ಧರ್ಮಸ್ಥಳ ಭಕ್ತರಿಗೆ ಹೆಗ್ಗಡೆಯವರಿಂದ ಗುಡ್ ನ್ಯೂಸ್

By Kannadaprabha NewsFirst Published Oct 4, 2020, 7:05 AM IST
Highlights

ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ  ಹೆಗ್ಗಡೆಯವರು ಭಕ್ತರಿಗೆ ಗುಡ್ ನ್ಯೂಸ್ ನೀಡಿದ್ದಾರೆ. 

ಧರ್ಮಸ್ಥಳ (ಅ.02): ಮುಂದಿನ ವರ್ಷದಿಂದ ಆನ್‌ಲೈನ್‌ ಮೂಲಕ ಜಾಗತಿಕ ಮಟ್ಟದಲ್ಲಿ ಭಜನಾ ತರಬೇತಿ ನೀಡಲಾಗುವುದು ಎಂದು ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಪ್ರಕಟಿಸಿದ್ದಾರೆ.

ಧರ್ಮಸ್ಥಳದಲ್ಲಿ ಶನಿವಾರ ಕರ್ನಾಟಕ ಭಜನಾ ಪರಿಷತ್‌ ನೇತೃತ್ವದಲ್ಲಿ ಆಯೋಜಿಸಿದ ಪ್ರಾರ್ಥನಾ ಸಮಾವೇಶದಲ್ಲಿ ಅವರು ಮಾತನಾಡಿದರು. ಧರ್ಮಸ್ಥಳದಲ್ಲಿ ದೇವರ ಅಪ್ಪಣೆ ಪಡೆದು ಜಾತ್ರೆ ಹಾಗೂ ಎಲ್ಲ ಕಾರ್ಯಕ್ರಮಗಳನ್ನು ಸರಳವಾಗಿ ಆಚರಿಸಲಾಗುತ್ತದೆ. ಈ ವರ್ಷ ಭಜನಾ ತರಬೇತಿ ಕಮ್ಮಟದ ಬದಲು ಸಾಂಕೇತಿಕವಾಗಿ ಒಂದು ದಿನದ ಪ್ರಾರ್ಥನಾ ಸಮಾವೇಶ ಆಯೋಜಿಸಿದ್ದಾಗಿ ಹೇಳಿದರು.

ಮಾಣಿಲದ ಮೋಹನದಾಸ ಸ್ವಾಮೀಜಿ ಪ್ರಾರ್ಥನಾ ಸಮಾವೇಶ ಉದ್ಘಾಟಿಸಿದರು.

ವಿದ್ವಾಂಸ ಗಣೇಶ್‌ ಅಮೀನ್‌ ಸಂಕಮಾರ್‌ ಶುಭಾಶಂಸನೆ ಮಾಡಿದರು. ಮೂವತ್ತು ಸಾವಿರ ಶಿವಪಂಚಾಕ್ಷರಿ ಪಠಣ ಮಾಡಲಾಯಿತು ಸಾಮೂಹಿಕ ಭಜನೆ, ಪ್ರಾರ್ಥನೆ ನಡೆಸಲಾಯಿತು.

ಸಾಮೂಹಿಕ ಪ್ರಾರ್ಥನೆ, ಭಜನೆ ಬಳಿಕ ಅನ್ನಪೂರ್ಣದವರೆಗೆ ನಗರ ಸಂಕೀರ್ತನೆ ನಡೆಯಿತು. ರಾಮಕೃಷ್ಣ ಕಾಟುಕುಕ್ಕೆ, ರಾಜೇಶ್‌ ಪಡಿಯಾರ್‌, ಮನೋರಮಾ ತೋಳ್ಪಾಡಿತ್ತಾಯ ನೇತೃತ್ವದಲ್ಲಿ ಭಜನೆ, ಪ್ರಾರ್ಥನೆ ನಡೆಯಿತು. ದೇವದಾಸ ಪ್ರಭು, ಮಂಗಲ ದಾಸ ಗುಲ್ವಾಡಿ ಹಿನ್ನೆಲೆಯಲ್ಲಿ ಸಹಕರಿಸಿದರು. 15 ನಿಮಿಷಗಳ ಕಾಲ 30000 ಶಿವಪಂಚಾಕ್ಷರಿ ಪಠಣ ಮಾಡಲಾಯಿತು. ಸುಬ್ರಹ್ಮಣ್ಯ ಪ್ರಸಾದ್‌ ಸ್ವಾಗತಿಸಿದರು. ಮಮತಾ ಹರೀಶ ರಾವ್‌ ವಂದಿಸಿದರು.

click me!