Chikkaballapura : 229 ಗ್ರಾಮ್‌ ಒನ್‌ ಕೇಂದ್ರಗಳ ಪೈಕಿ ಬರೀ 134 ಆರಂಭ!

By Kannadaprabha News  |  First Published Dec 7, 2022, 7:40 AM IST

  ಬೆರಳ ತುದಿಯಲ್ಲಿ ವಿಶ್ವ ನೋಡುವ ಕಾಲ ಇದು. ಗ್ರಾಮ ಮಟ್ಟದಲ್ಲಿಯೆ ಸರ್ಕಾರದ ಸಕಲ ಸಾಲ ಸೌಲಭ್ಯಗಳಿಗೆ ಅರ್ಜಿ ಸಲ್ಲಿಕೆ ಜೊತೆಗೆ ಸರ್ಕಾರ ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ಮಹತ್ವಕಾಂಕ್ಷೆ ಹೊತ್ತ ಗ್ರಾಮ ಒನ್‌ ಸೇವಾ ಕೇಂದ್ರಗಳಿಗೆ ಜಿಲ್ಲೆಯಲ್ಲಿ ಬರ ಎದುರಾಗಿದೆ.


 ಕಾಗತಿ ನಾಗರಾಜಪ್ಪ

 ಚಿಕ್ಕಬಳ್ಳಾಪುರ ( ಡಿ. 07):  ಬೆರಳ ತುದಿಯಲ್ಲಿ ವಿಶ್ವ ನೋಡುವ ಕಾಲ ಇದು. ಗ್ರಾಮ ಮಟ್ಟದಲ್ಲಿಯೆ ಸರ್ಕಾರದ ಸಕಲ ಸಾಲ ಸೌಲಭ್ಯಗಳಿಗೆ ಅರ್ಜಿ ಸಲ್ಲಿಕೆ ಜೊತೆಗೆ ಸರ್ಕಾರ ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ಮಹತ್ವಕಾಂಕ್ಷೆ ಹೊತ್ತ ಗ್ರಾಮ ಒನ್‌ ಸೇವಾ ಕೇಂದ್ರಗಳಿಗೆ ಜಿಲ್ಲೆಯಲ್ಲಿ ಬರ ಎದುರಾಗಿದೆ.

Tap to resize

Latest Videos

ಹೌದು, ಜಿಲ್ಲೆಗೆGrama One)  ಸೇವಾ ಕೇಂದ್ರಗಳನ್ನು ತೆರೆಯಲು ರಾಜ್ಯ ಸರ್ಕಾರ (Govt)  ಬರೋಬ್ಬರಿ 229 ಗುರಿ ಕೊಟ್ಟರೆ ಇಲ್ಲಿವರೆಗೂ ಆರಂಭಗೊಂಡು ಸೇವೆ ನೀಡುತ್ತಿರುವ ಕೇಂದ್ರಗಳ ಸಂಖ್ಯೆ ಕೇವಲ 134 ಮಾತ್ರ. ಇನ್ನೂ 92 ಕೇಂದ್ರಗಳ ತೆರೆಯಲು ಜಿಲ್ಲಾಡಳಿತ ಪದೇ ಪದೇ ಆಹ್ವಾನಿಸಿದರೂ ಯಾರು ಮುಂದೆ ಬರುತ್ತಿಲ್ಲ

750 ಕ್ಕೂ ಹೆಚ್ಚು ನಾಗರಿಕ ಸೇವೆ ಲಭ್ಯ

ಗ್ರಾಮ ಒನ್‌ ಕೇಂದ್ರ ಇದು ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಸೇವಾಸಿಂಧು ಯೋಜನೆ ಅಡಿಯಲ್ಲಿ ರೂಪಿಸಲಾಗಿದೆ. ಸರ್ಕಾರದ ಸೇವೆಗಳನ್ನು ಮನೆಬಾಗಿಲಿಗೆ ತಲುಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ಯೋಜನೆ ಅಡಿಯಲ್ಲಿ 750 ಕ್ಕೂ ಹೆಚ್ಚು ನಾಗರಿಕ ಸೇವೆಗಳನ್ನು ಪಡೆಯಲು ಅರ್ಜಿಗಳನ್ನು ಗ್ರಾಮ ಒನ್ಚ ಕೇಂದ್ರಗಳ ಮೂಲಕ ಸ್ಪೀಕರಿಸಲು ಸರ್ಕಾರ ಅವಕಾಶ ಕಲ್ಪಿಸಿದೆ. ಅದೇ ರೀತಿ ಸಕಾಲ, ಮಾಹಿತಿ ಹಕ್ಕು ಅಧಿನಿಯಮ, ಬ್ಯಾಂಕಿಂಗ್‌ ಸೇವೆಗಳು ಹಾಗು ಸಾರ್ವಜನಿಕರ ಕುಂದು ಕೊರತೆ ನಿವಾರಣೆ ಕೋರಿ, ಜಾತಿ, ಆದಾಯ ಪ್ರಮಾಣ ಪತ್ರದಿಂದ ಹಿಡಿದು ಇ-ಶ್ರಮ್‌ ಕಾರ್ಡ್‌, ಹಿರಿಯ ನಾಗರಿಕರ ಪಾಸ್‌, ಕಾರ್ಮಿಕರ ಬಸ್‌ಪಾಸ್‌ ಹೀಗೆ ಸರ್ಕಾರದ ಅನೇಕ ಸೌಲಭ್ಯಗಳಿಗೆ ಅರ್ಜಿಗಳನ್ನು ಈ ಕೇಂದ್ರಗಳ ಮೂಲಕವೇ ಸ್ವೀಕರಿಸಲಾಗುತ್ತದೆ.

ಜೊತೆಗೆ ವಾರದ ಎಲ್ಲಾ ಏಳು ದಿನಗಳಲ್ಲಿ ಗ್ರಾಮ ಒನ್‌ ಕೇಂದ್ರಗಳು ಬೆಳಿಗ್ಗೆ 8.00 ಗಂಟೆಯಿಂದ ರಾತ್ರಿ 8.00 ಗಂಟೆಯವರೆಗೂ ಕಾರ್ಯನಿರ್ವಹಿಸಲಿವೆ. ಆದರೆ ಜಿಲ್ಲೆಯ ಎಲ್ಲಾ 157 ಗ್ರಾಮ ಪಂಚಾಯ್ತಿಗಳಲ್ಲಿ ಜನಸಂಖ್ಯೆ ಅನುಗುಣವಾಗಿ ಪ್ರತಿ ಗ್ರಾಮ ಪಂಚಾಯ್ತಿಗೆ ಒಂದು ಅಥವಾ ಎರಡು ಗ್ರಾಮ ಒನ್‌ ಕೇಂದ್ರಗಳನ್ನು ಸ್ಥಾಪಿಸಲು ಸರ್ಕಾರ ಅನುಮತಿ ನೀಡಿದರೂ ಕೇಂದ್ರ ತೆರೆಯಲಿಕ್ಕೆ ಯಾರು ಮುಂದೆ ಬರುತ್ತಿಲ್ಲ.

ಸೇವಾ ಕಮಿಷನ್‌ ಬಹಳ ಕಡಿಮೆ

ಗ್ರಾಮ ಒನ್‌ ಕೇಂದ್ರ ತೆರೆಯುವರಿಗೆ ಸರ್ಕಾರ ಅಜಿ ಸ್ಪೀಕೃತಿಯ ಲೆಕ್ಕಾಚಾರದಲ್ಲಿ ಕಮಿಷನ್‌ ಕೊಡುತ್ತದೆ. ಉಳಿದಂತೆ ಕಟ್ಟಡ ಬಾಡಿಗೆ, ಕಂಪ್ಯೂಟರ್‌, ವಿದ್ಯುತ್‌, ಇಂಟರ್‌ನೆಟ್‌ ಬಿಲ್‌ ಎಲ್ಲವನ್ನು ಮಾಲೀಕನಿಗೆ ಪಾವತಿಸಬೇಕಾಗುತ್ತದೆ. ಸರ್ಕಾರದಿಂದ ಯಾವುದೇ ಸೌಲಭ್ಯ ಕೊಡುವುದಿಲ್ಲ. ಹೀಗಾಗಿ ಗ್ರಾಮ ಒನ್‌ ಕೇಂದ್ರ ತೆರೆಯಲು ಗ್ರಾಮೀಣ ಭಾಗದಲ್ಲಿ ಯಾರು ಮುಂದೆ ಬರುತ್ತಿಲ್ಲ.

ಜಿಲ್ಲೆಗೆ ಒಟ್ಟು 229 ಗ್ರಾಮ ಒನ್‌ ಕೇಂದ್ರ ತೆರೆಯಲು ಸರ್ಕಾರ ಗುರಿ ನೀಡಿದೆ. ಸದ್ಯ ಜಿಲ್ಲಾದ್ಯಂತ 134 ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಇನ್ನೂ 95 ಕೇಂದ್ರಗಳು ತೆರೆಯಬೇಕಿದೆ. ಕೆಲವೊಂದು ಗ್ರಾಪಂಗಳಿಗೆ ಜನಸಂಖ್ಯೆ ಆಧಾರದ ಮೇಲೆ 1, 2 ಕೇಂದ್ರ ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಆಸಕ್ತರು hಠಿಠಿps://ka್ಟ್ಞaಠಿakaಟ್ಞಛಿ.ಜಟv.ಜ್ಞಿ ಜಾಲತಾಣಕ್ಕೆ ಭೇಟಿ ಮಾಡಿ ಆನ್‌ ಲೈನ್‌ ಮುಖಾಂತರ ಅರ್ಜಿಯನ್ನು ಸಲ್ಲಿಸುವುದು.

ಪೂರ್ಣಚಂದ್ರ, ಜಿಲ್ಲಾ ವ್ಯವಸ್ಥಾಪಕರು. ಸೇವಾ ಸಿಂಧು.

 229 ಗ್ರಾಮ್‌ ಒನ್‌ ಕೇಂದ್ರಗಳ ಪೈಕಿ ಬರೀ 134 ಆರಂಭ!

ಬೆರಳ ತುದಿಯಲ್ಲಿ ವಿಶ್ವ ನೋಡುವ ಕಾಲ ಇದು

ಕಮಿಷನ್‌ ಕಡಿಮೆ: ಗ್ರಾಮ್‌ ಒನ್‌ ತೆರೆಯಲು ಹಿಂದೇಟು

ಗ್ರಾಮ ಒನ್‌ ಸೇವಾ ಕೇಂದ್ರಗಳಿಗೆ ಜಿಲ್ಲೆಯಲ್ಲಿ ಬರ ಎದುರಾಗಿದೆ.

ಅರ್ಜಿ ಆಹ್ವಾನಿಸಿದರೂ ಯಾರೂ ಮುಂದೆ ಬರುತ್ತಿಲ್ಲ

click me!