಪರಮೇಶ್ವರ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ
ಧಾರವಾಡ(ಜೂ.13): ಹುಬ್ಬಳ್ಳಿಯ ರಾಜೇಂದ್ರ ಪತ್ತಾರ ಎಂಬುವವರು ಎಸ್‌ಬಿಐ ವಿಮಾ ಕಂಪನಿಯಿಂದ ರೂ.10,502 ಪ್ರೀಮಿಯಮ್ ಸಂದಾಯ ಮಾಡಿ ಜನವರಿ 25, 2019 ರಂದು ಮೆಡಿಕ್ಲೇಮ್ ಆರೋಗ್ಯ ಪ್ಲಸ್‍ಪಾಲಸಿ ಪಡೆದಿದ್ದರು. ಅವರು ಪ್ರತಿ ವರ್ಷ ಪ್ರೀಮಿಯಮ್ ಹಣಕಟ್ಟಿ ವಿಮೆ ನವೀಕರಿಸುತ್ತಿದ್ದರು ಅಕ್ಟೋಬರ್ 2021ರಲ್ಲಿ ದೂರುದಾರರು ತಮ್ಮ ಮೂತ್ರದೋಷ ನಿವಾರಣೆಗಾಗಿ ಹುಬ್ಬಳ್ಳಿಯ ಶುಶ್ರುತಾ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆದಿದ್ದರು.
ಅದಕ್ಕೆ ಅವರು ರೂ.51,350 ಖರ್ಚು ಮಾಡಿದ್ದರು. ತನ್ನ ಆರೋಗ್ಯ ಪ್ಲಸ್ ವಿಮಾ ಪಾಲಸಿ ಚಾಲ್ತಿಯಲ್ಲಿರುವುದರಿಂದ ಆಸ್ಪತ್ರೆಯ ಖರ್ಚು ವೆಚ್ಚ ರೂ.51,350 ಹಣ ಕ್ಲೇಮ್ ಮಾಡಿ ಎದುರುದಾರ ವಿಮಾ ಕಂಪನಿಗೆ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ಪರಿಶೀಲಿಸಿದ ವಿಮಾ ಕಂಪನಿ ಕಳೆದ 4-5 ವರ್ಷಗಳಿಂದ ದೂರುದಾರರಿಗೆ ಮೂತ್ರ ದೋಷದತೊಂದರೆ ಇದ್ದರೂ ಅದನ್ನು ಅವರು ವಿಮೆ ಪಡೆಯುವಾಗ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಿಲ್ಲವಾದ್ದರಿಂದ ಅವರು ಪ್ರಮುಖ ಸಂಗತಿಯನ್ನು ಮರೆಮಾಚಿದ್ದಾರೆ ಅನ್ನುವ ಕಾರಣದ ಮೇಲೆ ವಿಮಾ ಕಂಪನಿಯವರು ಅವರ ಕ್ಲೇಮನ್ನು ತಿರಸ್ಕರಿಸಿದ್ದರು ತನ್ನ ವಿಮಾ ಪಾಲಸಿ ಚಾಲ್ತಿಯಲ್ಲಿದ್ದರೂ ಮತ್ತು ಸಕಾರಣ ಇಲ್ಲದೇ ತನ್ನ ಕ್ಲೇಮ್ ಅರ್ಜಿಯನ್ನು ತಿರಸ್ಕರಿಸಿರುವುದು ಗ್ರಾಹಕರ ರಕ್ಷಣಾ ಕಾಯ್ದೆಯಡಿ ಸೇವಾ ನ್ಯೂನ್ಯತೆ ಆಗುತ್ತದೆ. ಅಂತಾ ಹೇಳಿ ವಿಮಾ ಕಂಪನಿಯವರ ವಿರುದ್ಧ ಕ್ರಮ ಕೈಗೊಳ್ಳಲು ಫಿರ್ಯಾದಿದಾರ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ಈ ದೂರು ಸಲ್ಲಿಸಿದ್ದರು.
'ಶಕ್ತಿ' ಯೋಜನೆಗೆ ಉತ್ತರ ಕರ್ನಾಟಕ ಆಟೋ ಚಾಲಕರ ಸಂಘ ವಿರೋಧ!
ಈ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ, ವಿಶಾಲಾಕ್ಷಿ .ಅ. ಬೋಳಶೆಟ್ಟಿ ಹಾಗೂ ಪ್ರಬು.ಸಿ.ಹಿರೇಮಠ ಸದಸ್ಯರು, ದೂರುದಾರರಿಗೆ ಮೂತ್ರದೋಷ ತೊಂದರೆ 4-5 ವರ್ಷಗಳಿಂದ ಇತ್ತು ಮತ್ತು ಆ ಸಂಗತಿಯನ್ನು ವಿಮೆ ಪಡೆಯುವಾಗ ಅರ್ಜಿದಾರ ಬಹಿರಂಗ ಪಡಿಸಿಲ್ಲ ಅನ್ನುವ ವಿಷಯವನ್ನು ರುಜುವಾತು ಪಡಿಸಲು ವಿಮಾ ಕಂಪನಿಯವರು ವಿಫಲರಾಗಿದ್ದಾರೆಂದು ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ. ದೂರುದಾರರ ವಿಮಾ ಪಾಲಸಿ ಚಾಲ್ತಿ ಇರುವುದರಿಂದ ಅವರ ಮೂತ್ರ ದೋಷ ನಿವಾರಣೆಗೆ ಚಿಕಿತ್ಸೆ ಪಡೆದ ಬಗ್ಗೆ ಇರುವರೂ. 51,350 ಆಸ್ಪತ್ರೆಯ ಬಿಲ್ಲನ್ನು ಎದುರುದಾರ, ವಿಮಾ ಕಂಪನಿಯವರು ಕೊಡಲು ಬದ್ಧರಿದ್ದಾರೆಂದು ಹೇಳಿ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಆ ಹಣವನ್ನು ದೂರುದಾರರಿಗೆ ಸಂದಾಯ ಮಾಡುವಂತೆ ವಿಮಾ ಕಂಪನಿಗೆ ಆದೇಶಿಸಿದೆ.
ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ತೊಂದರೆಗೆ ರೂ.25,000 ಪರಿಹಾರ ಮತ್ತು ಪ್ರಕರಣ ನಡೆಸಿದ ಖರ್ಚು ವೆಚ್ಚ ರೂ. 10,000 ಗಳನ್ನು ದೂರುದಾರರಿಗೆ ನಿಡುವಂತೆ ವಿಮಾ ಕಂಪನಿಗೆ ನಿರ್ದೇಶಿಸಲಾಗಿದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ಆಡಳಿತಾಧಿಕಾರಿಗಳು ಮತ್ತು ಸಹಾಯಕ ರಿಜಿಸ್ಟ್ರಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.