ಹಿಂದೂಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳಲು ಪ್ರಚೋದನೆ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧ ಕೆಳ ನ್ಯಾಯಾಲಯದಲ್ಲಿ ವಜಾಗೊಂಡಿದ್ದ ಆರೋಪಿಗಳ ಜಾಮೀನು ಅರ್ಜಿಯನ್ನು ಮಂಡ್ಯ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಮಾನ್ಯ ಮಾಡಿ ಜಾಮೀನು ನೀಡಿದೆ.
ಮದ್ದೂರು (ಡಿ.07): ಹಿಂದೂಗಳನ್ನು ಕ್ರೈಸ್ತ ಧರ್ಮಕ್ಕೆ ಗೊಳ್ಳಲು ಪ್ರಚೋದನೆ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧ ಕೆಳ ನ್ಯಾಯಾಲಯದಲ್ಲಿ ವಜಾಗೊಂಡಿದ್ದ ಆರೋಪಿಗಳ ಜಾಮೀನು ಅರ್ಜಿಯನ್ನು ಮಂಡ್ಯ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಮಾನ್ಯ ಮಾಡಿ ಜಾಮೀನು ನೀಡಿದೆ.
ಮಳವಳ್ಳಿ ತಾಲೂಕು ಮಲ್ಲಿಕ್ಯಾತನ ಹಳ್ಳಿಯ ಇ.ಎನ್.ಕುಮಾರ್ ನಾಗೇಶ್, ಇ.ಎನ್.ವಿಜಯ್‌ಗೌಡ, ಕಂದೇಗಾಲದ ಹೇಮಂತ್‌ಕುಮಾರ್, ಮೈಸೂರಿನ (Mysuru) ಎನ್.ಆರ್.ಮೊಹಲ್ಲಾದ ಸುಮಂತ್, ಚಾಮರಾಜನಗರ ಗುಂಡ್ಲುಪೇಟೆ ತಾಲೂಕಿನ ಸೋಂಪುರ ಗ್ರಾಮದ ಎಸ್.ಸಂದೀಪ್ ಎಂಬುವರು ತಮ್ಮ ಪರ ವಕೀಲರಾದ ಬಿ.ಟಿ.ವಿಶ್ವನಾಥ್ ಮೂಲಕ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ಸೆಷನ್ಸ್ ನ್ಯಾಯಾಲಯದ (Court) 2ನೇ ಹೆಚ್ಚುವರಿ ನ್ಯಾಯಾಧೀಶರಾದ ಕೆ. ಕೃಷ್ಣಪ್ರಸಾದ್‌ರಾವ್ ಎಲ್ಲಾ ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದ್ದಾರೆ. ಆರೋಪಿಗಳು ತಲಾ ಇಬ್ಬರು ವ್ಯಕ್ತಿಗಳಿಗೆ ಜಾಮೀನು ನೀಡಬೇಕು ಹಾಗೂ ತಲಾ ಒಂದು ಲಕ್ಷ ರು. ಭದ್ರತಾ ಠೇವಣಿ ಇಡುವಂತೆ ಷರತ್ತು ವಿಧಿಸಿ ಆದೇಶ ನೀಡಿದ್ದಾರೆ.
ಪ್ರಕರಣದ ಪಿರಾರಯದಿ ಬಿ.ಆರ್.ಅಭಿಷೇಕ್‌ಗೌಡ ಹಿಂದೂ ಧರ್ಮದವನಾಗಿದ್ದು, ಆತನನ್ನು ಆರೋಪಿಗಳು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುವಂತೆ ಪ್ರಚೋದನೆ ಮಾಡಿದ್ದ ಅನುಮಾನ ಇರುತ್ತದೆ. ಮತಾಂತರಕ್ಕೆ ಒಳಗಾದ ವ್ಯಕ್ತಿ ಸಹ ಮತಾಂತರ ನಿಷೇಧ ಕಾಯ್ದೆಯಡಿ ದೂರು ಸಲ್ಲಿಸಬಹುದಾಗಿದೆ ಎಂದು ಪ್ರಾಸಿಕ್ಯೂಷನ್ ಪರ ಸರ್ಕಾರಿ ಅಭಿಯೋಜಕಿ ವೀಣಾ ವಾದ ಮಂಡಿಸಿದರು.
ಸರ್ಕಾರಿ ಅಭಿಯೋಜಕಿ ಹಾಗೂ ಆರೋಪಿಗಳ ಪರ ವಕೀಲರ ವಾದ ಆಲಿಸಿದ 2ನೇ ಸೆಷನ್ಸ್ ನ್ಯಾಯಾಧೀಶ ಕೆ. ಕೃಷ್ಣಪ್ರಸಾದ್‌ರಾವ್ ಅವರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದ್ದಾರೆ.
ಜಾಮೀನು ಪಡೆದ ಎಲ್ಲ ಐದು ಮಂದಿ ಆರೋಪಿಗಳು ಕಳೆದ ನ.10ರಂದು ಮದ್ದೂರು ತಾಲೂಕು ಕೆ.ಎಂ.ದೊಡ್ಡಿ ಸಮೀಪದ ಅಣ್ಣೂರು ಗ್ರಾಮದ ಬಳಿ ಜನರನ್ನು ಹಿಂದೂ ಧರ್ಮದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುವಂತೆ ಕರಪತ್ರ ಹಂಚುವ ಮೂಲಕ ಮತಾಂತರಕ್ಕೆ ಪ್ರಚೋದನೆ ಮಾಡುತ್ತಿದ್ದರೆಂದು ಆರೋಪಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಕೆ.ಎಂ.ದೊಡ್ಡಿ ಪೊಲೀಸರು ಪ್ರಕರಣ ದಾಖಲು ಮಾಡಿಸಿ ಆರೋಪಿಗಳ ವಿರುದ್ಧ ಎಫ್‌ಐಆರ್ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಗಳು ಮದ್ದೂರು ಜೆಎಫ್‌ಸಿ ನ್ಯಾಯಾಲಯಕ್ಕೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಸಹಾಯಕ ಸರ್ಕಾರಿ ಅಭಿಯೋಜಕ ಮಧುಸೂಧನ್ ಅವರು ಆರೋಪಿಗಳಿಗೆ ಜಾಮೀನು ನೀಡದಂತೆ ಆಕ್ಷೇಪಣೆ ಸಲ್ಲಿಸಿದ ಹಿನ್ನೆಲೆಯಲ್ಲಿ ಜಾಮೀನು ಅರ್ಜಿ ವಜಾಗೊಂಡಿತ್ತು.
ಮತ್ತೆ ಹಿಂದೂ ಸಮಾಜಕ್ಕೆ ಕರೆ ತರುವ ಜವಾಬ್ದಾರಿ ಎಲ್ಲಾ ಹಿಂದೂಗಳ ಮೇಲಿದೆ
ನರಸಿಂಹರಾಜಪುರ : ಮತಾಂತರಗೊಂಡ ಎಲ್ಲಾ ಹಿಂದೂಗಳನ್ನು ಮತ್ತೆ ಹಿಂದೂ ಸಮಾಜಕ್ಕೆ ಕರೆ ತರುವ ಜವಾಬ್ದಾರಿ ಎಲ್ಲಾ ಹಿಂದೂಗಳ ಮೇಲಿದೆ ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ತಿಳಿಸಿದರು. ರಾತ್ರಿ ಪಟ್ಟಣದ ಕೊಟ್ಟೂರು ಬಸವೇಶ್ವರ ದೇವಸ್ಥಾನದ ಆವರಣದ ವೀರ ಸಾವರ್ಕರ್ ವೇದಿಕೆಯಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳದ ಸಂಯುಕ್ತ ಆಶ್ರಯದಲ್ಲಿ ದತ್ತ ಜಯಂತಿ ಪ್ರಯುಕ್ತ ನಡೆದ ಹಿಂದೂ ಸಮ್ಮಿಲನದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.ಮತಾಂತರ ಆದವರನ್ನು ವಾಪಾಸು ಕರೆ ತರುವ ಯುದ್ಧಕ್ಕೆ ಎಲ್ಲರೂ ಸನ್ನದ್ಧರಾಗಿರಬೇಕು.
ನರೇಂದ್ರ ಮೋದಿ ಪ್ರಧಾನಿಯಾದ ನಂತರ ಹಿಂದೂಗಳಿಗೆ ಉಸಿರಾಡುವ ಪರಿಸ್ಥಿತಿ ಬಂದಿದೆ.500 ವರ್ಷಗಳ ಹೋರಾಟದ ಇತಿಹಾಸವಿದ್ದ ಬಾಬರಿ ಮಸೀದಿ ಜಾಗದಲ್ಲಿ ರಾಮ ಮಂದಿರ ಮತ್ತೆ ಕಟ್ಟಲಾಗುತ್ತಿದೆ.ಈಗ ಎಲ್ಲರ ಹೃದಯದಲ್ಲಿ ರಾಮ ಇದ್ದಾನೆ.ಕಾಶ್ಮೀರದಲ್ಲಿ 370 ನೇ ವಿಧಿ ತೆಗೆದು ಹಾಕಲಾಗಿದ್ದು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಒಂದೇ ಕಾನೂನು ಜಾರಿಗೆ ತರಲಾಗಿದೆ.ಕಾಶಿಯಲ್ಲಿ ಭವ್ಯ ಮಂದಿರ ಕಟ್ಟಲಾಗಿದೆ.ಮಧುರದಲ್ಲಿ ಕೃಷ್ಣ ಹುಟ್ಟಿದ ಜಾಗವನ್ನು ಮತ್ತೆ ಪಾಪಾಸು ಪಡೆಯಬೇಕಾಗಿದೆ ಎಂದು ಘೋಷಿಸಿದರು.
ಪಿಎಫ್‌ಐ, ಸಿಎಫ್‌ಐ ಬ್ಯಾನ್ ಆಗಿದ್ದರೂ ಆ ಮನಸ್ಥಿತಿಯ ಜನ ಇದ್ದಾರೆ: ಸಿ.ಟಿ.ರವಿ
ಭಾರತ ದೇಶದಲ್ಲಿ ಹಿಂದೂ ಸಮಾಜದ ಒಳ ಪಂಗಡ, ಜಾತಿಗಳು ಎಂಬ ಕೆಟ್ಟಆಚರಣೆ ತೆಗೆದು ಹಾಕಿ ಎಲ್ಲಾ ಹಿಂದೂಗಳು ಒಂದೇ ಎಂಬಂತಾಗಬೇಕು.ಇಂದು ಭಾರತದ ಮೇಲೆ ಯು ದ್ಧದ ಯೋಚನೆ ಮಾಡಬೇಕಾದರೆ ಪಾಕಿಸ್ತಾನ ಹಾಗೂ ಚೀನಾ ಹಿಂದೆ ಮುಂದೆ ನೋಡುತ್ತಿದೆ. ಭವ್ಯ ಭಾರತ ಈಗ ಗಟ್ಟಿಯಾಗಿದೆ.ಧರ್ಮ ಹಾಗೂ ಹಿಂದೂ ಸಮಾಜದ ರಕ್ಷಣೆಗಾಗಿ ಎಲ್ಲರೂ ಒಟ್ಟಾಗೋಣ.ದತ್ತ ಪೀಠದ ಮುಕ್ತಿಗಾಗಿ ಹೋರಾಟ ಮುಂದುವರಿಯುತ್ತಿದ್ದು ಹತ್ತಾರು ವರ್ಷಗಳ ಹೋರಾಟದ ಫಲ ಸಿಗಲಿದೆ ಎಂದರು.
ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಆರ್.ಡಿ.ಮಹೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ,ನ.28 ರಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿ ದತ್ತ ಮಾಲೆ ಹಾಕುತ್ತಿದ್ದೇವೆ.ದತ್ತ ಜಯಂತಿ ಅಂಗವಾಗಿ ಜಿಲ್ಲೆಯಲ್ಲಿ 45 ದೊಡ್ಡ ಕಾರ್ಯಕ್ರಮ ಹಮ್ಮಿಕೊಂಡಿದ್ದು ಇಂದು ನರಸಿಂಹರಾಜಪುರದಲ್ಲಿ ಮೊದಲನೇ ಕಾರ್ಯಕ್ರಮ ನಡೆಯುತ್ತಿದೆ.ಡಿ.6 ರಂದು ಚಿಕ್ಕಮಗಳೂರಿನಲ್ಲಿ ನಡೆಯುವ ಅನುಸೂಯ ಜಯಂತಿಯಲ್ಲಿ 10 ಸಾವಿರ ಮಹಿಳೆಯರು ಸೇರಲಿದ್ದಾರೆ. ಚಿಕ್ಕಮಗಳೂರಿನಲ್ಲಿ ನಡೆಯುವ ಶೋಭಾ ಯಾತ್ರೆಯಲ್ಲಿ 70 ಸಾವಿರ ಜನ ಸೇರುವ ನಿರೀಕ್ಷೆ ಇದೆ ಎಂದರು.