ಬೆಂಗಳೂರಲ್ಲೊಬ್ಬ ಸೈಕೋ ಗಂಡ : ಬೇರೆಯವ್ರ ಜೊತೆ ಸೆಕ್ಸ್ ಮಾಡೆಂದು ಹೆಂಡ್ತಿಗೆ ಟಾರ್ಚರ್

By Suvarna News  |  First Published Jun 9, 2021, 1:32 PM IST
  • ಬೆಂಗಳೂರಲ್ಲೊಬ್ಬ ಸೈಕೋಪಾತ್ ಗಂಡ
  • ಸ್ನೇಹಿತರ ಜೊತೆ ಸೆಕ್ಸ್ ಮಾಡೆಂದು ಹೆಂಡ್ತಿಗೆ ಗಂಡನಿಂದಲೇ ಟಾರ್ಚರ್
  • ಸೈಕೊ ಗಂಡನ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ಪತ್ನಿ

 ಬೆಂಗಳೂರು (ಜೂ.09) : ಬೆಂಗಳೂರಲ್ಲಿ‌ ಇದ್ದಾನೊಬ್ಬ ಸೈಕೋಪಾಥ್ ಪತಿರಾಯ!  ಕಪಲ್ ಸೆಕ್ಸ್ ಗೆ ಒಪ್ಪಿಕೊಳ್ಳುವಂತೆ ಪತಿಯೇ ಪತ್ನಿಗೆ ಟಾರ್ಚರ್ ಕೊಡ್ತಾನೆ.

ಬೆಂಗಳೂರಿನ ಆರೋಪಿ ಪತಿ ವಸೀಂ ಶರೀಫ್ ಎಂಬಾತನ ವಿರುದ್ಧ ಪತ್ನಿ  ಬೆಂಗಳೂರು ಪೂರ್ವ ಮಹಿಳಾ ಪೊಲೀಸ್ ಠಾಣೆಯಲ್ಲಿ  ದೂರು ನೀಡಿದ್ದು, ಆತ ನೀಡಿದ ನಿರಂತರ ‌ಕಿರುಕುಳದ ಬಗ್ಗೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.  

Tap to resize

Latest Videos

ಕಳೆದ 2018 ರಲ್ಲಿ ಬಿಟಿಎಂ ಲೇಔಟ್ ನಿವಾಸಿ ಆರೋಪಿ ವಸೀಂ ಷರೀಫ್ ನನ್ನು ಬನಶಂಕರಿಯ ಯುವತಿ ವಿವಾಹವಾಗಿದ್ದು, ಅಂದಿನಿಂದಲೂ ಸೈಕೋಪಾತ್ ಗಂಡನಿಂದ ಆಕೆಗೆ ಕಿರುಕುಳ ತಪ್ಪಿಲ್ಲ

ಲವ್‌ ಮಾಡಿ ಕೈಕೊಟ್ಟ ಯುವಕ: ಮೊಬೈಲ್‌ನಲ್ಲಿ ಹೇಳಿಕೆ ದಾಖಲಿಸಿ ಯುವತಿ ನೇಣಿಗೆ ಶರಣು ... .  

ಗೆಳೆಯರೊಂದಿಗೆ ಸೆಕ್ಸ್ ಮಾಡು ಎಂದು ಪತ್ನಿಗೆ ಟಾರ್ಚರ್ ಕೊಡುತ್ತಿದ್ದು, ಪತ್ನಿಯನ್ನ ಗೋವಾಗೆ ಕರೆದೊಯ್ದು ಮದ್ಯ ಸೇವನೆ ಮಾಡುವಂತೆಯೂ ಒತ್ತಾಯಿಸಿ ಇಂತಹ ಕೃತ್ಯಗಳಿಗೆ ಒಪ್ಪದಿದ್ದಾಗ ಆಕೆಯ ಮೇಲೆ ಗಂಭೀರವಾಗಿ ಹಲ್ಲೆ ಮಾಡಿರುವ ವಿಚಾರವನ್ನು ಆಕೆ ದೂರಿನಲ್ಲಿ ತಿಳಿಸಿದ್ದಾಳೆ.  

ಇಷ್ಟೇ ಅಲ್ಲದೇ ಫ್ಯಾಮಿಲಿ ಟ್ರಿಪ್ ಎಂದು ಪತ್ನಿಯನ್ನ ಊಟಿಗೆ ಕರೆದೊಯ್ದು ಖಾಸಗಿ ಹೋಟೆಲ್ ನಲ್ಲಿ ಕಪಲ್ ಸೆಕ್ಸ್ ಗೆ ಒತ್ತಾಯ ಮಾಡಿದ್ದು, ನಾನು ನನ್ನ ಫ್ರೆಂಡ್ ಹೆಂಡ್ತಿ ಜೊತೆ ಸೆಕ್ಸ್ ಮಾಡ್ತೀನಿ, ನೀನು ನನ್ನ ಫ್ರೆಂಡ್ ಜೊತೆ ಸೆಕ್ಸ್ ಮಾಡು ಎಂದು ತನ್ನ ಪತ್ನಿಗೆ ಹಿಂಸೆ ನೀಡಿದ್ದಾನೆ. 

ಎಲ್ಲಾ ನರಕವನ್ನು ಸಹಿಸಿಕೊಂಡಿದ್ದು,  ಬಳಿಕ ದಂಪತಿಗೆ ಹೆಣ್ಣು ಮಗು ಜನಿಸಿದೆ. ಆದರೆ ಹುಟ್ಟಿದ ಹೆಣ್ಣು ಮಗುವಿಗೆ ಬ್ಲೂ ಐಸ್ ಇದೆ ಎಂದು  ಪತ್ನಿಯನ್ನ ಮನೆಯಿಂದ ಹೊರದಬ್ಬಿದ್ದಾನೆ. ಪತ್ನಿ ಎರಡು ಬಾರಿ ಗರ್ಭಿಣಿಯಾದಾಗಲೂ ಅಬಾಷನ್ ಮಾಡಿಸಿದ್ದು, ಕಡೆಗೆ ಹೆಣ್ಣು ಮಗು ಜನಿಸಿದಾಗ ಮಗುವಿಗೆ ಬ್ಲೂ ಐಸ್ ಇದೆ ನನ್ನ ಥರ ಕಣ್ಣಿಲ್ಲ ಎಂದು ಪತ್ನಿಯನ್ನು ಮನೆಗೆ ಸೇರಿಸದೇ ಹೊರಹಾಕಿದ್ದಾನೆ. ನೊಂದ ಮಹಿಳೆ ಇದೀಗ ನ್ಯಾಯಕ್ಕಾಗಿ  ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. 

click me!