ಮಂಗಳೂರು (ಜೂ.09): ಹಿಂದೂ ಧಾರ್ಮಿಕ ದತ್ತಿ ಇಲಾಖೆಯಿಂದ ಮಸೀದಿ, ಮದ್ರಸಾಗಳಿಗೆ ತಸ್ತಿಕ್ ಭತ್ಯೆ ನೀಡಲು ಸೂಚಿಸಿದ್ದಾರೆಂದು ಮಂಗಳೂರಿನಲ್ಲಿ ವಿಶ್ವಹಿಂದೂ ಪರಿಷತ್ ಭಜರಂಗದಳ ಗಂಭೀರ ಆರೋಪ ಮಾಡಿದೆ.
ಕೋವಿಡ್ 19 ಸೋಂಕಿನಿಂದಾಗಿ ಇಲ್ಲಿನ ಸಿಬ್ಬಂದಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆಂದು ಸರ್ಕಾರದಿಂದ ತಸ್ತಿಕ್ ಭತ್ಯೆ ನೀಡಲು ಆದೇಶಿಸಲಾಗಿದೆ. ತಸ್ತಿಕ್ ಹಣವನ್ನು ಹಿಂದು ಧಾರ್ಮಿಕ ದತ್ತಿ ಇಲಾಖೆಯಿಂದ ನೀಡಲು ಸರ್ಕಾರ ಆದೇಶ ನೀಡಿದೆ ಎಂದು ಹೇಳಿದ್ದಾರೆ.
ದಕ್ಷಿಣಕನ್ನಡ ಜಿಲ್ಲೆಯ 41 ಮಸೀದಿ, ಮದರಸದ ಮೌಲ್ವಿಗಳಿಗೆ ಹಿಂದು ಧಾರ್ಮಿಕ ದತ್ತಿ ಇಲಾಖೆ ಮೂಲಕವೇ ತಸ್ತಿಕ್ ನೀಡಲು ಸೂಚನೆ ನೀಡಲಾಗಿದೆ. ಆದರೆ ಈ ಆದೇಶ ಹಿಂಪಡೆಯಬೇಕು ಎಂದು ಧಾರ್ಮಿಕ ದತ್ತಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿಗೆ ವಿಎಚ್ ಪಿ ಮನವಿ ಮಾಡಿದೆ.
ಸರ್ಕಾರದಿಂದ 2 ನೇ ಪ್ಯಾಕೇಜ್ ಘೋಷಣೆ, ಯಾರ್ಯಾರಿಗೆ ಎಷ್ಟೆಷ್ಟು ನೆರವು..? ಇಲ್ಲಿದೆ
ಯಾವುದೇ ಕಾರಣಕ್ಕೂ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಹಣದಿಂದ ತಸ್ತಿಕ್ ನೀಡದಂತೆ ಮನವಿಯಲ್ಲಿ ತಿಳಿಸಲಾಗಿದೆ. ಇದೀಗ ತಸ್ತಿಕ್ ನೀಡಲು ನೀಡಿರುವ ರಾಜ್ಯ ಸರ್ಕಾರದ ಆದೇಶ ಕರಾವಳಿಯಲ್ಲಿ ವಿವಾದಕ್ಕೆ ಕಾರಣವಾಗಿದೆ.
ಮೀನುಗಾರರಿಗೆ 3 ಸಾವಿರ ರೂ ನೆರವು, ಸಿಎಂಗೆ ಶಾಸಕಿ ರೂಪಾಲಿ ನಾಯ್ಕ್ ಧನ್ಯವಾದ ...
ದೈವಸ್ಥಾನ, ದೇವಸ್ಥಾನದ ಹಣವನ್ನು ಹಿಂದುಗಳಿಗೆ ಮತ್ತು ದೇವಸ್ಥಾನದ ಕಾರ್ಯಗಳಿಗೆ ಮಾತ್ರ ಉಪಯೋಗಿಸಬೇಕು. ಮಸೀದಿ, ಮದರಸಗಳಿಗೆ ಉಪಯೋಗಿಸಬಾರದೆಂದು ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳದ ಮುಖಂಡರು ಮನವಿ ಮಾಡಿದ್ದಾರೆ.
ರಾಜ್ಯ ಬಿಜೆಪಿ ಸರ್ಕಾರದ ನಡೆಗೆ ಹಿಂದೂ ಪರ ಸಂಘಟನೆಗಳು ಗರಂ ಆಗಿವೆ.