ಕರ್ನಾಟಕ ರಾಜ್ಯೋತ್ಸವ ನಿಮಿತ್ತ ನಾಳೆ Hampi Zoo ತೆರೆಯಲು ನಿರ್ಧಾರ

Published : Oct 31, 2022, 12:43 PM ISTUpdated : Oct 31, 2022, 12:45 PM IST
ಕರ್ನಾಟಕ ರಾಜ್ಯೋತ್ಸವ ನಿಮಿತ್ತ ನಾಳೆ Hampi Zoo ತೆರೆಯಲು ನಿರ್ಧಾರ

ಸಾರಾಂಶ

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರ ಬಳಿ ಇರುವ ಅಟಲ್ ಬಿಹಾರಿ ವಾಜಪೇಯಿ ಜೂಯೋಲಾಜಿಕಲ್ ಪಾರ್ಕ್(Hampi zoo) ನಾಳೆ ಓಪನ್ ಇರಲಿದೆ. ಕನ್ನಡ ರಾಜ್ಯೋತ್ಸವ ನಿಮಿತ್ತ ನಾಳೆ ಝೂ ತೆರೆಯಲು ನಿರ್ಧರಿಸಲಾಗಿದೆ.

ವಿಜಯನಗರ (ಅ.31) : ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರ ಬಳಿ ಇರುವ ಅಟಲ್ ಬಿಹಾರಿ ವಾಜಪೇಯಿ ಜೂಯೋಲಾಜಿಕಲ್ ಪಾರ್ಕ್(Hampi zoo) ನಾಳೆ ಓಪನ್ ಇರಲಿದೆ. ಕನ್ನಡ ರಾಜ್ಯೋತ್ಸವ ನಿಮಿತ್ತ ನಾಳೆ ಝೂ ತೆರೆಯಲು ನಿರ್ಧರಿಸಲಾಗಿದೆ.

ಸಾಮಾನ್ಯವಾಗಿ ಪ್ರತಿ ಮಂಗಳವಾರದಂದು ರಜಾ ದಿನವಿದ್ದು. ತೆರೆದಿರುವುದಿಲ್ಲ. ಆದರೆ ನಾಳೆಯೇ ಕರ್ನಾಟಕ ರಾಜ್ಯೋತ್ಸವ ಇರುವುದರಿಂದ ಝೂ ಓಪನ್ ಮಾಡಲಾಗುತ್ತಿದೆ. ರಾಜ್ಯೋತ್ಸವ ನಿಮಿತ್ತ ಹಂಪಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಳ. ಹೀಗಾಗಿ ಪ್ರವಾಸಿಗರು ಹಂಪಿ ಝೂ ಗೆ ಭೇಟಿ ನೀಡುತ್ತಾರೆ. ಈ ವೇಳೆ ಹಂಪಿ ಝೂ ಮುಚ್ಚುವುದರಿಂದ ಪ್ರವಾಸಿಗರಿಗೆ ನಿರಾಸೆಯಾಗಬಹುದು. ಇದನ್ನು ಅರಿತು ಹಂಪಿ ಝೂ ಕಾರ್ಯನಿರ್ವಾಹಕ ಅಧಿಕಾರಿ ನಾಳೆಯೂ ಝೂ ತೆರೆಯಲು ನಿರ್ಧಾರ ತೆಗೆದುಕೊಂಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.. ಪ್ರವಾಸಿಗರು ನಾಳೆ ಹಂಪಿ ಝೂಗೆ ಭೇಟಿ ಕೊಡಬಹುದು. ಪ್ರಾಣಿಗಳನ್ನು ವೀಕ್ಷಿಸಬಹುದಾಗಿದೆ. 

ಹಂಪಿ ಮೃಗಾಯಲಕ್ಕೆ ನಾಲ್ಕು ಆಫ್ರಿಕನ್ ಬಬೂನ್ ಗಳು ಪ್ರಮುಖ ಆಕರ್ಷಣಿಯ. ಇದರ ಜತೆಗೆ ಜಿರಾಫೆಗಳು ಇರಲಿವೆ. ಈಗಾಗಲೇ ಮೃಗಾಲಯದಲ್ಲಿ ಹುಲಿಗಳು, ಸಿಂಹಗಳು, ಚಿರತೆಗಳು, ತೋಳಗಳು ಮತ್ತು ಕತ್ತೆ-ಕಿರುಬಗಳು ಮೃಗಾಲಯದಲ್ಲಿರುವುದರಿಂದ ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತಿವೆ. ಈ ಪ್ರಾಣಿಗಳನ್ನು ವೀಕ್ಷಿಸಲು ಪ್ರವಾಸಿಗರ ಸಂಖ್ಯೆ ಹೆಚ್ಚು ಬರುತ್ತಿದ್ದು, ನಾಳೆ ಕರ್ನಾಟಕ ರಾಜ್ಯೋತ್ಸವ ವೇಳೆ ಹಂಪಿ ಝೂ ತೆರೆಯುವುದರಿಂದ ಪ್ರವಾಸಿಗರಿಗೆ ಪ್ರಾಣಿ ವೀಕ್ಷಣೆಗೆ ಅನುಕೂಲವಾಗಲಿದೆ. 

67 ಸಾಧಕರು, 10 ಸಂಸ್ಥೆಗಳಿಗೆ ರಾಜ್ಯೋತ್ಸವ ಪ್ರಶಸ್ತಿ: ಮೊದಲ ಬಾರಿಗೆ ದೈವನರ್ತಕರಿಗೂ ಒಲಿದ ಪ್ರಶಸ್ತಿ

PREV
click me!

Recommended Stories

ಅಧಿವೇಶನದ ಮೊದಲ ದಿನವೇ ಕೇಬಲ್‌ ಆಪರೇಟರ್‌ಗಳಿಗೆ ಸಿಹಿಸುದ್ದಿ ನೀಡಿದ ಇಂಧನ ಸಚಿವ ಕೆಜೆ ಜಾರ್ಜ್‌!
ಕೊಪ್ಪಳ: ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ - ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ವಾಪಸಾಗುವಾಗ ಭೀಕರ ದುರಂತ!