ಜೋಗ ಜಲಪಾತದಲ್ಲಿ ಅಷ್ಟಕ್ಕೂ ಎಷ್ಟು ನೀರಿದೆ? ಅಸಲಿ ಕತೆ ಬೇರೆನೇ ಇದೆ!

By Suvarna News  |  First Published Aug 7, 2020, 11:12 PM IST

ಜೋಗ ಜಲಪಾತ ಕುರಿತು ನಕಲಿ ವೀಡಿಯೋ ಹರಿದಾಟ/ ಸೋಶಿಯಲ್ ಮೀಡಿಯಾದಲ್ಲಿ ಶೇರೋ ಶೇರು/  ಕಿಡಿಗೇಡಿಗಳ ಕೆಲಸ/ ಅಸಲಿ ನಕಲಿ ಯಾವುದೆಂತೂ ಗೊತ್ತೆ ಆಗಿಲ್ಲ


ಶಿವಮೊಗ್ಗ(ಆ. 07)  ಲೆನಾಡಿನಲ್ಲಿ ನಿಜವಾದ ಮಳೆ ಇದೀಗ ಆರಂಭವಾಗಿದೆಯಷ್ಟೆ. ಬೆನ್ನಲ್ಲೇ ವಿಶ್ವ ವಿಖ್ಯಾತ ಜೋಗ ಜಲಪಾತ ತುಂಬುವ ಕನಸು ಚಿಗುರೊಡೆಯತೊಡಗಿದೆ. ಆದರೆ ಕೆಲವು ಕೆಟ್ಟ ಕಿಡಿಗೇಡಿ ಮನಸ್ಸುಗಳು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ. 

ಜೋಗ ಜಲಪಾತಕ್ಕೆ ಕಳೆ ಬರಬೇಕಾದರೆ ಲಿಂಗನಮಕ್ಕಿ ಜಲಾಶಯ ತುಂಬಬೇಕು. ಜಲಾಶಯ ತುಂಬಿದ ಬಳಿಕ ಅಷ್ಟೂ ನೀರು ಜಲಪಾತದಲ್ಲಿ ದುಮ್ಮಿಕ್ಕಿ ಭೋರ್ಗರೆಯುತ್ತದೆ. ಆದರೆ ಜಲಾಶಯ ತುಂಬದ ಹೊರತು ಲಿಂಗನಮಕ್ಕಿ ಜಲಾಶಯದಿಂದ ಜಲಪಾತದ ನಡುವೆ ಇರುವ 12  ಕಿ. ಮೀ. ದೂರದಲ್ಲಿ ಬಿದ್ದ ಮಳೇ ನೀರೇ ಜಲಪಾತಕ್ಕೆ ಆಸರೆ. ಆ ನೀರೇ ಜಲಪಾತದಲ್ಲಿ ಧುಮ್ಮಿಕ್ಕಿ ಜನರ ಮನಸ್ಸನ್ನು ಸಂತೋಷಗೊಳಿಸಬೇಕು.

Tap to resize

Latest Videos

ಜೋಗ ಜಲಪಾತದ ದೃಶ್ಯ ಕಣ್ಣು ತುಂಬಿಕೊಳ್ಳಿ

ಶುಕ್ರವಾರದವರೆಗೆ ಲಿಂಗನಮಕ್ಕಿ ಜಲಾಶಯ ಶೇ. 42 ರಷ್ಟು ಮಾತ್ರ ತುಂಬಿದೆ. ಜಲಾಶಯದ ಒಳ  ಹರಿವಿನಲ್ಲಿ ಏರಿಕೆ ಕಾಣಿಸಿದರೂ ನಿರೀಕ್ಷಿತ ಮಟ್ಟ ಮುಟ್ಟಿಲ್ಲ. ಹೀಗಾಗಿ ಜಲಾಶಯ ಸಾಮಾನ್ಯ ಮಳೆಗಾಲದಲ್ಲಿ ಇರುವಂತೆ ನೀರು ರಂಗು ತುಂಬಿಸಿಕೊಂಡಿದೆ. ಆದರೆ ಕೆಲವು ಕಿಡಿಗೇಡಿಗಳು ಜಲಾಶಯ ಉಕ್ಕಿ ಹರಿಯುತ್ತಿದ್ದು, ಜಲಪಾತದಲ್ಲಿ ರಾಜಾ, ರಾಣಿ, ರೋರರ್, ರಾಕೆಟ್ ಕಾಣಿಸದಂತೆ ನಯಾಗಾರದ ರೀತಿಯಲ್ಲಿ ನೀರು ಹರಿಯುತ್ತಿರುವ ವೀಡಿಯೋ ಶೇರ್ ಮಾಡುತ್ತಿದ್ದಾರೆ. ವಾರಾಂತ್ಯದಲ್ಲಿ ಈ ರೀತಿಯ ನಕಲಿ ವೀಡಿಯೋಗಳು ಜನರನ್ನು ದಾರಿ ತಪ್ಪಿಸುವ ಸಾಧ್ಯತೆ ಇರುತ್ತದೆ. ವಾಸ್ತವವಾಗಿ ಜೋಗ ಜಲಪಾತದಲ್ಲಿ ಸಾಮಾನ್ಯ ಸ್ಥಿತಿಯಲ್ಲಿ ಇರುವಂತೆ ನೀರು ಧುಮ್ಮಿಕ್ಕುತ್ತಿದೆಯೇ ಹೊರತು ಭಾರೀ ನೀರು ಹರಿಯುತ್ತಿಲ್ಲ.

ಈ ನಕಲಿ ವೀಡಿಯೋ ಬೆಂಗಳೂರಿನಲ್ಲಿ ವಿಶೇಷವಾಗಿ ಓಡಾಡುತ್ತಿದ್ದು, ಜನರನ್ನು ತಪ್ಪು ದಾರಿಗೆ ಎಳೆಯುವ ಸಾಧ್ಯತೆ ಇದೆ. ವಾರಾಂತ್ಯದಲ್ಲಿ ಇಂತಹ ನಕಲಿ ವೀಡಿಯೋಗಳಿಂದ ಜನ ತಪ್ಪು ಗ್ರಹಿಕೆಗೆ ಒಳಗಾಗಿ ಜೋಗದತ್ತ ಧಾವಿಸುವ ಸಾಧ್ಯತೆಯೂ ಇದೆ.

 

click me!